ಸಿಂದಗಿ: ವಿದ್ಯಾರ್ಥಿಗಳಲ್ಲಿ ವಚನ ಮತ್ತು ಸಾಹಿತ್ಯದ ಕಡೆಗೆ ಹೆಚ್ಚು ಒಲವು ಇರಬೇಕು. ವಿದ್ಯಾರ್ಥಿಗಳು ತಾವು ಬೆಳವಣಿಗೆಯಾಗುವುದರ ಜೊತೆಗೆ ಮಹಾವಿದ್ಯಾಲಯವನ್ನು ಉತ್ತರೋತ್ತರವಾಗಿ ಬೆಳೆಸಬೇಕು. ಕೇಳಿದ್ದನ್ನು ವಿಶ್ಲೇಷಣೆ ಮಾಡಿ ಕಾರ್ಯರೂಪಕ್ಕೆ ತರಬೇಕು. ಎಂದು ಪೂಜ್ಯಶ್ರೀ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಹೇಳಿದರುು.
ಪಟ್ಟಣದ ಶ್ರೀ ಪ.ವಿ.ವ.ಸಂಸ್ಥೆ ಸಾರಂಗಮಠ ಬಿ.ಎಸ್.ಡಬ್ಲ್ಯೂ, ಬಿ.ಕಾಂ ಮತ್ತು ಬಿ.ಎ. ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಪಠ್ಯಪೂರಕ ಚಟುವಟಿಕೆಗಳ ಉದ್ಘಾಟಿಸಿ ಮಾತನಾಡಿದರು.
ಮಲಘಾಣ ಶ್ರೀ ಶರಣಬಸವೇಶ್ವರ ಪದವಿ ಪೂರ್ವ ಕಾಲೇಜಿನ ವಿವೇಕಾನಂದ ಪಾಟೀಲ ಮಾತನಾಡಿ, ಪಠ್ಯಪೂರಕ ಚಟುವಟಿಕೆ ಎಂದರೆ ಕೇವಲ ಪಠ್ಯವಾಗಿರದೆ ಪಠ್ಯೇತರ ಕಾರ್ಯಗಳಲ್ಲಿ ಮಕ್ಕಳು ಸಕ್ರಿಯವಾಗಿ ಭಾಗವಹಿಸಬೇಕು ಮಹಾವಿದ್ಯಾಲಯದ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ. ಇದರ ಜೊತೆಗೆ ಮಕ್ಕಳಲ್ಲಿ ನಾಯಕತ್ವದ ಗುಣಗಳು ಬೆಳೆಸುವಲ್ಲಿ ಶಿಕ್ಷಕರ ಪಾತ್ರವು ಬಹಳ ಮುಖ್ಯವಾಗಿದೆ. ಮಕ್ಕಳಲ್ಲಿ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸಲು ಪಠ್ಯಪೂರಕ ಚಟುವಟಿಕೆಗಳಾದ ಸಂಗೀತ, ನೃತ್ಯ, ಭಾಷಣ ಹಮ್ಮಿಕೊಳ್ಳುವುದು ನಿತ್ಯನಿರಂತರವಾಗಿರುತ್ತದೆ. ಮಕ್ಕಳಲ್ಲಿ ಚಿಂತನಾಶಕ್ತಿ ಆಕರ್ಷಣೆ ದೈಹಿಕ ಬೆಳವಣಿಗೆ ಮಹಾವಿದ್ಯಾಲಯಗಳಲ್ಲಿ ಹಮ್ಮಿಕೊಳ್ಳುವ ಪಠ್ಯೇತರ ಚಟುವಟಿಕೆಗಳಿಂದ ಮನಸ್ಸು ಏಕಾಗ್ರತೆಯಾಗುತ್ತದೆ. ನಮ್ಮಲ್ಲಿ ಆತ್ಮಸ್ಥೈರ್ಯವಿದ್ದರೆ ನಾವು ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ. ನಮ್ಮಲ್ಲಿರುವ ಕಲೆಯನ್ನು ಹೊರತೆಗೆಯುವ ಕಾರ್ಯ ಯಾವುದಾದರೂ ಇದ್ದರೆ ಅದುವೇ ಈ ಪಠ್ಯಪೂರಕ ಚಟುವಟಿಕೆ ಎಂದರು.
ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಆಡಳಿತಾಧಿಕಾರಿ ಬಿ.ಜಿ.ಮಠ ಮಾತನಾಡಿ, ವಿದ್ಯಾರ್ಥಿಗಳ ಒಕ್ಕೂಟಕ್ಕೆ ಆಯ್ಕೆಯಾದ ಪದಾಧಿಕಾರಿಗಳು ತಮ್ಮ ಕಾರ್ಯಗಳನ್ನು ಕಾಯಾ ವಾಚಾ ಮನಸಾ ಪೂರ್ವಕವಾಗಿ ಮಾಡಬೇಕಾಗುತ್ತದೆ. ಪ್ರತಿಯೊಂದು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಬಹಳ ಮುಖ್ಯವಾಗಿರುತ್ತದೆ. 2021-22ನೇ ಸಾಲಿನ ವಿದ್ಯಾರ್ಥಿ ಒಕ್ಕೂಟದ ವಿಭಾಗಗಳಲ್ಲಿ ಪದಾಧಿಕಾರಿಗಳ ಪಾತ್ರ ವಿದ್ಯಾರ್ಥಿಗಳ ಭಾಗವಹಿಸುವಿಕೆ ಮುಖ್ಯವಾಗಿರುತ್ತದೆ. ಪಠ್ಯಪೂರಕ ಚಟುವಟಿಕೆಗಳಿಂದ ಜ್ಞಾನ ಮತ್ತು ವಿಜ್ಞಾನ ಎರಡು ದೊರೆಯುತ್ತವೆ. ಹೊಸ ಪಠ್ಯಕ್ರಮವೂ ನಮಗೆ ದಾರಿ ದೀಪವಾಗಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯರಾದ ಡಾ.ಚನ್ನಪ್ಪ ಕಟ್ಟಿ, ಡಾ.ಎಂ.ಎಂ.ಪಡಶೆಟ್ಟಿ, ಎಂ.ಎಸ್.ಹೈಯ್ಯಾಳಕರ್, ಪ್ರಾಚಾರ್ಯ ಡಾ.ಶರಣಬಸವ ಜೋಗೂರ, ಅಂಗವಿಕಲರ ಐಕ್ಯತಾ ವೇದಿಕೆಯ ಅಧ್ಯಕ್ಷೆ ಸಬಿಯಾ ಮರ್ತೂರ ವೇದಿಕೆ ಮೇಲಿದ್ದರು.
ಇದೇ ಸಂದರ್ಭದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ರ್ಯಾಂಕ್ ಪಡೆದ ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು.
ಮಹಾವಿದ್ಯಾಲಯದ ಸಿಬ್ಬಂದಿಗಳಾದ ಮಹಾಂತೇಶ ನೂಲಾನವರ, ಉಮೇಶ ಪೂಜೇರಿ, ಗದಿಗೆಯ್ಯ ನಂದಿಮಠ, ಅನಿಲಕುಮಾರ ರಜಪೂತ, ಸರಸ್ವತಿ ಪಟೇದ, ಭಾಗ್ಯಶ್ರೀ ನಂದೀಮಠ, ಪ್ರಭಾವತಿ ಮಾಲೀಪಾಟೀಲ, ಶೃತಿ ಹೂಗಾರ, ಮುರ್ತುಬಿಬೇಗಂ ಬಿರಾದಾರ, ಲಕ್ಷ್ಮೀ ಕೆಸರಗೊಪ್ಪ, ಚೈತ್ರಾ ನೀರಂಬಳ್ಳಿ, ಪ್ರಿಯಾಂಕ ಬ್ಯಾಕೋಡ, ಮಂಗಳಾ ಈಳಗೇರ, ದಾನಮ್ಮ ಜೋಗೂರ, ಮಮತಾ ಹರನಾಳ, ನಾಗಯ್ಯ ಹಿರೇಮಠ ಮತ್ತು ಮುದ್ದು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾ ಕಡಲಗೊಂಡ ಹಾಗೂ ಪವಿತ್ರಾ ದಿಕಸಂಗ ನಿರೂಪಿಸಿದರು, ಪ್ರಾಚಾರ್ಯ ಎಸ್.ಎಂ ಪೂಜಾರಿ ಸ್ವಾಗತಿಸಿದರು. ವಿದ್ಯಾ ರುಕುಂಪುರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ನಜ್ಮಾ ಮಣೂರ ವಂದಿಸಿದರು.