- Advertisement -
ಸಿಂದಗಿ: ಬೆಂಗಳೂರು ಅರಮನೆ ಮೈದಾನ ದಲ್ಲಿ ಕರ್ನಾಟಕ ಛಾಯಾಗ್ರಾಹಕರ ಸಂಘ ಹಮ್ಮಿಕೊಂಡಿದ್ದ 8ನೇ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಸಿಂದಗಿಯ ಯಂಪುರೆ ಸ್ಟುಡಿಯೋ ಮಾಲೀಕ ಪಂಡಿತ ಯಂಪುರೆ, ಅನು ಸ್ಟುಡಿಯೋದ ಅಂಬರೀಷ್ ಅಲ್ದಿ, ಗೋಲಗೇರಿ ಗೊಲ್ಲಾಳೇಶ್ವರ ಸ್ಟುಡಿಯೋದ ಕಲ್ಯಾಣಿ ಯಂಕಂಚಿ, ಆಲಮೇಲದ ಅರವಿಂದ ಸ್ಟುಡಿಯೋದ ಅರವಿಂದ ಕುಲಕರ್ಣಿ ಇವರುಗಳಿಗೆ ರಾಜ್ಯ ಮಟ್ಟದ ಛಾಯಾಗ್ರಾಹಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಎಸ್ ಪರಮೇಶಿ, ಉಪಾದ್ಯಾಕ್ಷ ರವಿಕುಮಾರ, ಸದಸ್ಯ ಹಿರೇಮಠ, ಸಿಂದಗಿ ಸಂಘದ ಖಜಾಂಚಿ ಪುಟ್ಟು ಸಂಗಮ ಸೇರಿದಂತೆ ವಿವಿಧ ಜಿಲ್ಲೆಯ ಪದಾಧಿಕಾರಿಗಳು ಇದ್ದರು.