ಶಾಶ್ವತ ಸಾಧನೆಗಾಗಿ ಸದಾ ಅಧ್ಯಯನ ಮಾಡಿ – ರಮೇಶ ಭೂಸನೂರ

Must Read

ಶಾಶ್ವತ ಸಾಧನೆಗಾಗಿ ಸದಾ ಅಧ್ಯಯನ ಮಾಡಿ – ರಮೇಶ ಭೂಸನೂ

ಸಿಂದಗಿ : ಮನುಷ್ಯನಲ್ಲಿರುವ ಸಂಪತ್ತು ಕಸಿದುಕೊಳ್ಳಬಹುದು ಆದರೆ ಜ್ಞಾನವನ್ನು ಯಾರಿಂದಲು ಕಸಿದುಕೊಳ್ಳಲು ಆಗದು ಕಾರಣ ಸತತ ಅಧ್ಯಯನದಿಂದ ಸಾಧನೆ. ಸೂರ್ಯ ಚಂದ್ರರಿರುವರೆಗೂ ಶಾಶ್ವತ ಸಾಧನೆಗಾಗಿ ಸದಾ ಅಧ್ಯಯನ ಮಾಡಿ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.

ಪಟ್ಟಣದ ನಳಂದ ಕೋಚಿಂಗ ಕ್ಲಾಸೆಸ್ ಶಾಲೆಯಲ್ಲಿ ಹಮ್ಮಿಕೊಂಡ ಬೇಸಿಗೆ ರಜೆ ಶಿಬಿರ ಮುಕ್ತಾಯ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿ, ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ರೈತರು ಬಡವರು ನಮ್ಮ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣ ಕಲಿತು ಉನ್ನತ ಹುದ್ದೆಗೇರಲಿ ಎಂದು ಕನಸನ್ನು ಕಟ್ಟಿ ತಾವು ಮಾಡಿದ ಕೂಲಿ ಕೆಲಸದ ಹಣವನ್ನು ಭರಣ ಮಾಡಿ ಶಿಕ್ಷಣ ಕೊಡಿಸುತಿದ್ದಾರೆ ನಿಮ್ಮ ಪಾಲಕರು ಕಂಡ ಕನಸನ್ನು ನನಸಾಗಿಸಿ ದೇಶದ ಉತ್ತಮ ಪ್ರಜೆಯಾಗಿ ಹೊರಹುಮ್ಮಬೇಕು ಬೇಸಿಗೆ ಶಿಬಿರ ಎಂದರೆ ಬಿಡುವಿಲ್ಲದ ಕೆಲಸ ಎಂದರ್ಥ, ಮಕ್ಕಳು ಒಬ್ಬಂಟಿಯಾಗಿ ಬದುಕುವ ಪಾಠ ಕಲಿಸುತ್ತದೆ ಪ್ರಾರ್ಥಮಿಕ ಹಂತದಲ್ಲಿ ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಿ ಎಂದು ಹಗಲಿರುಳು ಮಕ್ಕಳೊಂದಿಗೆ ಮಕ್ಕಳಾಗಿ ಶಿಕ್ಷಣದ ದಾರಿ ತೋರುತ್ತಿರುವ ನಳಂದ ಕೋಚಿಂಗ ಶಾಲೆಯ ಸಿಬ್ಬಂದಿಯ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು ಎಂದರು.

ನಳಂದ ಶಾಲೆಯಲ್ಲಿ ಕೋಚಿಂಗ ಪಡೆದು ೨೦೨೪-೨೫ ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ, ೯೦% ಕಿಂತ ಅಧಿಕ ಅಂಕಗಳನ್ನು ಪಡೆದು ಸಾಧನೆ ಮಾಡಿದ ೬ ಜನ ವಿದ್ಯಾರ್ಥಿಗಳನ್ನು ವಿಶೇಷವಾಗಿ ಗಣ್ಯರು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಅಭಿನವ ರುದ್ರಮುನಿ ಶಿವಾಚಾರ್ಯ ಹಿರೇಮಠ ಯಂಕಂಚಿ, ಕರ್ನಾಟಕ ನಿಂಬೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ, ರೈತ ಸಂಘದ ಜಿಲಾಧ್ಯಕ್ಷ ಚಂದ್ರಗೌಡ ಪಾಟೀಲ್, ಸಿದ್ದು ಬುಳ್ಳಾ, ಸಿದ್ರಾಮ ಅನಗೊಂಡ, ನಂದೀಶ ನಂದರಗಿ, ಸಂಸ್ಥೆಯ ಅಧ್ಯಕ್ಷ ಸುರೇಶ, ಪಾಟೀಲ್, ವಿ ಟಿ ಹಿರೇಕುರುಬರ, ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group