ಬೆಳಗಾವಿ – ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಕಲಾರಕೊಪ್ಪ ಶಾಲೆಗೆ 40 ವಿದ್ಯಾರ್ಥಿಗಳಿಗೆ ಟೀ ಶರ್ಟ್ ಮತ್ತು ಟ್ರ್ಯಾಕ್ ಪ್ಯಾಂಟ್ ವಿತರಣೆ ಮಾಡಿದ ಶ್ರೀಮತಿ ಬಸಲಿಂಗಮ್ಮಾ ಸಿದ್ದನಗೌಡ ಪಾಟೀಲ ಸಾ -ವಿರಪನಕೊಪ್ಪ.ಇವರು ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಿದ್ದಾರೆ
ಈ ಸಂದರ್ಭದಲ್ಲಿ ಪುಷ್ಪಾವತಿ ನಾಯ್ಕರ ಗ್ರಾಂ ಪಂಚಾಯಿತಿ ಸದಸ್ಯರು. ನಾಗಪ್ಪ ನಾಯ್ಕರ ಅಧ್ಯಕ್ಷರು ಎಸ್ ಡಿ ಎಮ್ ಸಿ .ಮಾಜಿ ಅಧ್ಯಕ್ಷರುಗಳಾದ ಬಸವರಾಜ ನಾಯ್ಕರ, ರಾಜೇಂದ್ರ ಪಾರಿಶ್ವಾಡ, ಗಣೇಶ ನಾಯ್ಕರ, ದಯಾನಂದ ನಾಯ್ಕರ, ಬಂಗಾರೆಪ್ಪಾ ನಾಯ್ಕರ, ನಿಂಗನಗೌಡ ಪಾಟೀಲ, ಚನಬಸಪ್ಪ ಕುಂದರಗಿ, ಯಲ್ಲಪ್ಪ ನಾಯ್ಕರ, ರವಿ ಮಾದಿಗರ, ಚಂದ್ರಗೌಡ ನಾಯ್ಕರ, ಹಿರಿಯ ಶಿಕ್ಷಕರಾದ ವಿಜಯಾನಂದ ಬಾಗೇವಾಡಿ, ಮುಖ್ಯ ಶಿಕ್ಷಕರು ಆನಂದಗೌಡ ಕಾದ್ರೊಳ್ಳಿ ಉಪಸ್ಥಿತರಿದ್ದರು.
ಇದೆ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ಈ ಗ್ರಾಮದ 5.ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.