‘ಕಟ್ಟಿಮನಿ ಕಥಿ ಹೇಳೂಣು’ ಮಾಲಿಕೆಯಲ್ಲಿ ವಿದ್ಯಾರ್ಥಿನಿಯರಿಗೆ ಕಥಾಸ್ಪರ್ಧೆ

Must Read

ಬೆಳಗಾವಿ – ದಿ. 11 ರಂದು ಬೆಳಗಾವಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಐಕ್ಯೂಎಸಿ ಘಟಕದ ಅಡಿಯಲ್ಲಿ ಕನ್ನಡ ವಿಭಾಗ ಹಾಗೂ ಕರ್ನಾಟಕ ಸರ್ಕಾರ, ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಇವುಗಳ ಸಹಯೋಗದಲ್ಲಿ “ಕಟ್ಟೀಮನಿ ಕಥೀ ಹೇಳೂಣು” ಮಾಲಿಕೆಯಲ್ಲಿ ವಿದ್ಯಾರ್ಥಿನಿಯರಿಗೆ ಕಥಾ ಸ್ಪರ್ಧೆ ಏರ್ಪಡಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಡಾ.ಕೆ.ಆರ್ ಸಿದ್ದಗಂಗಮ್ಮ ಸದಸ್ಯರು, ಬಸವರಾಜ ಕಟ್ಟೀಮನಿ ಪ್ರತಿಷ್ಠಾನ,ಬೆಳಗಾವಿ ಇವರು ಆಗಮಿಸಿ ಕತೆ ಓದುವ ಕಲೆಯ ಬಗ್ಗೆ ತಿಳಿಸುತ್ತಾ,ಯುವಜನತೆ ಸಾಹಿತ್ಯದ ಅಧ್ಯಯನದಲ್ಲಿ ತೊಡಗಬೇಕು, ಕಟ್ಟೀಮನಿಯವರ ಅದ್ಭುತ ಸಾಹಿತ್ಯವನ್ನು ರಚಿಸಿ ನಮಗೆ ಕನ್ನಡ ಆಸ್ತಿಯಾಗಿ ಬಿಟ್ಟು ಹೋಗಿದ್ದಾರೆ ಅವರು ಚಿಂತನೆಗಳನ್ನು ಅರ್ಥೈಸಿಕೊಂಡು ನಡೆಯುವುದು ಮುಖ್ಯವಾಗಿದೆ. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಎಸ್ ಗಂಗನಳ್ಳಿ ಅವರು ಬಸವರಾಜ ಕಟ್ಟೀಮನಿಯವರ ಜೀವನ, ಸಾಹಿತ್ಯಿಕ ಸಾಧನೆ, ವ್ಯಕ್ತಿತ್ವ ಹಾಗೂ ಅವರ ಪ್ರಗತಿಪರ ಚಿಂತನೆಗಳ ಕುರಿತು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಹೇಳಿದರು.

ವಿದ್ಯಾರ್ಥಿನಿಯರಾದ ಕು. ಅಕ್ಷತಾ ಮೇತ್ರಿ, ಕು.ನಿರ್ಮಲಾ ರಾಘನ್ನವರ, ಕು. ಕಾವೇರಿ ಭಜಂತ್ರಿ ಮತ್ತಿತರ ಅನೇಕರು ಸ್ಪರ್ಧೆಯಲ್ಲಿ ಕಥೆಗಳನ್ನು ಹೇಳಿದರು.

ಕಥಾಸ್ಪರ್ಧೆಯಲ್ಲಿ ಭಾಗವಹಿದವರಿಗೆ ಪುಸ್ತಕ ಬಹುಮಾನ ಮತ್ತು ಪ್ರಮಾಣ ಪತ್ರಗಳ ವಿತರಣೆಯನ್ನು ಮುಖ್ಯ ಅತಿಥಿಗಳು, ಅಧ್ಯಕರು ವಿತರಣೆ ಮಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಆರ್ ಪಾಟೀಲ ಅವರು ವಹಿಸಿ, ಓದುವ ಹವ್ಯಾಸವನ್ನು ಬೆಳೆಸಿಕೊಂಡು ಕಥೆ ಹೇಳುವ ಕಲೆಯಲ್ಲಿ ನಮ್ಮ ಹಿರಿಯರು ಕಲಿಯದಿದ್ದರೂ ಸರಾಗವಾಗಿ ಹೇಳುತ್ತಿದ್ದರು ಕಥೆಯನ್ನು ನಮ್ಮ ಭಾಷೆ, ಶೈಲಿಯಲ್ಲಿ ಹೇಳುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಪ್ರಾರ್ಥನೆಯನ್ನು ಕು.ಪ್ರಗತಿ ಮುತ್ತೂರು ಹಾಗೂ ಸಂಗಡಿಗರು ಹಾಡಿದರು. ಸ್ವಾಗತ ಮತ್ತು ಪರಿಚಯವನ್ನು ಪ್ರಕಾಶ ಮಬನೂರ ಉಪನ್ಯಾಸಕರು ಮಾಡಿದರು. ವಂದನಾರ್ಪಣೆಯನ್ನು ಕು. ದೀಪಿಕಾ ಪಾಟೀಲ ಮಾಡಿದರು. ನಿರೂಪಣೆಯನ್ನು ಕು.ಪ್ರತಿಭಾ ಕಲ್ಲಿ ,ಮಾಡಿದರು, ಕಾರ್ಯಕ್ರಮದಲ್ಲಿ ಡಾ. ಪಿ.ಎ ಘಂಟಿ, ಡಾ.ಪ್ರವೀಣ್ ಕೋರ್ಬು, ಡಾ. ನಾಗೇಶ ಗಾಡಿವಡ್ಡರ, ಪಿ.ಪಿ ಜಾಧಾವ ಸರ್ ಮತ್ತಿತರರು ಎಲ್ಲ ಬೋಧಕ ಮತ್ತು ಆಡಳಿತ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಕಾಲೇಜಿನ ರೇಂಜರ್ ತಂಡದವರು ಮಾಡಿದರು. ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿಬಂದಿತು.

LEAVE A REPLY

Please enter your comment!
Please enter your name here

Latest News

ಸಿಂದಗಿ : ಆರೆಸ್ಸೆಸ್ ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ

ಸಿಂದಗಿ; ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದ ಹಾಗೂ ದೀಪಾವಳಿ ಉತ್ಸವದ ಅಂಗವಾಗಿ ಸಾವಿರಕ್ಕೂ ಹೆಚ್ಚು ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.ಶನಿವಾರ...

More Articles Like This

error: Content is protected !!
Join WhatsApp Group