ಸಿಂದಗಿ; ದೇಶದ ರತ್ನತ್ರಯರಾದ ದೇಶ ಕಾಯುವ ಯೋಧ, ಅನ್ನವನ್ನು ನೀಡುವ ರೈತ ಅಕ್ಷರ ಜ್ಞಾನವನ್ನು ಕೊಟ್ಟು ಮಗುವಿನ ಅಭಿವೃದ್ಧಿ ಜೊತೆಗೆ ಉತ್ತಮ ಸಮಾಜ ನಿರ್ಮಾಣ ಮಾಡುವ ಶಿಕ್ಷಕನ ಪಾತ್ರ ಬಹು ಅಮೂಲ್ಯವಾದುದು ಇವರು ಮೂವರು ದೇಶದ ಬೆನ್ನೆಲುಬು, ಹೇಗೆ ಒಂದು ಕಲ್ಲನ್ನು ಶಿಲ್ಪಿಯಾದವನು ಅದನ್ನು ಕೆತ್ತಿ ಮೂರ್ತಿಯನ್ನಾಗಿ ಮಾಡುವನು ಹಾಗೆ ಶಿಕ್ಷಕನಾದವನು ಮಕ್ಕಳಿಗೆ ಅಕ್ಷರಗಳ ಜ್ಞಾನವನ್ನು ನೀಡಿ ಜ್ಞಾನವಂತನ್ನಾಗಿ ಮಾಡುವವನು ಎಂದು ಸಂಸ್ಥೆಯ ನಿರ್ದೇಶಕ ಜನಪದ ಸಾಹಿತಿ ವಿಶ್ರಾಂತಿ ಪ್ರಾಧ್ಯಾಪಕ ಡಾ. ಎಂ.ಎಂ. ಪಡಶೆಟ್ಟಿ ಹೇಳಿದರು.
ಪಟ್ಟಣದ ಭೀಮಾ ಯುನಿವರ್ಸಲ್ ಸೆಂಟ್ರಲ್ ಶಾಲೆಯಲ್ಲಿ ಹಮ್ಮಿಕೊಂಡಿರುವ ಶಿಕ್ಷಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಶಾಲೆಯ ಪ್ರಾಂಶುಪಾಲೆ ಡಾ. ಕೆ. ಆರ್, ಸುಶೀಲಾ ಮಾತನಾಡಿ, ಮಗು ಶಿಕ್ಷಣವನ್ನು ಪಡೆದು ಮಾನಸಿಕ ವಿಕಾಸ ಹೊಂದುವರ ಜೊತೆಗೆ ಆತ ಸಮಾಜದಲ್ಲಿ ಉತ್ತಮವಾಗಿ ಜೀವಿಸಲು ಶಿಕ್ಷಣದ ಅವಶ್ಯವಾಗಿದೆ, ಶಿಕ್ಷಣ ಜೊತೆಗೆ ಮಗು ಸಂಸ್ಕಾರ ಕಲಿಯುವುದು ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ನಿರ್ದೇಶಕರಾದ ಜಿ.ಕೆ. ಪಡಗಾನೂರ, ಶರಣು ಮಾವೂರ ಮತ್ತು ಶಾಂತು ಕುಂಬಾರ ಅವರು ಉಪಸ್ಥಿತರಿದ್ದರು.
ಪಟ್ಟಣದ ಭೀಮಾ ಯುನಿವರ್ಸಲ್ ಸೆಂಟ್ರಲ್ ಶಾಲೆಯಲ್ಲಿ ಹಮ್ಮಿಕೊಂಡಿರುವ ಶಿಕ್ಷಕ ದಿನಾಚರಣೆ ಕಾರ್ಯಕ್ರಮ ಶಿಕ್ಷಕರು ವೃಂದದವರು, ಪ್ರಾಂಶುಪಾಲರು, ಮತ್ತು ಮಕ್ಕಳು ಭಾಗವಹಿಸಿದ್ದರು.

