ಸಿಂದಗಿ; ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕನ್ನಡಾಭಿಮಾನಿ ಚಟುವಟಿಕೆಗಳ ಪರಿಗಣನೆ ಮಾಡಿ, ಶಿಕ್ಷಣ ಕ್ಷೇತ್ರದಲ್ಲಿ ತಾವು ಮಾಡಿದ ಸೇವೆಯನ್ನು ಗುರುತಿಸಿ ತನು ಫೌಂಡೇಶನ್ ನ ದಶಮಾನೋತ್ಸವ ಹಾಗೂ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಕಾರ್ಯಕ್ರಮ ದಲ್ಲಿ ತನು ಕನ್ನಡ ಮನ ಕನ್ನಡ ರಾಜ್ಯ ಪ್ರಶಸ್ತಿ -೨೦೨೫ ಸಮಾರಂಭ ದಿ. ೨೩ ಸಂಜೆ ೪ ಗಂಟೆಗೆ ವಿಜಯಪುರದ ಶ್ರೀ ಕಂದಗಲ್ ಹಣಮಂತರಾಯ ರಂಗ ಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ಜ್ಞಾನ ಭಾರತಿ ಶಾಲೆಯ ಶಿಕ್ಷಕ ಬುಳ್ಳಪ್ಪ, ಡಿ ಇವರಿಗೆ ಈ ವರ್ಷದ ಪ್ರಶಸ್ತಿ ಪುರಸ್ಕಾರ ನೀಡಲಿದ್ದಾರೆ.
ತಾಲೂಕಿನ ಕಕ್ಕಳಮೆಲಿ ಗ್ರಾಮದಲ್ಲಿ ಜನಿಸಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ದಾವಣಗೆರೆ ಜಿಲ್ಲೆಯಲ್ಲಿ ಮುಗಿಸಿ puc ಹಾಗೂ ಡಿ. ಇಡಿ ಪದವಿಯನ್ನು ಸಿಂದಗಿಯಲ್ಲಿ ಮುಗಿಸಿ ನಂತರ ಸಿಂದಗಿ ನಗರದಲ್ಲಿರುವ ಪ್ರತಿಷ್ಠಿತ ಸಂಸ್ಥೆಯಾದ ಜ್ಞಾನ ಭಾರತಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೧೨ ರ ಸೆಪ್ಟೆಂಬರ್ ೨೪ ರಂದು ಸರ್ಕಾರದ ಅನುದಾನಕ್ಕೆ ಒಳಪಟ್ಟು ಇಂದಿಗೆ ೧೩ ವರ್ಷ ಪೂರೈಸಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಹೀಗಿರುವಾಗ ಅನುದಾನಿತ ಪ್ರಾಥಮಿಕ ಶಾಲೆಗಳ ತೊಂದರೆಗಳನ್ನು ನಿವಾರಿಸುವ ಸಲುವಾಗಿ ೨೦೧೯ ರಿಂದ ಅನುದಾನಿತ ಪ್ರಾಥಮಿಕ ಶಾಲೆಗಳ ತಾಲೂಕ ಅಧ್ಯಕ್ಷರು ಆಗಿ ೨ ಬಾರಿ ಅವಿರೋದವಾಗಿ ಆಯ್ಕೆ ಯಾಗಿ ಶಿಕ್ಷಕರ ಸಮಸ್ಸೆಗಳನ್ನು ಪರಿಹಾರಿಸುತ್ತಾ ಶಿಕ್ಷಣ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಾ ಜಿಲ್ಲೆಯಲ್ಲಿಯೇ ಮಾದರಿ ತಾಲೂಕು ಹಾಗೂ ಮಾದರಿ ಅಧ್ಯಕ್ಷರು ಎಂದು ಗುರುತಿಸಿ ಕೊಡಿದ್ದಾರೆ. ಅಲ್ಲದೆ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತಾ ಕನ್ನಡ ಸಾಹಿತ್ಯ ಗೆಳೆಯರ ಬಳಗ ಸಿಂದಗಿ, ರಾಗ ರಂಜನಿ ಸಂಗೀತ ಅಕಾಡಮಿ ಹೀಗೆ ಹಲವಾರು ಕ್ಷೇತ್ರ ಗಳಲ್ಲಿ ಕೆಲಸ ಗಳನ್ನು ಮಾಡುತ್ತಾ ಸಕ್ರಿಯವಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

