spot_img
spot_img

ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

Must Read

spot_img
- Advertisement -

ಬೆಳಗಾವಿ – ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಶನ್ ವತಿಯಿಂದ ಪ್ರತಿಭಾ ಪೋಷಕ ಯೋಜನೆಯಡಿಯಲ್ಲಿ ಆಯ್ಕೆಯಾಗಿರುವ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 55 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣಾ ಕಾರ್ಯಕ್ರಮ ಗೋಕಾಕ ನಗರದ  ರೋಟರಿ ಸೇವಾ ಸಂಸ್ಥೆಯ ಭವನದಲ್ಲಿ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿದ ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಶನ್ ನ ಸಂಸ್ಥಾಪಕ ನಿರ್ದೇಶಕರಾದ ಡಾ. ಶಶಿಕಾಂತ ವಾಯ್. ಕುಲಗೋಡ ರವರು ಪ್ರತಿಭಾ ಪೋಷಕ ಯೋಜನೆಯ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಕೌಶಲ್ಯಯುಕ್ತ ವಿದ್ಯಾರ್ಥಿಗಳಾಗಿ ಭವ್ಯ ಭವಿಷತ್ತು ರೂಪಿಸಿಕೊಳ್ಳುವಂತೆ ಕರೆ ನೀಡಿದರು.

ಪ್ರತಿಭಾ ಪೋಷಕ ಯೋಜನೆಯ ರೂವಾರಿಗಳಾದ ಡಾ. ರವೀಂದ್ರ ಎನ್. ಗುರುವಣ್ಣವರ ರವರು ಆನ್ಲೈನ್ ಕ್ಲಾಸ್ ಗಳಲ್ಲಿ ಟ್ಯಾಬ್ ಬಳಕೆಯ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಕೋ- ಆರ್ಡಿನೇಟರ್ ಡಾ. ಕೀರ್ತಿ ಶಿವಕುಮಾರ ರವರು ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು.

- Advertisement -

ಗೋಕಾಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ಜಿ ಬಿ. ಬಳಿಗಾರ ಹಾಗೂ ಮೂಡಲಗಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಜಿತ ಮನ್ನಿಕೇರಿ ಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಆರ್ ಸಿ. ಎಫ್ ನ ಈ ಅಮೂಲ್ಯ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಸಮಾಜ ಹೆಮ್ಮೆ ಪಡುವ ಸಾಧಕರಾಗುವಂತೆ ಕರೆ ನೀಡಿದರು.

ಗೋಕಾಕ ನಗರದ ಖ್ಯಾತ ವೈದ್ಯರಾದ ಡಾ. ಉದಯ ಆಜರೆ ಯವರು ಅತಿಥಿಗಳಾಗಿ ಆಗಮಿಸಿದ್ದರು. ವಿದ್ಯಾರ್ಥಿಗಳ ಪೋಷಕರೂ ಉಪಸ್ಥಿತರಿದ್ದರು.

- Advertisement -
- Advertisement -

Latest News

ಕವನ : ಜೀವನ ಸತ್ಯ

 ಜೀವನ ಸತ್ಯ ಬೇವಿನ ಬೀಜವನ್ನು ನೆಟ್ಟರೆ ಬೇವು ಮಾತ್ರ ಬೆಳೆಯುತ್ತದೆ, ಸುಳ್ಳಿನ ನೆರಳಿನಲ್ಲಿ ಸತ್ಯ ಬೆಳೆಯುವುದಿಲ್ಲ. ಎಳ್ಳು ಬಿತ್ತಿದರೆ ಸಾಸಿವೆ ಬೆಳೆಯುವುದಿಲ್ಲ, ಕರ್ಮವೇ ಫಲ ಎಂದು ಜಗತ್ತು ಅರಿಯುವುದಿಲ್ಲ. ಕಲ್ಲಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group