ಶಿಕ್ಷಕರ ಸ್ನೇಹಜೀವಿ ಶೈಕ್ಷಣಿಕ ಅಭಿವೃದ್ಧಿ ಹರಿಕಾರರು ಆನಂದ ಮಾಮನಿಯವರು – ಜಯಕುಮಾರ ಹೆಬಳಿ

Must Read

ಸವದತ್ತಿ : “ ಆನಂದ ಮಾಮನಿಯವರು ಶೈಕ್ಷಣಿಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಜೊತೆಗೆ ಶಿಕ್ಷಕರ ಸ್ನೇಹಜೀವಿಯಾಗಿ ಜನಮನದಲ್ಲಿ ಉಳಿದಿರುವರು. ತಾಲೂಕಿನ ಗುರುಭವನಕ್ಕೆ ತಮ್ಮದೇ ಕೊಡುಗೆ ನೀಡುವ ಮೂಲಕ ಜಿಲ್ಲೆಯಲ್ಲಿಯೇ ಮಾದರಿ ಗುರುಭವನ ನಿರ್ಮಾಣದಲ್ಲಿ ಕೈ ಜೋಡಿಸಿರುವರು.ದೇವರು ಅವರಿಗೆ ಆಯುರಾರೋಗ್ಯ ನೀಡಲಿ”ಎಂದು ಬೆಳಗಾವಿ ಜಿಲ್ಲೆಯ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಜಯಕುಮಾರ ಹೆಬಳಿ ಹೇಳಿದರು.

ಅವರು ಸವದತ್ತಿಯ ಶಾಸಕರು ರಾಜ್ಯದ ವಿಧಾನಸಭಾ ಉಪಸಭಾಧ್ಯಕ್ಷರು ಆಗಿರುವ ಆನಂದ ಮಾಮನಿಯವರ ೫೫ ನೆಯ ಜನ್ಮದಿನದ ಹುಟ್ಟು ಹಬ್ಬದ ಸಂದರ್ಭದಲ್ಲಿ ಶಿಕ್ಷಕರ ಸಂಘದ ಪದಾಧಿಕಾರಿಗಳೊಂದಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಸಹಕಾರ್ಯದರ್ಶಿಗಳಾದ ಕೆ.ಎಸ್.ರಾಚನ್ನವರ,ಸಂಘಟನಾ ಕಾರ್ಯದರ್ಶಿ ರಮೇಶ ಅಣ್ಣೀಗೇರಿ, ಸವದತ್ತಿ ತಾಲೂಕ ಘಟಕದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ, ನೌಕರರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಆರ್.ವ್ಹಿ.ಹೈಬತ್ತಿ,ಸವದತ್ತಿ ತಾಲೂಕಿನ ನಿರ್ದೇಶಕರಾದ ವೀರೇಶ ಚಂದರಗಿ ಮೊದಲಾದವರು ಉಪಸ್ಥಿತರಿದ್ದು ಹುಟ್ಟು ಹಬ್ಬದ ಶುಭಾಶಯ ಕೋರಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group