Homeಸುದ್ದಿಗಳುಕನಾ೯ಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ ವತಿಯಿಂದ ರಾಜ್ಯಮಟ್ಟದ ಗಾಯನ

ಕನಾ೯ಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ ವತಿಯಿಂದ ರಾಜ್ಯಮಟ್ಟದ ಗಾಯನ

spot_img

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ವತಿಯಿಂದ ರಾಜ್ಯ ಮಟ್ಟದ 2ನೇ ಹಂತದ ಗಾಯನ ಸ್ಪರ್ಧೆಯನ್ನು ದಿನಾಂಕ 10- 8-2025 ರ ಭಾನುವಾರ ಏರ್ಪಡಿಸಲಾಗಿದೆ.

ಈ ಮೊದಲು ಮೊದಲ ಹಂತದ ಕಾರ್ಯಕ್ರಮವು ಚಿಕ್ಕಮಗಳೂರಿನಲ್ಲಿ ಅದ್ದೂರಿಯಾಗಿ ನಡೆದಿತ್ತು. 2ನೇ ಹಂತದಲ್ಲಿ ಗಾಯಕ ಗಾಯಕಿಯರಿಗೆ ಹಾಡುಗಳನ್ನು ಹಂಚಿಕೆ ಮಾಡಿ ಅವುಗಳನ್ನು ಅವರು ಹಾಡಿ ವಿಡಿಯೋ ಮಾಡಿ ಕಳಿಸುವರು. ಈ ಹಾಡುಗಳನ್ನು ಆಲಿಸಿ ತೀರ್ಪುಗಾರರಾಗಿ ಖ್ಯಾತ ಗಾಯಕಿ ಹಾಸನದ ಶ್ರೀಮತಿ ವಾಣಿ ನಾಗೇಂದ್ರ ಮತ್ತು ಚಿಕ್ಕಮಗಳೂರಿನ ಖ್ಯಾತ ತಬಲ ವಾದಕರು ಸ್ವರೂಪ ಭಾರಧ್ವಾಜ್ ಅಂಕ ನೀಡುವರು.

ಕರ್ನಾಟಕ ರಾಜ್ಯ ಬರಹಗಾರರ ಸಂಘದ ಗೌ.ಅಧ್ಯಕ್ಷರು ಗೊರೂರು ಆನಂತರಾಜು ಅಧ್ಯಕ್ಷತೆ ಮತ್ತು ರಾಜ್ಯಾಧ್ಯಕ್ಷರು ಮಧು ನಾಯ್ಕ್ ಲಂಬಾಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು, ಈ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ಆಯ್ಕೆ ಆಗಿರುವ 38 ಮಂದಿ ಗಾಯಕ ಗಾಯಕಿಯರು ಹಾಡುಗಾರಿಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group