ಬೀದರ – ತಮ್ಮ ಸ್ವ ಪ್ರತಿಷ್ಠೆ ಗೋಸ್ಕರ ಜನಾಶೀರ್ವಾದ ಯಾತ್ರೆ ಕೈಗೊಂಡು ಜಿಲ್ಲಾ ಮಟ್ಟದಲ್ಲಿ ಕರೋನಾ ವೈರಸ್ ಹರಡಿಸಿದ್ದು ಆಯಿತು ಈಗ ತಮ್ಮ ಯಾತ್ರೆಯ ಮೂಲಕ ಮತ್ತೇನು ಮಾಡಲು ಬಂದಿದ್ದೀರಿ ಎಂದು ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಹಗುರವಾಗಿ ಟೀಕಿಸಿದ ಭಾಲ್ಕಿ ಯುವಕರು.
ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಭಾಲ್ಕಿ ಕಾಂಗ್ರೆಸ್ ಕಾರ್ಯಕರ್ತರು, ತಾಲಿಬಾನ್ ಸಂಸ್ಕೃತಿಯ ಖೂಬಾರವರೆ ಯಾವ ಘನಂದಾರಿ ಕೆಲಸ ಮಾಡಿದ್ದೀರೆಂದು ಭಾಲ್ಕಿಯಲ್ಲಿ ಜನಾಶೀರ್ವಾದ ಯಾತ್ರೆ ಕೈಗೊಂಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ತಮ್ಮ ಬೇಜವಬ್ದಾರಿಯಿಂದ ಸಿಪೆಟ್ ಕೈ ತಪ್ಪಿದೆ, ಖಾನಾಪೂರದಲ್ಲಿನ ಪಿಟ್ ಲೈನ್ ಕಾರ್ಯ ನಿಂತಿದೆ, ಬೀದರ ಬಾಲ್ಕಿ ರಸ್ತೆ ಕಾಮಗಾರಿ ನಾಲ್ಕು ವರ್ಷಗಳಾದರು ಪೂರ್ಣಗೊಂಡಿಲ್ಲ, ಜಿಲ್ಲೆಯ ರೈತರ ಸಾಲ ಮನ್ನಾ ಆಗಿಲ್ಲ, ಕೋವಿಡ್ ನಿಂದ ಮೃತ ಕುಟುಂಬ ಗಳಿಗೆ ಇನ್ನೂ ಪರಿಹಾರ ದೊರೆತಿಲ್ಲ ಹೀಗೆ ಹಲವು ಸಂಕಷ್ಟ ಗಳಲ್ಲಿ ಬಾಲ್ಕಿಯ ಜನ ಬೇಯುತ್ತಿರುವಾಗ ಜನಾಶೀರ್ವಾದ ಅಂತ ಹೋದರೆ ಜನರು ಆಶಿರ್ವಾದ ಅಲ್ಲ ಪೊರಕೆ ಸೇವೆ ಮಾಡುವರು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.
ಈ ಬೆಳವಣಿಗೆ ಗಂಭೀರ ರೂಪ ಪಡೆದುಕೊಂಡಿದ್ದು ಭಗವಂತ ವರ್ಸಸ್ ಈಶ್ವರ ಕಾದಾಟ ಎಲ್ಲಿಗೆ ತೆಗೆದುಕೊಂಡು ಹೋಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ