ಮಾನವ ಸಂಪನ್ಮೂಲದ ಆದರ್ಶ ಬಳಕೆಯ ಜೊತೆಗೆ ಕಟ್ಟುನಿಟ್ಟಿನ ನಿಯಂತ್ರಣ ಅವಶ್ಯ- ಅಜಿತ್ ಕದಮ

Must Read

ಸವದತ್ತಿ: ಭಾರತದಲ್ಲಿರುವ ಮಾನವ ಸಂಪನ್ಮೂಲವನ್ನು ಆದರ್ಶ ಮಟ್ಟದಲ್ಲಿ ಬಳಸುವುದರ ಜೊತೆಗೆ ಜನಸಂಖ್ಯೆಯ ನಿಯಂತ್ರಣದ ಮೂಲಕ ದೇಶದಲ್ಲಿ ಆರ್ಥಿಕ ಅಭಿವೃದ್ದಿಯನ್ನು ಸಾಧಿಸುವುದು ಅವಶ್ಯವಾಗಿದೆ ಎಂದು ಬೆಳಗಾವಿಯ ಕೆ.ಕೆ. ಕೊಪ್ಪ, ಎಸ್.ಎಸ್.ಸಿ.ಎ.ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಅಜಿತ್ ಕದಮ ನುಡಿದರು.

ಅವರು ಪಟ್ಟಣದ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಏರ್ಪಡಿಸಿದ್ದ “ ವಿಶ್ವ ಜನಸಂಖ್ಯಾ ದಿನ”ದ ಅಂಗವಾಗಿ “ಭಾರತದಲ್ಲಿ ಜನಸಂಖ್ಯೆ ಬೆಳವಣಿಗೆಯ ಅಪಾಯ ಮತ್ತು ಅವಕಾಶ” ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಭಾರತವು ಹೊಂದಿರುವ ಮಾನವ ಸಂಪನ್ಮೂಲಕ್ಕೆ ಸರಿಯಾಗಿ ಶಿಕ್ಷಣ, ತರಬೇತಿ ಮುಂತಾದ ಸೌಲಭ್ಯಗಳನ್ನ ಒದಗಿಸುವುದರ ಮೂಲಕ ಇರುವ ಅಧಿಕ ಮಾನವ ಸಂಪನ್ಮೂಲವನ್ನೆ ಅಭಿವೃದ್ಧಿಗೆ ಅವಕಾಶವನ್ನಾಗಿ ಬಳಸಬೇಕು. ದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಮಾಡಲು ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತರುವುದು ಅವಶ್ಯವಿದೆ ಎಂದು ಅಭಿಪ್ರಾಯಪಟ್ಟರು.

ನಂತರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಮಾರುತಿ ಎ. ಡೊಂಬರ ವಹಿಸಿದ್ದರು, ಶಾಂಭವಿ ಬಡಿಗೇರ ಪ್ರಾರ್ಥಿಸಿದರು, ಪ್ರೊ.ಎಮ್.ಸಿ. ಹಾದಿಮನಿ ಸ್ವಾಗತಿಸಿದರು, ಡಾ.ಎನ್.ಎ.ಕೌಜಗೇರಿ ಪರಿಚಯಿಸಿದರು. ಡಾ. ಅರುಂಧತಿ ಎಫ್. ಬದಾಮಿ ವಂದಿಸಿದರು, ಪ್ರೊ, ವಿಜಯ ಮೀಶಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಮತ್ತು ರಾಜ್ಯದ ವಿವಿದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಉಪಸ್ಥಿತರಿದ್ದರು.

Latest News

ಐತಿಹಾಸಿಕ ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆ ಒಂದು ಭೇಟಿ

ನಾವು ಶಿರಸಿಯಿಂದ ಬನವಾಸಿ ಬಸ್ಸು ಹತ್ತಿದಾಗಲೇ ನಾಲ್ಕೂವರೆ ಆಗಿತ್ತು. ಶಾಲೆ ಬಿಡುವ ವೇಳೆ ಬಸ್ ರಷ್ ಆಗಿತ್ತು. ಬನವಾಸಿಯಲ್ಲಿ ಇಳಿದಾಗ ಐದೂವರೆ ಆಗಿತ್ತು. ಕ್ಯಾಂಟಿನ್‌ನಲ್ಲಿ ಟೀ...

More Articles Like This

error: Content is protected !!
Join WhatsApp Group