ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಬಯಲು ರಂಗ ಮಂದಿರ ಸದುಪಯೋಗಪಡಿಸಿಕೊಳ್ಳಬೇಕು – ಈರಣ್ಣ ಕಡಾಡಿ

Must Read

ಮೂಡಲಗಿ(ಕೌಜಲಗಿ): ಗ್ರಾಮೀಣ ಪ್ರದೇಶದ ಜನತೆಯ ಮನರಂಜನೆಗೆ ಬಯಲು ರಂಗ ಮಂದಿರಗಳು ಕೇಂದ್ರ ಸ್ಥಾನವಾಗಿದೆ. ಸದಾ ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡುವ ಮೂಲಕ ಬಯಲು ರಂಗ ಮಂದಿರದ ಸದುಪಯೋಗ ಮಾಡಿಕೊಳ್ಳಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಕೌಜಲಗಿ ಸಮೀಪದ ಮನ್ನಿಕೇರಿ ಗ್ರಾಮದ ಅಗಸಿ ಓಣಿಯಲ್ಲಿ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಡಿ ನಿರ್ಮಿಸಲಾದ ಬಯಲು ರಂಗ ಮಂದಿರ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಬಯಲು ರಂಗ ಮಂದಿರವು ಗ್ರಾಮದ ಸಾರ್ವಜನಿಕರ ಧಾರ್ಮಿಕ, ಸಾಮಾಜಿಕ ಕಾರ್ಯಗಳಿಗೆ ಅನುಕೂಲವಾಗಬೇಕೆಂಬ ಸದುದ್ದೇಶದಿಂದ ನಿರ್ಮಾಣ ಮಾಡಲಾಗಿದೆ ಎಂದರು.

ಸಮಾಜ ಅಭಿವೃದ್ಧಿ ಕಾರ್ಯಗಳಿಗೆ ಗ್ರಾಮಸ್ಥರ ಸಹಕಾರವಿರಬೇಕು. ಪರಸ್ಪರ ಸಹಕಾರ ಮನೋಭಾವದಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ. ಗ್ರಾಮದ ಪ್ರತಿ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು, ಸವಲತ್ತುಗಳನ್ನು ರೂಪಿಸಿದೆ ಗ್ರಾಮಸ್ಥರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕೌಜಲಗಿ, ಮೆಳವಂಕಿ ಹಾಗೂ ರಡೆರಟ್ಟಿ ಗ್ರಾಮಗಳಲ್ಲಿ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಡಿ ನಿರ್ಮಿಸಲಾದ ಬಸ್ ತಂಗುದಾನಗಳನ್ನು ಉದ್ಘಾಟಿಸಿದರು.

ಕೌಜಲಗಿ ಗ್ರಾಮದ ಸಿದ್ದಪ್ಪ ಬಿಸಗುಪ್ಪಿ, ಬಸವರಾಜ ಲೋಕನ್ನವರ, ಸಿದ್ದಪ್ಪ ಹಳ್ಳೂರ, ಶ್ರೀಶೈಲ ಗಾಣಿಗೇರ ಬೀರಪ್ಪ ಖಿಲಾರಿ, ರಮೇಶ ದಾನನ್ನವರ, ಮಹಾಂತೇಶ ಲಗಳಿ, ಬಸು ಪಟಗುಂದಿ, ಬಾಗಪ್ಪ ಸಣ್ಣಕ್ಕಿ, ಪರಸಪ್ಪ ಖಿಲಾರಿ, ಮನ್ನಿಕೇರಿ ಗ್ರಾಮದ ಈರಪ್ಪ ನಾಯ್ಕರ, ಮುತ್ತೆಪ್ಪ ನಾಂವಿ, ಮಹಾಂತೇಶ ದಳವಾಯಿ, ಬಸವರಾಜ ಅಂಗಡಿ, ಯಲ್ಲಪ್ಪ ನಾಯ್ಕರ, ಬಸವರಾಜ ನಾಯ್ಕರ, ರಾಜು ಗೌಡರ, ಬಸವರಾಜ ಒಣಕಣವಿ, ಮಹಾಂತೇಶ ಕಂಬಾರ, ಗೂಳಪ್ಪ ನಾಡಗೌಡ, ರಡೆರಟ್ಟಿ ಗ್ರಾಮದ ಯಲ್ಲಾಲಿಂಗ ಮಠದ ಪೂಜ್ಯ ಶ್ರೀ ಮಾಧವಾನಂದ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು.

ಶೇಖರ ಮೂಡಲಗಿ, ಶಿವಪುತ್ರ ಪಾಟೀಲ, ಚನ್ನಪ್ಪ ಬಿಸಗುಪ್ಪಿ, ಮುತ್ತೆಪ್ಪ ಗೌರಿ, ಶಂಕರಗೌಡ ಪಾಟೀಲ, ಮೆಳವಂಕಿ ಗ್ರಾಮದ ಮಾಜಿ ಅಧ್ಯಕ್ಷ ಅಡಿವೆಪ್ಪ ಚಿಪ್ಪಲಕಟ್ಟಿ, ಬಸವರಾಜ ಕಾಪಸಿ, ರಾಮಣ್ಣ ಕಾಪಸಿ, ಆನಂದ ಮೂಡಲಗಿ, ಅಡಿವಯ್ಯ ಹಿರೇಮಠ, ನಿಂಗಪ್ಪ ಕಾಪಸಿ ಸೇರಿದಂತೆ ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Latest News

ಅರಭಾವಿಯಲ್ಲಿ ವಿಶ್ವ ಮಣ್ಣು ದಿನಾಚರಣೆ

ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಲ್ಲಿ ದಿನಾಂಕ: ೦೫.೧೨.೨೦೨೫ ರಂದು ವಿಶ್ವ ಮಣ್ಣು ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ತೋಟಗಾರಿಕೆ ವಿಸ್ತರಣಾ ಮತ್ತು...

More Articles Like This

error: Content is protected !!
Join WhatsApp Group