ಸವದತ್ತಿ: ‘ವಿದ್ಯಾರ್ಥಿಗಳಾದವರು ಮೊದಲು ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕು ಮುಖಕ್ಕೆ ಮಾಸ್ಕ ಧರಿಸಿಕೊಂಡೇ ಶಾಲೆಗೆ ಬರಬೇಕು ನಂತರ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ತಮ್ಮ ಮನೆಯಲ್ಲಿನ ಎಲ್ಲರಿಗೂ ಮಹಾಮಾರಿ ಕೊರೊನಾ ಕೊವಿಡ್ 19 ರೋಗದ ಬಗ್ಗೆ ಜಾಗ್ರತೆವಹಿಸಿಕೊಳ್ಳಬೇಕು ಮನೆಯಲ್ಲಿನ ಎಲ್ಲರಿಗೂ ಇದರ ಬಗ್ಗೆ ಲಕ್ಷಣಗಳ ಬಗ್ಗೆ ಈ ರೋಗ ತಗುಲದಂತೆ ಮುಂಜಾಗ್ರತೆ ವಹಿಸಿ 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಬೇಕು’ ಎಂದು ನ್ಯಾಯಾಧೀಶರಾದ ಸಂದೀಪ ಪಾಟೀಲ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಸ್ಥಳೀಯ ಎಸ್ ಕೆ ಹೈಸ್ಕೊಲ ಆವರಣದಲ್ಲಿ ತಾಲೂಕು ಕಾನೂನು ಸೇವಾಸಮಿತಿ ಹಾಗೂ ನ್ಯಾಯವಾದಿಗಳ ಸಂಘ ವಿಶೇಷ ಕಾನೂನು ಜಾಗೃತಿ ಅಭಿಯಾನ ಮತ್ತು ಕಾನೂನು ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ನ್ಯಾಯಾಧೀಶ ಜಿ ಹರೀಶ. ಸರಕಾರಿ ಅಭಿಯೊಜಕರಾದ ಎಸ್ ಎಮ್ ನದಾಪ ಮತ್ತು ಎಸ್ ಎಮ್ ಜಂಬೂನವರ. ನ್ಯಾಯವಾಧಿಗಳ ಸಂಘಧ ಅದ್ಯಕ್ಷ ಸಿ ವ್ಹಿ ಸಂಬೈನವರಮಠ. ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಎಮ್ ಚನ್ನಪ್ಪನವರ. ಸಿಪಿಐ ಮಂಜುನಾಥ ನಡುವಿನಮನಿ. ಕ್ಷೇತ್ರ ಶೀಕ್ಷಣಾಧಿಕಾರಿ ಎ ಎಮ್ ಕಂಬೋಗಿ. ಪಿಎ¸ಐ ಶಿವಾನಂದ ಗುಡಗನಟ್ಟಿ. ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಗಳಾದ ಸುನಿತಾ ನಿಂಬರಗಿ. ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಶಂಕರ ಅಂತರಗಟ್ಟಿ ಉಪ ಪ್ರಾಚಾರ್ಯರಾದ ವ್ಹಿ ಆರ್ ಲೋಹಾರ. ಬಿ ವಿ ಚಿಚಗಂಡಿ ಹಾಗೂ ಶಿಕ್ಷಕರಾದ ಬಿ ಆಯ್ ಚಿನಗೂಡಿ.ದೈಹಿಕ ಶಿಕ್ಷಣಾಧಿಕಾರಿ ವಾಯ್ ಎಮ್ ಶಿಂದೆ. ಜಾಥಾದಲ್ಲಿ ಬಾಗವಹಿಸಿದ್ದರು.
ಈ ಜಾಥಾ ಎಸ್ ಕೆ ಹೈಸ್ಕೂಲ ನಿಂದ ಪ್ರಾರಂಭವಾಗಿ ಪುರಸಭೆ ನಂತರ ಬಜಾರ ಮುಲಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮರಳಿ ಎಸ್ ಕೆ ಹೈಸ್ಕೂಲಕ್ಕೆ ಬಂದು ಮುಕ್ತಾಯ ಗೊಂಡಿತು.