ವಿಷಕಾರಿ ಕೆಮಿಕಲ್ ಫ್ಯಾಕ್ಟರಿಗಳನ್ನ ಬಂದ್ ಮಾಡಿ ತೋರಿಸಿ ಪರಿಸರ ಸಚಿವರೇ…

Must Read

ಬೀದರ – ಬೀದರ್ ಜಿಲ್ಲೆ ಹುಮ್ನಾಬಾದ್ ತಾಲೂಕಿನಲ್ಲಿ ಕೆಮಿಕಲ್ ಫ್ಯಾಕ್ಟರಿಗಳಿಂದ ಜನರ ಜೀವ ಹೋಗುತ್ತಿದೆ. ಚರ್ಮ ರೋಗ ಹಾಗೂ ಇನ್ನಿತರ ರೋಗಗಳಿಂದ ಇಲ್ಲಿನ ಜನ ಬಳಲುತ್ತಿದ್ದಾರೆ. ನಿಯಮ ಉಲ್ಲಂಘಿಸಿ ನೂರಾರು ಕೆಮಿಕಲ್ ಫ್ಯಾಕ್ಟರಿಗಳು ತಲೆ ಎತ್ತಿವೆ. ಈ ಬಗ್ಗೆ ಗಮನ ಹರಿಸಿ ಪರಿಸರ ಸಚಿವರೇ ಎಂದು ಬಿಗ್ ಬಾಸ್ ಅಭಿಮಾನಿ ಭೀಮರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ವಾಯುಮಾಲಿನ್ಯ ಆಗುತ್ತಿರುವುದು ಬಿಗ್‌ಬಾಸ್‌ನಿಂದ ಅಲ್ಲ, ವಿಷ ಬಿಡುತ್ತಿರುವ ಕೆಮಿಕಲ್ ಫ್ಯಾಕ್ಟರಿಗಳಿಂದ. ಹುಮ್ನಾಬಾದ್ ಜನರ ಜೀವಕ್ಕೆ ಬೆಲೆ ಇಲ್ವಾ..? ಕೆಮಿಕಲ್ ಫ್ಯಾಕ್ಟರಿ ಹಾವಳಿಯಿಂದ ಬೇಸತ್ತು ಜನ ಊರು ಬಿಟ್ಟಿದ್ದಾರೆ. ನಿಮ್ಮದೇ ಜಿಲ್ಲೆಯಲ್ಲಿ ಇಷ್ಟೊಂದು ವಾಯುಮಾಲಿನ್ಯ ಆಗುತ್ತಿದ್ದರೂ ಕ್ರಮಕ್ಕೆ ಮುಂದಾಗುತ್ತಿಲ್ಲ ಯಾಕೆ ಎಂದು ಅರಣ್ಯ ಹಾಗೂ ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಯವರನ್ನು ಪ್ರಶ್ನೆ ಮಾಡಿದ್ದಾರೆ.

    ಬೆಂಗಳೂರಿಗೆ ತೋರಿಸುವ ಕಾಳಜಿ, ಬೀದರ್‌ಗೆ ಯಾಕಿಲ್ಲ ಸಚಿವರೇ.. ಎಂದು ಪ್ರಶ್ನೆ ಮಾಡಿರುವ ಭೀಮರೆಡ್ಡಿ, ನಿಮ್ಮ ಪ್ರಾಮಾಣಿಕತೆ ಹಾಗೂ ಕರ್ತವ್ಯ ನಿಷ್ಠೆಯನ್ನು ಬೀದರ ಜಿಲ್ಲೆಯಲ್ಲೂ ತೋರಿಸಿ ಎಂದು ಕಿಡಿ ಕಾರಿದ್ದಾರೆ

   ಹುಮನಾಬಾದ ತಾಲೂಕಿನ ಸಿಂಧನಕೇರಾ ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ಘಟಕದಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ. ವಿಷ ಬಿಡುತ್ತಿರುವ ಕೆಮಿಕಲ್ ಫ್ಯಾಕ್ಟರಿಗಳನ್ನು ಬಂದ್ ಮಾಡಿ ತೋರಿಸಿ ಎಂದು ಅವರು ಸವಾಲು ಹಾಕಿದ್ದಾರೆ.

ವರದಿ : ನಂದಕುಮಾರ ಕರಂಜೆ, ಬೀದರ

Latest News

ಗಾರ್ಡನ್ ಅಭಿವೃದ್ದಿಗೆ  ರೂ.೨೩.೩೯ ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಚಾಲನೆ

ಸಿಂದಗಿ; ಆಯಾ ವಾರ್ಡುಗಳು ಸಾರ್ವಜನಿಕರು, ವಯೋ ವೃದ್ಧರು ವಾಯು ವಿಹಾರಕ್ಕೆ ಅನುಕೂಲವಾಗಲೆಂದು ಪಟ್ಟಣದ ಎಲ್ಲ ಉದ್ಯಾನವನಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಪಟ್ಟಣದಲ್ಲಿ ಒಟ್ಟು ೭೨...

More Articles Like This

error: Content is protected !!
Join WhatsApp Group