ಮೈಸೂರು – ನಗರದ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆ ಮತ್ತು ಪಿಯು ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಟಾರ್ಗೆಟ್ ಬಾಲ್ ಕ್ರೀಡೆಗೆ ಆಯ್ಕೆಯಾಗಿದ್ದು, ಜ13ರಿಂದ 16ರವರೆಗೆ ಹೈದರಾಬಾದ್‍ನ ತೆಲಂಗಾಣ ರಾಜ್ಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಆಡಳಿತಾಧಿಕಾರಿ ಕಾಂತಿ ನಾಯಕ್, ಪ್ರಾಂಶುಪಾಲ ಸುನಿಲ್‍ಕುಮಾರ್ ಎಂ.ಎಸ್., ಮುಖ್ಯ ಶಿಕ್ಷಕ ಮಹಮದ್ ಫಾರೂಕ್ ಮತ್ತು ದೈಹಿಕ ಶಿಕ್ಷಣ ಶಿಕ್ಷಕರಾದ ಕೀರ್ತಿಕುಮಾರ್ ಎಂ. ಕ್ರೀಡಾಪಟುಗಳನ್ನು ಅಭಿನಂದಿಸಿದರು.
ಕ್ರೀಡಾಪಟುಗಳು ಎಡದಿಂದ ಬಲಕ್ಕೆ ವಿಕಾಸ್ ಬಿ.ಎಂ., ಆದಿತ್ಯ ನಾಯಕ್, ಮನೋಜ್ ಎಂ., ವಿವೇಕ್ ಎಂ.ವಿ., ಅನಂತ ಎಂ.ಎಂ. ಮತ್ತು ರೋಹಿತ್ ಎಂ.ಪಿ.