ಬೀದರ – ಜಿಲ್ಲೆಯ ಮೀಸಲು ಕ್ಷೇತ್ರವಾದ ಔರಾದ ಕ್ಷೇತ್ರದಿಂದ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರು ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಮೀಸಲು ಕ್ಷೇತ್ರದಿಂದ ಗೆಲವು ಸಾಧಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಅವರನ್ನು ಸಚಿವ ಹುದ್ದೆಯಿಂದ ವಜಾ ಮಾಡಬೇಕು ಎಂದು ಡಾ. ಲಕ್ಷ್ಮಣ ಸರೋಳಿ ಹೇಳಿದ್ದಾರೆ.
ಪ್ರಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನ್ಯ ಹೈಕೋರ್ಟ್ ಆದೇಶದಂತೆ ಜಿಲ್ಲಾಧಿಕಾರಿಗಳು ಪ್ರಭು ಚವ್ಹಾಣ ಅವರ ಜಾತಿ ಪ್ರಮಾಣ ಪತ್ರದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕಾದರೆ ಸಚಿವ ಪ್ರಭು ಚವ್ಹಾಣ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಒತ್ತಾಯ ಮಾಡಿದರು.
ರಾಜ್ಯದ ಮುಖ್ಯ ಮಂತ್ರಿಗಳು ಪ್ರಭು ಚವ್ಹಾಣ ಅವರ ರಾಜಿನಾಮೆ ಪಡೆದುಕೊಳ್ಳಬೇಕು.
ಕಳೆದ ಹದಿನಾಲ್ಕು ವರ್ಷಗಳಿಂದ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಔರಾದ (ಬಿ) ಮೀಸಲು ವಿಧಾನ ಕ್ಷೇತ್ರ ದಿಂದ ಸತತ ವಾಗಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಈಗ ಸಚಿವರಾಗಿ ಅಧಿಕಾರ ಪಡೆದುಕೊಂಡಿದ್ದಾರೆ. ಕೂಡಲೆ ಸಚಿವ ಪ್ರಭು ಚವ್ಹಾಣ ಪಶು ಸಂಗೋಪನಾ ಸಚಿವರಾದ ಅವರ ಜಾತಿ ಪ್ರಮಾಣ ಪತ್ರದ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸುವಂತೆ ರಾಜ್ಯ ಹೈಕೋರ್ಟ್ ನೀಡಿದ ಆದೇಶ ದಂತೆ ನಿಷ್ಪಕ್ಷಪಾತ ವಾದ ತನಿಖೆ ನಡೆಸಲು ಮುಖ್ಯ ಮಂತ್ರಿ ಗಳು ಪ್ರಭು ಚವ್ಹಾಣ ಅವರನ್ನು ಕೂಡಲೇ ಕೈ ಬಿಟ್ಟು ತನಿಖೆ ನಡೆಸಬೇಕು ಎಂದರು.
ಈ ಮೊದಲು ಬೀದರ ಜಿಲ್ಲಾಧಿಕಾರಿಯವತು ಪ್ರಭು ಚವ್ಹಾಣ ಅವರ ಜಾತಿ ಪ್ರಮಾಣ ಪತ್ರದ ತನಿಖೆ ಮಾಡಲು ಹೊರಟಾಗ ಅಧಿಕಾರಿಗಳನ್ನು ಪ್ರಭು ಚವ್ಹಾಣ ಅವರು ತಮ್ಮ ಪ್ರಭಾವ ಬಳಸಿ ವರ್ಗಾವಣೆ ಮಾಡಿಸಿದ್ದೂ ಉಂಟು ಆದ್ದರಿಂದ ಸಚಿವ ಪ್ರಭು ಚವ್ಹಾಣ ಅವರನ್ನು ಸಚಿವ ಸಂಪುಟದಿಂದ ಕೂಡಲೆ ಕೈಬಿಟ್ಟು ಜಿಲ್ಲಾಧಿಕಾರಿಗಳು ನಿಷ್ಪಕ್ಷಪಾತ ತನಿಖೆ ಮಾಡಲು ಅನುವು ಮಾಡಿಕೊಡುವಂತೆ ಮುಖ್ಯಮಂತ್ರಿಗಳಿಗೆ ಡಾ. ಸರೋಳಿ ಪತ್ರಿಕಾಗೋಷ್ಠಿಯ ಮೂಲಕ ಒತ್ತಾಯ ಮಾಡಿದ್ದಾರೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ