ಮೂಡಲಗಿ-ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಸೋಲನ್ನು ಸವಾಲಾಗಿ ಸ್ವೀಕರಿಸಿ ಉತ್ತಮ ತರಬೇತಿ ಪಡೆದು ಮತ್ತೆ ಸಾಧನೆಗೆ ಸನ್ನದ್ಧರಾಗಬೇಕು. ಕ್ರೀಡಾಪಟುಗಳು ನಿರ್ಣಾಯಕರ ನಿರ್ಣಯಕ್ಕೆ ಬದ್ಧವಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಹಶೀಲ್ದಾರ ಶ್ರೀಶೈಲ ಗುಡುಮೆ ಹೇಳಿದರು.
ಪಟ್ಟಣದ ಲಕ್ಷ್ಮಣ ವಾಯ್ ಅಡಿಹುಡಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆ ಚಿಕ್ಕೋಡಿ ಹಾಗೂ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಗಳ ಮೂಡಲಗಿ, ಗೋಕಾಕ, ಹುಕ್ಕೇರಿ, ಚಿಕ್ಕೋಡಿ, ರಾಯಬಾಗ, ಅಥಣಿ, ಕಾಗವಾಡ, ನಿಪ್ಪಾಣಿ ಈ ಎಂಟು ತಾಲೂಕುಗಳ ಪ್ರೌಢ ಶಾಲಾ ಬಾಲಕ, ಬಾಲಕಿಯರ ಜಿಲ್ಲಾ ಮಟ್ಟದ ಕಬಡ್ಡಿ ಕ್ರೀಡಾ ಕೂಟದಲ್ಲಿ ಭಾಗಿಯಾಗಿ, ಕ್ರೀಡಾ ಜ್ಯೋತಿ ಸ್ವೀಕಾರ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ.ಹಿರೇಮಠ ಮಾತನಾಡಿ, ಮನಸ್ಸಿನ ಸಮತೋಲನ ಕಾಯ್ದುಕೊಳ್ಳಲು ಕ್ರೀಡೆ ಅವಶ್ಯವಾಗಿದೆ. ಮನಷ್ಯ ಒಂದಿಲ್ಲ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು, ಅದು ಅವನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ. ಮನಸ್ಸು ಸದೃಢವಾಗಿರಲು ನೆರವಾಗುವುದು ಮತ್ತು ಕ್ರೀಡೆಗಳು ವಿದ್ಯಾರ್ಥಿಗಳಿಗೆ ಮಾನಸಿಕ ದೈಹಿಕ ಬೆಳವಣಿಗೆ ಜೊತೆಗೆ ಒತ್ತಡ ಬದುಕಿಗೆ ಸಹಕಾರಿ ಆಗುವುದು ಎಂದು ಹೇಳಿದರು.
ಹಿರಿಯ ನ್ಯಾಯವಾದಿ ಕೆ.ಪಿ.ಮಗದುಮ್ಮ ಮಾತನಾಡಿ, ಇಂದಿನ ಮೊಬೈಲ್ ಯುಗದಲ್ಲಿ ಮಾನಸಿಕ ಆರೋಗ್ಯ ಕಾಪಾಡಲು ಕ್ರೀಡೆ ಪ್ರತಿಯೊಬ್ಬರಿಗೂ ಅವಶ್ಯವಾಗಿದೆ ಎಂದರು.
ಜಾನಪದ ಹಾಡುಗಾರ ಶಬ್ವೀರ ಡಾಂಗೆ ಮಾತನಾಡಿ,ನಾವು ಸಣ್ಣವರಿದ್ದಾಗ ನಿಜವಾದ ಎಲ್ಲಾ ಆಟಗಳನ್ನು ಆಡುತ್ತಿದ್ದೆವು.
ಈಗಿನ ವಿದ್ಯಾರ್ಥಿಗಳು/ಯುವ ಪೀಳಿಗೆ ಮೊಬೈಲನಲ್ಲಿ ಆಟಗಳನ್ನು ಆಡುತ್ತಿದ್ದಾರೆ.ಮೊಬೈಲನಿಂದ ವಿದ್ಯಾರ್ಥಿಗಳು ಹಾಳಾಗುತ್ತಿದ್ದಾರೆ, ವಿದ್ಯಾರ್ಥಿಗಳು ಆರೋಗ್ಯವಂತರಾಗಿರಬೇಕಾದರೆ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದರು
ಮುಖ್ಯ ಅತಿಥಿಯಾಗಿ ಪುರಸಭೆ ಅಧ್ಯಕ್ಷೆ ಖುರ್ಷಾದ ಅನ್ವರ ನಧಾಫ ,ಜಿಲ್ಲಾ ದೈಹಿಕ ಶಿಕ್ಷಣ ಪರೀವಿಕ್ಷಕರಾದ ಎ.ಜುನೆದಿ ಪಟೇಲ, ಪಿ ಎಸ್ ಐ ರಾಜು ಪೂಜೇರಿ, ತಾಲೂಕಾ ದೈಹಿಕ ಶಿಕ್ಷಣ ಪರೀವಿಕ್ಷಕರಾದ ಎಸ್.ಬಿ.ಹಳಿಗೌಡರ, ಸಿದ್ರಾಮ ಲೋಕನ್ನವರ, ಹಣಮಂತ ಕಂಕಣವಾಡಿ, ಸುಭಾಸ ಗೊಡ್ಯಾಗೋಳ, ಎ. ಪಿ.ಪರಸನ್ನವರ, ಈಶ್ವರ ಕಂಕಣವಾಡಿ, ಎಮ್.ಎಸ್.ಮುತ್ತೆನ್ನವರ,ಎಸ್.ಎಮ್. ನಾಗನೂರ, ಶಾಂತಕುಮಾರ ಬೆಂಗಳೂರು, ಸುಕಂದಾ ಬೆಂಗಳೂರು, ರಾಘವೇಂದ್ರ ಬೆಂಗಳೂರು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷರಾದ ಲಕ್ಷ್ಮಣ್ ಅಡಿಹುಡಿ ಸ್ವಾಗತಿಸಿದರು ಮತ್ತು ಕರಿ ಬಸವರಾಜು ಕಾರ್ಯಕ್ರಮ ನಿರೂಪಿಸಿದರು.

