ಸಾಲ ಪಡೆದ ಹಣವನ್ನು ಸದುಪಯೋಗ ಮಾಡಿಕೊಳ್ಳಿ – ದಿನೇಶ ಶರ್ಮಾ

Must Read

ಹಳ್ಳೂರ –  ಸಹಕಾರಿ ಸಂಘ ಸಂಸ್ಥೆಗಳು ಉನ್ನತ ಮಟ್ಟಕ್ಕೆ ಬೆಳೆಯಬೇಕಾದರೆ ಸಹಕಾರ ಅಗತ್ಯ ಸಾಲಗಾರರು ಸಾಲ ಪಡೆದ ಹಣವನ್ನು ದುರುಪಯೋಗ ಮಾಡಿಕೊಳ್ಳದೆ ಸದ್ಬಳಕೆ ಮಾಡಿಕೊಂಡು ಜೀವನದ ಅರ್ಥಿಕ ಮಟ್ಟವನ್ನು ಅಭಿವೃದ್ದಿ ಪಡಿಸಿಕೊಳ್ಳಬೇಕೆಂದು ಸೋಮೈಯ ಸಕ್ಕರೆ ಕಾರ್ಖಾನೆಯ ಮುಖ್ಯ ತಾಂತ್ರಿಕ ಅಧಿಕಾರಿ ದಿನೇಶ ಶರ್ಮಾ ಹೇಳಿದರು.

ಅವರು ಸಮೀರವಾಡಿ ಸೋಮೈಯ ಸಕ್ಕರೆ ಕಾರ್ಖಾನೆಯ ನೌಕರದಾರರ ಸಹಕಾರಿ ಪತ್ತಿನ ಸಂಘದ ವಾರ್ಷಿಕ ಸರ್ವ ಸಾದಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರ ಸಂಘಗಳು ಶೇರುದಾರರೊಡನೆ ಉತ್ತಮ ಬಾಂಧವ್ಯ ಬೆಳೆಸಿಕೊಂಡರೆ ಸಂಘ ಸಂಸ್ಥೆಗಳು ಹೆಮ್ಮರವಾಗಿ ಬೆಳೆಯುತ್ತವೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮನೋಹರ ಬಡಿವಾಳ ಮಾತನಾಡಿ, ಸೋಮೈಯ ಸಹಕಾರಿ ಸಂಘದ ಸಿಬ್ಬಂದಿಗಳು ಷೇರುದಾರರ ಜೊತೆ ಒಳ್ಳೆಯ ಸಂಬಂಧವಿಟ್ಟುಕೊಂಡು ತಮ್ಮ ನಿಯಮದ ಪ್ರಕಾರ ಸಾಲುಗಾರರಿಗೆ ಸಾಲದ ಸೌಲಭ್ಯ ಒದಗಿಸಬೇಕು ಈ ವರ್ಷ ಹೆಚ್ಚು ಲಾಭ ಪಡೆದಿದ್ದು ಸಂತೋಷದ ವಿಷಯ. ಸಹಕಾರಿ ಸಂಘವು ಉನ್ನತ ಮಟ್ಟಕ್ಕೆ ಬೆಳೆಯಲು ಎಲ್ಲರು ಪ್ರಾಮಾಣಿಕ ಪ್ರಯತ್ನ ಮಾಡೋಣವೆಂದು ಹೇಳಿದರು

ಆರ ವಿ ಕಂಬಾರ ವರದಿ ವಾಚನ ಮಾಡಿದರು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಷೇರುದಾರ ಮಕ್ಕಳಿಗೆ ಸನ್ಮಾನಿಸಿ ಪ್ರಮಾಣ ಪತ್ರ ನೀಡಿದರು.

2024 ನೇ ಸಾಲಿನಲ್ಲಿ ನಿಧನ ಹೊಂದಿದ ಕಾರ್ಮಿಕ ಷೇರುದಾರರ ಕುಟುಂಬಕ್ಕೆ ಚೆಕ್ ವಿತರಣೆ ಮಾಡಿದರು.
ಈ ಸಮಯದಲ್ಲಿ ಉಪಾಧ್ಯಕ್ಷ ಎಫ್ ಆರ್ ವಗ್ಗರ, ಮ ಯು ಕಾ ಬಸು ಮೇಲಪ್ಪಗೊಳ, ಆರ್ ಎನ್ ಸೋನವಾಲ್ಕರ, ಕೆ ವಾಯ್ ವಡೆಯರ, ಐ ಎಸ್ ಕುಳ್ಳೊಳ್ಳಿ, ಎಸ್ ಎಂ ಚೌದರಿ, ಪಿ ಎಸ್ ಶಿರೋಳ, ಎಂ ಬಿ ಶಿರಹಟ್ಟಿ, ಎಸ್ ಎಚ್ ಕರಡೆ,  ಸಿ ಎಸ್ ದೇಸನೂರ, ಚೀ ಎಂ ಹಮ್ಮಿದಡ್ಡಿ, ವಿ ಜಿ ಸತ್ತಿಗಿಹಳ್ಳಿ, ಪಿ ಎಸ್ ಪೂಜಾರಿ, ಸಿಬ್ಬಂದಿಗಳಾದ ಎಸ್ ಬಿ ಹಳ್ಳಿ, ಎಸ್ ಪಿ ಇಟ್ನಾಳ ಸೇರಿದಂತೆ ಅನೇಕರಿದ್ದರು.

ಕಾರ್ಯಕ್ರಮವನ್ನು ಸಂಗನಗೌಡ ಪಾಟಿಲ ನಿರೂಪಿಸಿದರು.

ವರದಿ: ಮುರಿಗೆಪ್ಪ ಮಾಲಗಾರ

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group