ಕುಳಲಿಯಲ್ಲಿ ರಾಜ್ಯ ಮಟ್ಟದ ಜನಪದ‌ ಸಂಗೀತೋತ್ಸವ

Must Read

  ದಿ.4ರಂದು.3 ಜಿಲ್ಲೆಯ ಕಲಾವಿದರ ಸಭೆ

ಮುಧೋಳ] – ಮುಧೋಳ ತಾಲೂಕಿನ ಸುಕ್ಷೇತ್ರ ಗುರುನಾಥಾರೂಢರ ಮಠದ ಸಹಕಾರದೊಂದಿಗೆ ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಆಶ್ರಯದಲ್ಲಿ ಜನವರಿ 15 ರಿಂದ 24ರ ವರೆಗೆ 10 ದಿನಗಳ ಕಾಲ ರಾಜ್ಯಮಟ್ಟದ ಜನಪದ ಸಂಗೀತೋತ್ಸವ ನಡೆಯಲಿದೆ ಎಂದು ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಶರಣಬಸವ ಶಾಸ್ತ್ರಿಗಳು ತಿಳಿಸಿದರು.

ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ನಮ್ಮ ಗ್ರಾಮೀಣ ಪ್ರದೇಶದ ನೆಲಮೂಲ ಸಂಸ್ಕೃತಿಯನ್ನು ಉಳಿಸುವಂತಹ ಸತ್ವಯುತವಾದ ಜನಪದ ಸಂಗೀತ,  ಸಾಹಿತ್ಯ,  ವಾದ್ಯಮೇಳ ಸೇರಿದಂತೆ ರಚನಾತ್ಮಕ ಕಾರ್ಯಕ್ರಮಗಳು ಈ ಉತ್ಸವದಲ್ಲಿ ನಡೆಯಲಿದೆ. ಈ ಉತ್ಸವದಲ್ಲಿ ಕವಿಗೋಷ್ಠಿ, ಶಿವ ಭಜನೆ, ಡೊಳ್ಳಿನ ಹಾಡು, ಶೋಬಾನೆ, ಬೀಸುಕಲ್ಲಿನ ಪದ, ಗೀಗಿ ಪದ, ಚೌಡಿಕೆ ಪದ, ಹಂತಿ ಹಾಡು, ರಿವಾಯಿತ,  ಏಕದಾರಿ, ತತ್ವಪದಗಳು, ಭಕ್ತಿ ಸಂಗೀತ, ಭರತನಾಟ್ಯ, ವಚನ ಗಾಯನ,  ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಡೊಳ್ಳಿನ ವಾಲಗ, ಕರಡಿವಾದನ, ಹಲಗೆವಾದನ, ತಾಸೆವಾದನ, ಸಂಬಾಳ ವಾದನ, ಖಣಿವಾದನ ಸೇರಿದಂತೆ ಎಲ್ಲ ಕಲಾ ಪ್ರಕಾರದ ಕಲೆಗಳ ಪ್ರದರ್ಶನಗಳು ಈ ವೇದಿಕೆಯಲ್ಲಿ 10 ದಿನಗಳ ಕಾಲ ನಡೆಯುವುದು. ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯಮಟ್ಟದ ಗೌರವ ಪ್ರಶಸ್ತಿಗಳನ್ನು ನೀಡಲಾಗುವುದು.

ಉತ್ತರ ಕರ್ನಾಟಕದ ಎಲ್ಲ ಕಲಾವಿದರನ್ನು ಈ ವೇದಿಕೆಗೆ ತರುವ ಕುರಿತು ಹಾಗೂ ಅತಿಥಿಗಳನ್ನ ಉಪನ್ಯಾಸಕರನ್ನು ಆಹ್ವಾನಿಸುವ ಕುರಿತು ಮತ್ತು ಕಾರ್ಯಕ್ರಮವನ್ನು ವ್ಯವಸ್ಥಿತ ರೀತಿಯಲ್ಲಿ ನಡೆಸುವ ಹಿನ್ನೆಲೆಯಲ್ಲಿ 2026 ಜನವರಿ ರವಿವಾರ ದಿ. 4 ರಂದು ಸದ್ಗುರು ಶ್ರೀ ಗುರುನಾಥಾರೂಢರ ಮಠದ ಸಾಂಸ್ಕೃತಿಕ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಬಾಗಲಕೋಟೆ, ಬೆಳಗಾವಿ, ವಿಜಯಪುರ 3 ಜಿಲ್ಲೆಗಳ ಕಲಾವಿದರ ಸಭೆಯನ್ನು ಕರೆಯಲಾಗಿದೆ. ಎಲ್ಲ ಕ್ಷೇತ್ರಗಳ ಕಲಾವಿದರು, ಸಂಘ.ಸಂಸ್ಥೆಗಳ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ಸಲಹೆ ಸೂಚನೆಗಳನ್ನು ನೀಡಬೇಕೆಂದು ಶರಣಬಸವ ಶಾಸ್ತ್ರಿಗಳು ಕೋರಿದ್ದಾರೆ.

ಈ ಸಂದರ್ಭದಲ್ಲಿ ಬಸವ ಜಾನಪದ ಕಲಾ ಸಂಸ್ಥೆಯ ಅಧ್ಯಕ್ಷ ರಮೇಶ ಸೋಲೋನಿ, ಸದಸ್ಯ ಪಿ ವಿಜಯಕುಮಾರ್, ಪಿಕೆಪಿಎಸ್ ನಿರ್ದೇಶಕ ಮುತ್ತಪ್ಪ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group