ಶ್ರೀ ಶಿವಬೋಧರಂಗ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನಾ ಸಮಾರಂಭ
ಮೂಡಲಗಿ:ಭಾರತೀಯ ಸಂಸ್ಕೃತಿಯು ವಿಶಿಷ್ಟವಾದದ್ದು
ಅದನ್ನು ಈಗಿನ ಯುವಕರು ಉಳಿಸಿ ಬೆಳೆಸಬೇಕು. ನಮಗೆ ಬದುಕು ಕೊಟ್ಟ ತಂದೆ ತಾಯಿಗಳು ನಿಜವಾದ ಹೀರೂಗಳು ಅವರಿಗೆ ಗೌರವವನ್ನು ಸಲ್ಲಿಸಬೇಕು ಮತ್ತು ದೇಶದ ಇತಿಹಾಸವನ್ನು ವಿದ್ಯಾರ್ಥಿಗಳು ಓದಿದರೇ ಅವರು ದೈಹಿಕವಾಗಿ ಮಾನಸಿಕವಾಗಿ ಮತ್ತು ಉತ್ತಮ ಸಮಾಜದ ಮಗನಾಗಿ ದೇಶವನ್ನು ಕಟ್ಟುತ್ತಾನೆ. ಶಿಕ್ಷಕರು ನಮ್ಮ ದೇಶದ ಸ್ವಾತಂತ್ರ್ಯದ ಸಲುವಾಗಿ ಹೋರಾಡಿದ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯ ಬಗ್ಗೆ ವಿದ್ಯಾರ್ಥಿಗಳಿಗೆ ಜ್ಞಾನ ನೀಡಿ ಅವರಂತೆ ವಿದ್ಯಾರ್ಥಿಗಳು ದೇಶಕ್ಕೆ ದುಡಿಯಬೇಕು. ದೇಶಕ್ಕೆ ಅನ್ನ ನೀಡುವ ರೈತರನ್ನು, ಸೈನಿಕರನ್ನು ಮತ್ತು ಸಂಸ್ಕೃತಿಯನ್ನು ಗೌರವಿಸಬೇಕೆಂದು ವಾಗ್ಮಿ ನಂದು ಗಾಯಕವಾಡ
ಹೇಳಿದರು
ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಶ್ರೀ
ಶಿವಬೋಧರಂಗ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಅತಿಥಿಗಳಾಗಿ ಆಗಮಿಸಿದ ಮೂಡಲಗಿ ಶಿಕ್ಷಕರ ಸಂಘದ ಅಧ್ಯಕ್ಷ ಬಿ ಪಿ ಕುಲಕರ್ಣಿ ಮಾತನಾಡಿ, ಮಕ್ಕಳು
ಶಿಕ್ಷಕರೊಂದಿಗೆ ಉತ್ತಮವಾದ ಸಂಬಂಧಗಳನ್ನು
ಹೊಂದಿರಬೇಕು ಅದರಂತೆ ತಂದೆ ತಾಯಿಯ ಜೊತೆ ವಿಶ್ವಾಸ ಮತ್ತು ಪ್ರೀತಿಯಿಂದ ಇರಬೇಕು. ಅನ್ನದಾನದೊಂದಿಗೆ ವಿದ್ಯಾದಾನವು ಶ್ರೇಷ್ಠವೆಂದು ಶಿಕ್ಷಕರೂ ಕೂಡ ತಿಳಿದಿರಬೇಕು ಎಂದರು
ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವ್ಹಿ.ಆರ್.ಸೋನವಾಲ್ಕರ ಮಾತನಾಡಿ, ತಂದೆ-ತಾಯಿ ತಲೆ ತಗ್ಗಿಸುವ ಕಾರ್ಯ ಮಾಡದೇ ಅವರು ತಲೆ ಎತ್ತಿ ನಡೆಯುವ ವ್ಯಕ್ತಿಗಳಾಗುವುದು ಎಲ್ಲ ವಿದ್ಯಾರ್ಥಿಗಳ ಕರ್ತವ್ಯವಾಗಿದೆ ಮತ್ತು ಪಠ್ಯಮತ್ತು ಪಠ್ಶೇತರ ಚಟುವಟಿಕೆಗಳೊಂದಿಗೆ ಸಮಯಕ್ಕೆ ಮಹತ್ವವನ್ನು ನೀಡಬೇಕೆಂದು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಖಾನಟ್ಟಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಆರ್ ಎಸ್ ಹುನ್ನೂರ ಆಗಮಿಸಿದ್ದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ
ಎಮ್.ಎಸ್.ಪಾಟೀಲ ಮತ್ತು ಉಪನ್ಯಾಸಕರಾದ ಎಸ್.ಕೆ.ಹಿರೇಮಠ, ಎಲ್.ಆರ್.ಧರ್ಮಟ್ಟಿ, ಎಚ್.ಎಮ್.ಹತ್ತರಕಿ, ಆರ್.ಎಸ್.ಹಾದಿಮನಿ, ಎಚ್.ಡಿ.ಚಂದರಗಿ, ಎಸ್.ಪಿ.ಸಣ್ಣಮೇತ್ರಿ,
ವಿಷ್ಣು ಬಡಿಗೇರ, ಎಮ್.ಜಿ.ಹೆಬ್ಬಳ್ಳಿ, ಶ್ರೀಮತಿ ಎಸ್.ಕೆ.ಮಠದ ಮತ್ತು ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಿ.ಜಿ.ಗಡಾದ
ನಿರೂಪಿಸಿದರು. ಡಾ. ಆರ್ ಪಿ ಬಿರಾದಾರ ವಂದಿಸಿದರು.

