ಬೀದರ್‌ನಲ್ಲೊಂದು ಅಮಾನವೀಯ ಘಟನೆ
ಬೀದರ – ಮೂರನೇ ಮಹಡಿಯಿಂದ 7 ವರ್ಷದ ಪುಟ್ಟ ಮಗುವನ್ನು ಮಲತಾಯಿಯೇ ನೂಕಿ ಕೊಲೆ ಮಾಡಿರುವ ಅಮಾನವೀಯ ಘಟನೆ ಬೀದರನಲ್ಲಿ ನಡೆದಿದೆ.
7 ವರ್ಷದ ಮಗಳನ್ನೇ ಕೊಂದ ಆರೋಪಿ ಮಲತಾಯಿ ಅರೆಸ್ಟ್ ಆಗಿದ್ದಾಳೆ. ಬೀದರ್ ನಗರದ ಆದರ್ಶ ಕಾಲೋನಿಯಲ್ಲಿ ಆ.27ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪಕ್ಕದ ಮನೆಯವರು ಸಿಸಿಟಿವಿ ದೃಶ್ಯ ಕಳುಹಿಸಿದ ಬಳಿಕ ಮಲತಾಯಿ ಕೃತ್ಯ ಬೆಳಕಿಗೆ ಬಂದಿದೆ. ಮಲತಾಯಿಯ ಕ್ರೌರ್ಯದಿಂದ ಬಲಿಯಾದ 7 ವರ್ಷದ ಬಾಲಕಿ ಸಾನ್ವಿ
ಮೃತ ಸಾನ್ವಿ ಮಲತಾಯಿ ರಾಧಾ ಎಂಬಾಕೆಯ ವಿರುದ್ಧ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಮೃತ ಬಾಲಕಿಯ ಅಜ್ಜಿ ವಿಜಯಶ್ರೀ ಸುರೇಶ ತೂಗಾಂವೆ ದೂರಿನ ಮೇರೆಗೆ ಕೇಸ್ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ನಡೆಸಿದ್ದಾರೆ.

