ಶ್ರದ್ಧೆ ಮತ್ತು ವಿಶ್ವಾಸದಲ್ಲಿ ಯಶಸ್ಸು ಸಾಧನೆ

Must Read

ಮೂಡಲಗಿ: ‘ಶ್ರದ್ದೆ ಮತ್ತು ಜನರ ವಿಶ್ವಾಸವಿದ್ದರೆ ಎಲ್ಲ ವ್ಯವಹಾರಗಳು ಯಶಸ್ಸು ಸಾಧಿಸುತ್ತವೆ’ ಎಂದು ಸುಣಧೋಳಿಯ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿಗಳು ಹೇಳಿದರು.

ಇಲ್ಲಿಯ ಕಾಲೇಜು ರಸ್ತೆಯಲ್ಲಿ ಸಮರ್ಥ ಟಿವಿಎಸ್ ದ್ವಿಚಕ್ರ ವಾಹನಗಳ ಮಾರಾಟ ನೂತನ ಶೋರೂಮ ಮತ್ತು 5ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೈವಭಕ್ತಿ ಇದ್ದರೆ ಸಾಗುವ ದಾರಿಯು ಯಶಸ್ಸಿನತ್ತ ಇರುತ್ತದೆ ಎಂದರು.

ಶಿವಬಸಪ್ಪ ಭೀಮಪ್ಪ ಲಂಕೆಪ್ಪನ್ನವರ ಮತ್ತು ವೀರೇಶ ಲಂಕೆಪ್ಪನ್ನವರ ಅವರು ಪೂಜ್ಯರನ್ನು ಹಾಗೂ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಿದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಜಿ. ಢವಳೇಶ್ವರ, ಗೋಕಾಕದ ಉದಯ ಪತ್ರಾವಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ, ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಸದಸ್ಯ ಸಂತೋಷ ಸೋನವಾಲಕರ, ಮೂಡಲಗಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ರಮೇಶ ಪ್ಯಾಟಿಗೌಡರ ಇದ್ದರು.

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...

More Articles Like This

error: Content is protected !!
Join WhatsApp Group