ಮೂಡಲಗಿ: ತಾಲ್ಲೂಕಿನ ಅರಳಿಮಟ್ಟಿ ಪಿಎಂಶ್ರೀ ಸರ್ಕಾರಿ ಪ್ರೌಡ ಶಾಲೆಯ ವಿದ್ಯಾರ್ಥಿಗಳು ನವದೆಹಲಿಯ ಎನ್‌ಸಿಆರ್‌ಟಿ ಹಾಗೂ ಶಾಲಾ ಶಿಕ್ಷಣ ಸಚಿವಾಲಯ ನಡೆಸುವ ಕಲಾ ಉತ್ಸವ ಸ್ಪರ್ಧೆಯ ವಾದ್ಯ ಸಂಗೀತ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಅಯ್ಕೆಯಾಗಿರುವರು.
ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಾದ ಲವಿತ ಹಳಿಂಗಳಿ, ಕಿರಣ ಕುರಬಳ್ಳಿ, ರಂಗೇಶ ನೀಲಪ್ಪಗೋಳ, ಸಂತೋ಼ಷ ಲಗಳಿ ಪುಣೆಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕಲಾ ಉತ್ಸವ ಸ್ಪರ್ಧೆಯಲ್ಲಿ ಭಾಗವಹಿಸಿಲಿದ್ದಾರೆ ಎಂದು ತರಬೇತಿ ನೀಡಿರುವ ಚಿತ್ರಕಲಾ ಶಿಕ್ಷಕಿ ಶೋಭಾ ಧಡೂತಿ ತಿಳಿಸಿದ್ದಾರೆ.
ಕಲಾ ಉತ್ಸವದ ಜಿಲ್ಲಾ ಮಟ್ಟದ ಸ್ಪರ್ಧೆಯ ೭ ವಿಭಾಗಗಳಲ್ಲಿ ೧೩ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರು. ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯ ಶಿಕ್ಷಕ ಜಗದೀಶ ತಿಪ್ಪಿಮನಿ ಹಾಗೂ ಎಸ್‌ಡಿಎಂಸಿ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

