HomeUncategorizedಪ್ರತಿಭಾವಂತ ವಿದ್ಯಾರ್ಥಿನಿಗೆ ಪ್ರೋತ್ಸಾಹ ಧನ

ಪ್ರತಿಭಾವಂತ ವಿದ್ಯಾರ್ಥಿನಿಗೆ ಪ್ರೋತ್ಸಾಹ ಧನ

ಬೆಳಗಾವಿ – ದಿ. 14 ರಂದು ಕೆ.ಪಿ.ಎಸ್. ಕೆ.ಕೆ.ಕೊಪ್ಪ, ಬೆಳಗಾವಿ ಗ್ರಾಮೀಣ ಶಾಲೆಯಲ್ಲಿ 2024-2025 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಷಯದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯಾದ ಕುಮಾರಿ ಗೀತಾ ಸಂಜೀವ ಪಾಗಾದ ಇವಳಿಗೆ ದಾನಿಗಳಾದ ಬೆಳಗಾವಿಯ ಎಸ್. ಬಿ. ಆಯ್ ನ ನಿವೃತ್ತ ವ್ಯವಸ್ಥಾಪಕರಾದ ರಾಜೇಂದ್ರ ಕಿತ್ತೂರ ಅವರು ಪ್ರೋತ್ಸಾಹ ಧನವಾದ ರೂ 10,000 ನ್ನು ಚೆಕ್ ಮೂಲಕ ನೀಡಿದರು.

ಈ ಪ್ರೋತ್ಸಾಹ ಧನದ ವಿತರಣಾ ಕಾರ್ಯಕ್ರಮದಲ್ಲಿ ರಾಜೇಂದ್ರ ಕಿತ್ತೂರ ಅವರ ಸಹೋದರರಾದ ಡಿ. ಬಿ.ಕಿತ್ತೂರ ಹಾಗೂ ನಾರಾಯಣ ಎಸ್. ನಾಯಿಕ ಹಾಗೂ ಶ್ರೀಮತಿ ಸುನೀತಾ ಎನ್. ನಾಯಿಕ ಅವರು ಉಪಸ್ಥಿತರಿದ್ದರು.

ಪ್ರೋತ್ಸಾಹ ಧನವನ್ನು ರಾಜೇಂದ್ರ ಕಿತ್ತೂರ ಅವರ ಅನುಪಸ್ಥಿತಿಯಲ್ಲಿ ಅವರ ಸಹೋದರರಾದ ದತ್ತಪ್ರಸನ್ ಮತ್ತು ಅವರ ಧರ್ಮಪತ್ನಿಯಾದ ಕೆ.ಪಿ.ಎಸ್,ಕೆ.ಕೆ.ಕೊಪ್ಪ ಪ್ರೌಢಶಾಲೆಯ ಹಿಂದಿ ಭಾಷಾ ಶಿಕ್ಷಕಿಯಾದ ಶ್ರೀಮತಿ ಕಲ್ಪನಾ ಬಿ. ಮುತಾಲಿಕ್ ಅವರು ವಿತರಿಸಿದರು.

ಈ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಎಸ್. ಎಸ್. ಹಿರೇಮಠ, ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರ ಕಾರ್ಯಾಲಯ, ಬೆಳಗಾವಿ ಹಾಗೂ ಎಮ್. ಎಸ್. ಮೇದಾರ, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬೆಳಗಾವಿ ಗ್ರಾಮೀಣ ವಲಯ, ಕೆ.ಪಿ.ಎಸ್. ಸಂಸ್ಥೆಯ ಪ್ರಾಂಶುಪಾಲರಾದ ಎ.ಬಿ. ಜಿಡ್ಡಿಮನಿ, ಉಪಪ್ರಾಂಶುಪಾಲರಾದ ಶ್ರೀಮತಿ ಡಾ. ದಾನಮ್ಮ ಝಳಕಿ ಹಾಗೂ ಕಾಲೇಜು ಮತ್ತು ಪ್ರೌಢಶಾಲೆಯ ಎಲ್ಲ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದಾನಿಗಳ ಪರವಾಗಿ ದತ್ತಪ್ರಸನ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಇಲಾಖೆಯ ಪರವಾಗಿ ಎಸ್. ಎಸ್. ಹಿರೇಮಠ ಅವರು ಹಾಗೂ ಎಮ್. ಎಸ್. ಮೇದಾರ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ 2024-25ನೇ ಸಾಲಿನಲ್ಲಿ ಎನ್.ಎಮ್.ಎಮ್.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾದ 5 ಜನ ವಿದ್ಯಾರ್ಥಿಗಳನ್ನು ಎಮ್.ಎಸ್. ಮೇದಾರ, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸನ್ಮಾನಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group