ಕರ್ನಾಟಕ ಸರ್ವೋದಯ ಮಂಡಲ ಬೆಂಗಳೂರು ಇವರು ಗಾಂಧೀಜಿ ಅವರ 154ನೇ ಜಯಂತಿ ನಿಮಿತ್ತ ಕೆಳಗೆ ಕಾಣಿಸಿದ ಯಾವುದೇ ಒಂದು ವಿಷಯದ ಕುರಿತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ.
- ಗಾಂಧಿ ನಮಗೆಷ್ಟು ಬೇಕು?
- ಗಾಂಧಿ ನಂತರದ ಭಾರತ- ನಡೆದಿದ್ದು , ಎಡವಿದ್ದು , ಎಲ್ಲಿ? ಹೇಗೆ ?
- ಗಾಂಧಿ ಇಂದಿಗೂ ಪ್ರಸ್ತುತ – ಏಕೆ ? ಹೇಗೆ ?
- ಯುವಜನರಿಗೆ ಗಾಂಧಿಯನ್ನು ತಲುಪಿಸುವುದು ಹೇಗೆ ?
- ಸಾಮಾಜಿಕ ಮಾಧ್ಯಮಗಳಲ್ಲಿ ಗಾಂಧಿ ನಿಂದನೆ – ಪರಿಹಾರ ಮಾರ್ಗಗಳು ?
ಎಲ್ಲರೂ ಸರಿ. ಆದರೆ ಯಾವುದೂ ಸರಿ ಇಲ್ಲ -ಪ್ರಸಕ್ತ ಸ್ಥಿತಿ – ಗತಿಗಳ ಸಮೀಕ್ಷೆ
ಐದು ನೂರು ಪದಗಳ ಮಿತಿಯಲ್ಲಿ ಕನ್ನಡ ಅಥವಾ ಇಂಗ್ಲೀಷ್ ನಲ್ಲಿ ಬರಹಗಳನ್ನು ಆಯೋಜಕರು ,ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ, ಕರ್ನಾಟಕ ರಾಜ್ಯ ಸರ್ವೋದಯ ಮಂಡಲ, ವಲ್ಲಭ ನಿಕೇತನ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು- 560001 ಈ ವಿಳಾಸಕ್ಕೆ ಅಥವಾ sarvodayasuresh @gmail.com ಗಾಗಲಿ 2023 ಸೆಪ್ಟೆಂಬರ್15 ರ ಒಳಗೆ ಕಳುಹಿಸಲು ಕೋರಿದೆ.
ಯಾವುದೇ ವಯಸ್ಸಿನ ಮಿತಿ ಇಲ್ಲ ; ಬರೆದವರ ಪೂರ್ತಿ ವಿಳಾಸ ,ಮೊಬೈಲ್ ಸಂಖ್ಯೆ ಹಾಗೂ ಇ ಮೇಲ್ ಕಳುಹಿಸಬೇಕು ; ಉತ್ತಮ ಬಹುಮಾನಿತ ಬರಹಗಳನ್ನು ಯಥಾವಕಾಶ ಪ್ರಕಟಿಸಲಾಗುವುದು.
ವಿವರಗಳಿಗೆ 94480 27400 (ಸುರೇಶ್), 99013 77911 (ದೊಡ್ಡಯ್ಯ),
90356 18076 (ಗುರುರಾಜ್) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.