ವಿದ್ಯಾರ್ಥಿಗಳು ತಂತ್ರಜ್ಞಾನದಿಂದಾಗಿ ದಾರಿ ತಪ್ಪಬಾರದು – ಲಕ್ಷ್ಮಿ ಸಾಲೊಡಗಿ

Must Read
ಸಿಂದಗಿ – ಇಂದಿನ ಯುವ ಜನಾಂಗ ಮೊಬೈಲ್ ಅವಲಂಬಿತ ಜಗತ್ತಿನಲ್ಲಿದೆ. ಎಲ್ಲವೂ ಅಂಗೈನಲ್ಲಿಯೇ ಹಿಡಿದಿಟ್ಟುಕೊಳ್ಳುವ ಮನೋಭಾವದ ವಯಸ್ಸಿನ ಹದಿ ಹರೆಯದವರು ತಂತ್ರಜ್ಞಾನಗಳ ಪ್ರಭಾವಕ್ಕೆ ಒಳಗಾಗಿ ಹಾದಿ ತಪ್ಪಬಾರದು ಎಂದು ಎಚ್. ಜಿ. ಕಾಲೇಜನ ವಿದ್ಯಾರ್ಥಿನಿ ಲಕ್ಷ್ಮಿ ಸಾಲೊಡಗಿ ಹೇಳಿದರು.
   ಅವರು ಪಟ್ಟಣದ ತಾಲೂಕ ಶಿಕ್ಷಣ ಪ್ರಕಾರ ಮಂಡಳಿಯ ಎಚ್. ಜಿ. ಕಾಲೇಜನಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
    ನಮ್ಮ ಪಾಲಕರು ನಮಗಾಗಿ ಮತ್ತು ನಮ್ಮ ಒಳಿತಿಗಾಗಿ  ನಿತ್ಯ ಬೆವರು ಸುರಿಸುತ್ತಾರೆ ಉತ್ತಮ ಶಿಕ್ಷಣವನ್ನ ಪಡೆದು ಸಮಾಜದಲ್ಲಿ ಯೋಗ್ಯ ಸ್ಥಾನಮಾನಗಳನ್ನ ನಾವು ಪಡೆದುಕೊಳ್ಳಬೇಕು ಎಂದು ಹೇಳಿದರು.
   ಈ ವೇಳೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿದ್ಯಾರ್ಥಿ ಮೆಹಬೂಬ್ ಪಟೇಲ್ ಕಣಮೇಶ್ವರ ಮಾತನಾಡಿ, ನಾವು ವಿದ್ಯಾರ್ಥಿಗಳು ಈ ದೇಶವನ್ನು ಮುಂದೆ ನಡೆಸುವ ದೊಡ್ಡ ಹೊಣೆಗಾರಿಕೆ ನಮ್ಮದಾಗಿದೆ. ನಮ್ಮ ಮನೆ ಮತ್ತು ನಾವು ಕಲಿತ ಶಾಲೆ ಹಾಗೂ ನಾವು ಬೆಳೆದ ಸಮಾಜದ ಕೀರ್ತಿಯನ್ನು ಬೆಳೆಸುವ ದೊಡ್ಡ ಶಕ್ತಿಗಳಾಗಬೇಕು. ಶಿಕ್ಷಕ ಮತ್ತು ಪಾಲಕ  ವರ್ಗದವರು ನಮ್ಮ ಮೇಲೆ ಅಪಾರ ಭರವಸೆಯನ್ನ ಇಟ್ಟಿದ್ದಾರೆ ಅವರ ಆಸೆಯನ್ನು ನಾವು ಧನಾತ್ಮಕವಾಗಿ ಸ್ವೀಕರಿಸಿ ಪೂರೈಕೆ ಮಾಡಬೇಕು ಎಂದರು.
 ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಭಾಗ್ಯಲಕ್ಷ್ಮಿ ಶಾಬಾದಿ, ಮಾದೇಶ್ ಗೋಡಕೆ, ಮಲ್ಲಿಕಾರ್ಜುನ್ ಬೂದಿಹಾಳ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
 ವಿದ್ಯಾರ್ಥಿನಿ ಸುಪ್ರಿಯಾ ಅತನೂರ  ಅಧ್ಯಕ್ಷತೆ ವಹಿಸಿ ಮಾತನಾಡಿದರು.
 ಇದೆ ವೇಳೆ  ಶಾಲಾ ಉಪನ್ಯಾಸಕ ಬಳಗ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಿದರು.
                   ಕಾರ್ಯಕ್ರಮದಲ್ಲಿ  ಪ್ರಾಚಾರ್ಯ ಎ. ಆರ್. ಹೆಗ್ಗನದೊಡ್ಡಿ ಉಪನ್ಯಾಸಕರಾದ ಎಸ್. ಎ. ಪಾಟೀಲ, ಎಮ್. ಎನ್. ಅಜ್ಜಪ್ಪ,  ಎಸ್. ಪಿ. ಬಿರಾದಾರ,ಎಫ್. ಎ. ಹಾಲಪ್ಪನವರ, ಸಿದ್ದಲಿಂಗ ಕಿಣಗಿ, ಡಾ. ಎಸ್. ಎಸ್. ಚವಾಣ್, ಎಸ್. ಎ. ಬಸರಕೊಡ,  ಎ. ಬಿ. ಪಾಟೀಲ, ಮುಕ್ತಾಯಕ್ಕ ಕತ್ತಿ, ಎ. ಆರ್. ಸಿಂದಗಿಕರ ಜ್ಯೋತಿ ಚನ್ನೂರ್  ಮತ್ತು ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group