ಶಿಕ್ಷಕರಿಗೆ ಕಿರುಕಳ:ಸಂಸ್ಥೆಯ ಅಧ್ಯಕ್ಷರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶಿಕ್ಷಕರ ಮನವಿ

0
511

ಮೂಡಲಗಿ: ಅಥಣಿ ತಾಲ್ಲೂಕಿನ ಸತ್ತಿ ಗ್ರಾಮದ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಲಕ್ಷ್ಮಣ ನಾಯಿಕ ಮತ್ತು ಅಲ್ಲಿಯ ಸಿಬ್ಬಂದಿಯ ಮೇಲೆ ಆಡಳಿತ ಮಂಡಳಿಯ ಅಧ್ಯಕ್ಷರು ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಮೂಡಲಗಿ ತಾಲ್ಲೂಕ ಘಟಕವು ಶನಿವಾರ ತಹಶೀಲ್ದಾರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ನೀಡಿದರು.

ಸತ್ತಿ ಬಸವೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಾರುತಿ ಹೊನಕಡಬಿ ಅವರ ಮೇಲೆ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಸಂಘದ ಅಧ್ಯಕ್ಷ ಬಿ.ಎಂ. ಬೋರಗಲ್, ಉಪಾಧ್ಯಕ್ಷ ಆರ್.ಪಿ. ಭಾಗೋಜಿ, ಪ್ರಧಾನ ಕಾರ್ಯದರ್ಶಿ ವೈ.ಕೆ. ಮಾರಿಹಾಳ, ಎಂ.ಆರ್. ತೋಟಗಿ, ಆರ್.ಎಂ. ಗುಡಸಿ, ಎಲ್.ಎಂ. ಪಂಚಗಾಂವಿ, ಪಿ.ಎಂ. ಶಿವಾಪುರ, ಎ.ಎಂ. ಹೆಗ್ಗಾಣಿ, ಜೆ.ಬಿ. ಓಂಕಾರಿ, ಎಸ್.ಪಿ. ಕಪ್ಪಲಗುದ್ದಿ, ಬಿ.ಆರ್. ಮುಂಬರಡ್ಡಿ, ಐ.ಎ. ಪಾಟೀಲ, ಇಸಾಕ ಮೂಡಲಗಿ, ಬೌರಮ್ಮ ಬಿ. ನಿಡಸೋಸಿ ಇದ್ದರು.