Homeಸುದ್ದಿಗಳುವಿದ್ಯಾರ್ಥಿಗಳು ಮೊಬೈಲ್ ಬದಿಗಿಟ್ಟು ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು

ವಿದ್ಯಾರ್ಥಿಗಳು ಮೊಬೈಲ್ ಬದಿಗಿಟ್ಟು ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು

ನೇಸರಗಿ-ವಿದ್ಯಾರ್ಥಿಗಳು ಮೊಬೈಲ್ ಬದಿಗಿಟ್ಟು ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ಚಾರಿತ್ರಿಕ ಕಾದಂಬರಿಕಾರ ಯ.ರು.ಪಾಟೀಲ ಹೇಳಿದರು.

ಗ್ರಾಮದ ನೇಸರಗಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಗುರುವಾರ ದಿ.೭ ರಂದು ಪತ್ರಕರ್ತ ಹಾಗೂ ಸಾಹಿತಿ ಸಿ.ವಾಯ್.ಮೆಣಸಿನಕಾಯಿ ಅವರು ರಚಿಸಿದ “ನಾ ಹೋದರೆ ನಿಮಗೆ ಸುಖ” ಮತ್ತು “ಸಾಹಿತ್ಯ ಸಂಪದ” ಎರಡು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಾಹಿತ್ಯ ಸಂಪದ ಕೃತಿ ಪರಿಚಯಿಸಿ ಮಾತನಾಡಿ, ಇಂದಿನ ಯುವಕರು ಕೆಟ್ಟ ಹವ್ಯಾಸಗಳಿಂದ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಒಳ್ಳೆಯ ಹವ್ಯಾಸಗಳಾದ ಪುಸ್ತಕ, ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕನ್ನಡ ಭಾಷಾಭಿಮಾನ ಬೆಳೆಸಿಕೊಂಡು ಕನ್ನಡ ಅಂಕಿಗಳ ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕೆಂದರು.

ನಾ ಹೋದರೆ ನಿನಗೆ ಸುಖ ಕೃತಿಯನ್ನು ಪರಿಚಯಿಸಿ ಕಾದರವಳ್ಳಿ ಎಸ್.ವಿ.ಕುಲಕರ್ಣಿ ಸರಕಾರಿ ಪ್ರೌಢಶಾಲೆ ಅಧ್ಯಾಪಕ ಡಾ.ಗಜಾನನ ಸೊಗಲನ್ನವರ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯಲ್ಲಿ ಮುಂದಿರಬೇಕಾದರೆ ಪುಸ್ತಕಗಳು ಸಹಕಾರಿಯಾಗಿವೆ.ಪುಸ್ತಕ ಓದಿ ಜ್ಞಾನ ಪಡೆದುಕೊಳ್ಳಬೇಕು. ಕನ್ನಡ ಭಾಷೆ ಬೆಳವಣಿಗೆಗೆ ಕನ್ನಡ ಪುಸ್ತಕಗಳು ಹೆಚ್ಚಾಗಿ ಪ್ರಕಟವಾಗಬೇಕು. ನಾ ಹೋದರೆ ನಿನಗೆ ಸುಖ ಕೃತಿ ಬಹುಸಂಖ್ಯಾತ ಜನರಿಗೆ ಇಷ್ಟವಾಗುವ ವಿಷಯ ಹೊಂದಿದೆ ಎಂದರು.

ಸಾಹಿತಿ ಶಿ.ಗು.ಕುಸಗಲ್ಲ ಮಾತನಾಡಿ, ಸಾಹಿತ್ಯ ನಿಂತ ನೀರಲ್ಲ. ಸಾಹಿತಿಗಳಾಗಬೇಕಾದರೆ ಸತತ ಸಾಧನೆ ಮಾಡಬೇಕು. ಹೆಚ್ಚಿನ ಪುಸ್ತಕ ಓದಿ ಜ್ಞಾನ ವಿಕಾಸಗೊಳಿಸಬೇಕೆಂದರು.

ನ್ಯಾಯವಾದಿ ಎಂ.ವಾಯ್.ಸೋಮಣ್ಣವರ ಮಾತನಾಡಿ, ಸಾಹಿತ್ಯ ರಚನೆಗೆ ಬಹಳಷ್ಟು ಶ್ರಮ, ಪ್ರಯತ್ನ ಬೇಕಾಗುತ್ತದೆ. ಸಿ.ವಾಯ್.ಮೆಣಸಿನಕಾಯಿಯರು ಪುಸ್ತಕ ರಚನೆಗಿಳಿದು ಒಳ್ಳೆಯ ಕೃತಿ ಹೊರ ತಂದಿದ್ದಾರೆAದರು.
ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಫ್.ಡಿ.ಗಡ್ಡಿಗೌಡರ ಮಾತನಾಡಿ, ಸಿ.ವಾಯ್.ಮೆಣಸಿನಕಾಯಿಯವರು ರಚಿಸಿದ ಕೃತಿಗಳು ಓದಿಸಿಕೊಂಡು ಹೋಗುತ್ತವೆ. ಎಲ್ಲರೂ ಪುಸ್ತಕ ಕೊಂಡು ಓದುವ ಸಂಸ್ಕೃತಿ ಬೆಳೆಸಿಕೊಂಡು ಪುಸ್ತಕ ರಚನೆಕಾರರಿಗೆ ಪ್ರೋತ್ಸಾಹ ನೀಡಬೇಕೆಂದರು.

ಕೃತಿ ರಚನೆಕಾರ ಸಿ.ವಾಯ್.ಮೆಣಸಿನಕಾಯಿ ಮಾತನಾಡಿ ಇಂದು ಬಿಡುಗಡೆಯಾದ ಎರಡು ಕೃತಿಗಳು ಇಂದಿನ ಯುವಕರಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬಲ್ಲವು. ಪುಸ್ತಕ ಓದುವದರಿಂದ ದೇಶದ ಇತಿಹಾಸ ಪರಿಚಯ, ಪ್ರಚಲಿತ ವಿದ್ಯಮಾನ ಅರಿಯಲು ಸಹಾಯಕ ಎಂದರು.

ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿಗಳಾದ ರವೀಂದ್ರ ಬಾನಿ, ಗ್ರಾಮ ಪಂಚಾಯತಿ ಅಧ್ಯಕ್ಷ ವೀರಭದ್ರ ಚೋಬಾರಿ, ಗ್ರಾ.ಪಂ ಸದಸ್ಯರಾದ ತೇಜಪ್ಪಗೌಡ ಪಾಟೀಲ, ಮತ್ತಿಕೊಪ್ಪ ಪಿಕೆಪಿಎಸ್ ಉಪಾದ್ಯಕ್ಷ ಅಡಿವೆಪ್ಪ ಹೊಸಮನಿ, ಬಸವರಾಜ ಬಡಿಗೇರ, ಗಂಗಾಧರ ಬೊಂಗಾಳೆ, ವೀರಭದ್ರ ಅಂಗಡಿ, ಶಿವಲಿಂಗಪ್ಪ ಕಂಠಿ, ಪ್ರಾದ್ಯಾಪಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು. ಡಾ.ಮೀನಾಕ್ಷಿ ಮಡಿವಾಳರ ಸ್ವಾಗತಿಸಿದರು. ಶಿಕ್ಷಕ ಸಂತೋಷ ಪಾಟೀಲ ನಿರೂಪಿಸಿದರು. ಮಂಜುನಾಥ ಕಾಂಬಳೆ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group