ಡಾ.ಗುರುರಾಜ ಕರಜಗಿ ಅವರ ‘ಸುಂದರಕಾಂಡ’ ಪ್ರವಚನ ಮಾಲಿಕೆ ಸಂಪನ್ನ

Must Read
   ಬೆಂಗಳೂರು –  ರಾಮಾಯಣದ ಹೃದಯಭಾಗವೆನಿಸಿರುವ ಸುಂದರಕಾಂಡ ಕೇವಲ ಒಂದು ಪಾರಾಯಣ ಕಾಂಡವಲ್ಲ, ಅದು ಭಕ್ತಿ, ಬುದ್ಧಿ ಮತ್ತು ಬದುಕಿನ ಸಂವೇದನೆಯನ್ನು ಒಟ್ಟಿಗೆ ಹೊತ್ತಿರುವ ದಾರಿದೀಪ. ಈ ದಾರಿದೀಪದ ತತ್ತ್ವವನ್ನು ಸಾಹಿತ್ಯದ ಸರಳತೆ ಮತ್ತು ಚಿಂತನೆಯ ಆಳದೊಂದಿಗೆ ಅನಾವರಣಗೊಳಿಸಿದ ಐದು ದಿನಗಳ ಪ್ರವಚನ ಮಾಲಿಕೆ, ಕನ್ನಡದ ಹಿರಿಯ ಚಿಂತಕ ಡಾ.ಗುರುರಾಜ ಕರಜಗಿ ಅವರ ವಾಚನದಲ್ಲಿ, ಜಯರಾಮ ಸೇವಾ ಮಂಡಳಿಯಲ್ಲಿ ಶ್ರದ್ಧಾಭಕ್ತಿಯಿಂದ ಸಂಪನ್ನವಾಯಿತು.

ಜಯನಗರ 8ನೇ ಬಡಾವಣೆಯಲ್ಲಿರುವ ಜಯರಾಮ ಸೇವಾ ಮಂಡಳಿಯಲ್ಲಿ ರಾಮಾಯಣದ ಸರ್ವಾದರಣೀಯ ಪಾರಾಯಣ ಕಾಂಡವಾದ ಸುಂದರಕಾಂಡ ಕುರಿತು ಐದು ದಿನಗಳ ಪ್ರವಚನ ಮಾಲಿಕೆಯನ್ನು ಆಯೋಜಿಸಲಾಗಿತ್ತು. ಕನ್ನಡ ನಾಡಿನ ಖ್ಯಾತ ಸಾಹಿತ್ಯ ಚಿಂತಕ ಹಾಗೂ ಶಿಕ್ಷಣ ತಜ್ಞರಾದ ಡಾ.ಗುರುರಾಜ ಕರಜಗಿ ಅವರು ಈ ಉಪನ್ಯಾಸ ಸರಣಿಯನ್ನು ನಡೆಸಿಕೊಟ್ಟರು.

ಸಾಂಸ್ಕೃತಿಕ–ಧಾರ್ಮಿಕ–ಸಾಮಾಜಿಕ ಚಟುವಟಿಕೆಗಳ ಮೂಲಕ ನಗರದೊಳಗೆ ತನ್ನದೇ ಆದ ಅಸ್ಮಿತೆಯನ್ನು ಗಳಿಸಿಕೊಂಡಿರುವ ಜಯರಾಮ ಸೇವಾ ಮಂಡಳಿ, ಆರು ದಶಕಗಳ ಸಮಾಜಮುಖಿ ಸೇವೆಯೊಂದಿಗೆ ದೃಢವಾದ ನೆಲೆಗಟ್ಟನ್ನು ನಿರ್ಮಿಸಿಕೊಂಡಿದೆ. ವಜ್ರಮಹೋತ್ಸವದ ದಿಕ್ಕಿನಲ್ಲಿ ಸಾಗುತ್ತಿರುವ ಈ ಸಂದರ್ಭದಲ್ಲಿ ಮೌಲಿಕ ಹಾಗೂ ರಚನಾತ್ಮಕ ಚಿಂತನೆಗೆ ವೇದಿಕೆಯಾಗುವ ಉದ್ದೇಶದಿಂದ ಈ ಪ್ರವಚನ ಮಾಲಿಕೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಂಡಳಿಯ ಪದಾಧಿಕಾರಿಗಳು ತಿಳಿಸಿದರು.

ಈ ಪ್ರವಚನ ಮಾಲಿಕೆಯ ವಿಷಯವನ್ನು ಮುಂದಿನ ದಿನಗಳಲ್ಲಿ ಮುದ್ರಣ ರೂಪದಲ್ಲಿಯೂ ಪ್ರಕಟಿಸುವ ಯೋಜನೆ ಇದೆ. ಕಾರ್ಯಕ್ರಮದಲ್ಲಿ ಅಧ್ಯಾತ್ಮ ಚಿಂತಕಿ ಶ್ರೀಮತಿ ವೀಣಾ ನಿತ್ಯಾನಂದ, ದೇವಾಲಯದ ಅಧ್ಯಕ್ಷ ಎಸ್.ಕೆ. ಗೋಪಾಲಕೃಷ್ಣ, ಕಾರ್ಯದರ್ಶಿ ಡಾ.ಎಚ್. ಸುಂದರಮೂರ್ತಿ, ನಿಕಟಪೂರ್ವ ಅಧ್ಯಕ್ಷ ಆರ್.ಎನ್. ಸ್ವಾಮಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಪಿ. ರಘೋತ್ತಮ ರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಾಹಿತ್ಯ ಪ್ರಸಾರ ಮತ್ತು ಪ್ರಕಟಣೆಯು ಜಯರಾಮ ಸೇವಾ ಮಂಡಳಿಯ ಪ್ರಮುಖ ಚಟುವಟಿಕೆಗಳಾಗಿದ್ದು, ರಾಮಾಯಣ ಆಧಾರಿತ ವ್ಯಕ್ತಿ ಮತ್ತು ಪ್ರಸಂಗಗಳನ್ನು ಒಳಗೊಂಡ ಅನೇಕ ಕೃತಿಗಳನ್ನು ಕಳೆದ ಐದು ದಶಕಗಳಲ್ಲಿ ಪ್ರಕಟಿಸಿ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದೆ. ಸಚಿತ್ರ ರಾಮಾಯಣಶ್ರೀರಾಮ ಸಂಭವಶ್ರೀರಾಮ ರಜತಾದ್ರಿಬಾಳಿಗೊಂದು ಬೆಳಕು ಮುಂತಾದವು ಮಂಡಳಿಯ ಹೆಮ್ಮೆಯ ಪ್ರಕಟಣೆಗಳಾಗಿವೆ.

LEAVE A REPLY

Please enter your comment!
Please enter your name here

Latest News

ಡಿ.೨೪ರಂದು ಡಾ.ಅನೀಲ ಕಾಕೋಡ್ಕರ್ ಅವರಿಗೆ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಸಿಂದಗಿ: ಪೂಜ್ಯಶ್ರೀ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನದಿಂದ ಕೊಡ ಮಾಡುವ ರಾಷ್ಟ್ರೀಯ ಭಾಸ್ಕರ ಪ್ರಶಸ್ತಿಯನ್ನು ಈ ಬಾರಿ ಪದ್ಮವಿಭೂಷಣ ಭಾರತೀಯ ಪರಮಾಣು ವಿಜ್ಞಾನಿ ಡಾ.ಅನೀಲ ಕಾಕೋಡ್ಕರ್ ಅವರಿಗೆ...

More Articles Like This

error: Content is protected !!
Join WhatsApp Group