Homeಸುದ್ದಿಗಳುಉದ್ಯೋಗಾವಕಾಶಗಳನ್ನು ಪದವಿ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು -ಪ್ರೊ.ರವಿ ಕಟಗೇರಿ

ಉದ್ಯೋಗಾವಕಾಶಗಳನ್ನು ಪದವಿ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು -ಪ್ರೊ.ರವಿ ಕಟಗೇರಿ

ಮೂಡಲಗಿ:- ಪದವಿ ಹಂತದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಅವಕಾಶಗಳು ಹೆಮ್ಮರವಾಗಿದ್ದು ಅನೇಕ ಇಲಾಖೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಿಕೊಳ್ಳುತ್ತಿದ್ದು ಸರಿಯಾದ ಮಾರ್ಗದರ್ಶನ ಪಡೆದುಕೊಂಡು ವಿವಿಧ ಇಲಾಖೆಗೆ ಸೇರಿಕೊಳ್ಳಲು ಪೂರ್ವ ತಯಾರಿಯನ್ನು ಪದವಿ ಹಂತದ ಅಧ್ಯಯನದ ಜೊತೆಗೆ ಪ್ರಯತ್ನಿಸಬೇಕೆಂದು ಮೂಡಲಗಿಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರವಿ ಕಟಗೇರಿ ಹೇಳಿದರು.

ಪಟ್ಟಣದ ಆರ್.ಡಿ.ಎಸ್. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯದ ಆಯ್‌ ಕ್ಯೂ ಎಸಿ ಮತ್ತು ಎನ್‌ ಎಸ್‌ ಎಸ್ ಘಟಕಗಳ ಸಹಯೋಗದಲ್ಲಿ ಆಯೋಜಿಸಿದ ಪ್ಲೇಸ್‌ಮೆಂಟ್ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಉದ್ಯೋಗಗಳು ವ್ಯಕ್ತಿಯ ಪ್ರತಿಭೆಯನ್ನಾಧರಿಸಿ ಇಂದಿನ ದಿನದಲ್ಲಿ
ಸಾಕಷ್ಟು ಅವಕಾಶಗಳಿದ್ದು ಅದಕ್ಕೆ ತಕ್ಕಂತೆ ತಯಾರಿ
ಮಾಡಿಕೊಂಡು ಪರೀಕ್ಷೆಗಳನ್ನು ಎದುರಿಸಿ ಸರಕಾರಿ ಮತ್ತು ಖಾಸಗಿ ಉದ್ದಿಮೆಗಳಲ್ಲಿ ಯಶಸ್ಸನ್ನು ಸಾಧಿಸುವಂತೆ ಹಾಗೂ ಆಯ್‌.ಎ.ಎಸ್, ಆಯ್‌.ಪಿ.ಎಸ್, ಕೆ.ಎ.ಎಸ್ ಪರೀಕ್ಷೆಗಳಿಗೆ ತಯಾರಾಗಲು ಅನುಸರಿಸುವ
ಮಾರ್ಗಗಳನ್ನು ತಿಳಿಸಿದರು.

ಅತಿಥಿ ಆಯ್.ಟಿ.ಆಯ್. ಕಾಲೇಜಿನ ಪ್ರಾಚಾರ್ಯ ಚಿದಾನಂದ ಶೆಟ್ಟರ ಮಾತನಾಡಿ ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣದ ನಂತರ ಬದುಕಿಗೆ ವೃತ್ತಿ ಕೈಗೊಳ್ಳುವುದು ವಿದ್ಯಾರ್ಥಿಗಳಿಗೆ ಅಗತ್ಯವಾಗಿದ್ದು ವಿವಿಧ ಇಲಾಖೆಗಳಲ್ಲಿ ಕೈಗಾರಿಕೆಗಳಲ್ಲಿ ಹಾಗೂ ಸ್ವಯಂ ಉದ್ಯೋಗಗಳಲ್ಲಿ ಅವಕಾಶಗಳಿದ್ದು ಅವುಗಳ
ಸರಿಯಾದ ಮಾರ್ಗದರ್ಶನ ಪಡೆದುಕೊಂಡು ನಮ್ಮ ಬದುಕಿನ ದಾರಿ ರೂಪಿಸಿಕೊಳ್ಳುವುದು ಅಗತ್ಯವಿದೆ ಎಂದರು.

ಪ್ಲೇಸ್ ಮೆಂಟ್ ಘಟಕಾಧಿಕಾರಿ ನಂದಾ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿ ನನ್ನ ಜೀವನದ ಮೊದಲ ಆಯ್ಕೆ ಸಮಾಜದಲ್ಲಿ ಹೆಸರು ಮಾಡುವುದು ಎರಡನೇ ಆಯ್ಕೆ ಸಮಾಜ ಒಪ್ಪುವಂತಹ ವೃತ್ತಿ ಮಾಡುವದಾಗಿರಬೇಕು ಆ ದಾರಿಯಲ್ಲಿ ನಾವು ನಡೆಯತ್ತಿರುವಳು ಎಂದರು.

ಲಕ್ಷ್ಮೀ ಕಾಲೇಜು ಪ್ರಾಚಾರ್ಯ ಎಸ್.ಬಿ.ಗೋಟೂರೆ ಮಾತನಾಡಿ ವೃತ್ತಿ ಆಯ್ಕೆಗೆ ತಯಾರಿ ಬಹಳಷ್ಟು ಮುಖ್ಯವಾಗಿದ್ದು ಉತ್ತಮ ವೃತ್ತಿ ನನ್ನ ಮೊದಲ ಆಧ್ಯತೆಯಾಗಿರ ಬೇಕೆಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ರಾಜು ಪತ್ತಾರ, ಮಲ್ಲಪ್ಪ ಪಾಟೀಲ, ಸಂಜೀವ ಮಂಟೂರ, ಮುತ್ತಣ್ಣಾ ಒಡೆಯರ, ಸುನೀಲ ಸತ್ತಿ ಮತ್ತಿತರರು ಹಾಜರಿದ್ದರು

ವಿದ್ಯಾರ್ಥಿನಿ ಅಕ್ಷತಾ ಗೊರಗುದ್ದಿ ನಿರೂಪಿಸಿದರು ಲಕ್ಷ್ಮಿ ಗೊರಗುದ್ದಿ ಸ್ವಾಗತಿಸಿದರು ಜ್ಯೋತಿ ಗರಗದ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group