ಸವದತ್ತಿ: ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದಲ್ಲಿ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸಾಹಿತಿಗಳಾದ ವೈ. ಬಿ. ಕಡಕೋಳ ರಿಗೆ ಕಲಬುರಗಿ ಯ ಕನ್ನಡ ನುಡಿಮುತ್ತು ಸಾಹಿತ್ಯ ವೇದಿಕೆಯವರು ಇದೇ ಡಿಸೆಂಬರ್ 2 ಮತ್ತು 3 ರಂದು ಜರುಗಿಸುತ್ತಿರುವ ಎರಡು ದಿನಗಳ ಶರಣರ ನಾಡಿನಲ್ಲಿ ಸಾಹಿತ್ಯ ಸಂಭ್ರಮ ಎಂಬ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ವೈ. ಬಿ. ಕಡಕೋಳ ರಿಗೆ ಸಿದ್ದೇಶ್ವರ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದಾಗಿ ತಿಳಿಸಿದ್ದಾರೆ.
ಶಿಕ್ಷಕ ವೃತ್ತಿ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಕೃತಿಗಳನ್ನು ಹೊರ ತಂದ ವೈ ಬಿ ಕಡಕೋಳ ರಿಗೆ ಈಗಾಗಲೇ ಅಜೂರ್ ಸಾಹಿತ್ಯ ಪ್ರತಿಷ್ಠಾನ. ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ, ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ಡೆಪ್ಯುಟಿ ಚನ್ನಬಸಪ್ಪ ಪ್ರತಿಷ್ಠಾನದ ಲೀಲಾ ಕಲಕೋಟಿ ದತ್ತಿ ಪ್ರಶಸ್ತಿ, ಬೇಂದ್ರೆ ಕಾವ್ಯ ಪುರಸ್ಕಾರ, ನರಗುಂದ ಪತ್ರೀವನದ ಬಿಲ್ವ ಶ್ರೀ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿ ಗಳು ಇವರ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿ ಗೌರವಿಸಲಾಗಿದೆ.
ಇವರ ಮುಡಿಗೆ ಈಗ ಸಿದ್ದೇಶ್ವರ ಶ್ರೀ ಗೌರವ ದೊರೆತಿದೆ. ಕಲಬುರ್ಗಿಯ ದರ್ಶನಾಪುರ ರಂಗಮಂದಿರದಲ್ಲಿ (ಕನ್ನಡ ಭವನ) ಜರಗುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಡಿನ ಖ್ಯಾತ ಸಾಹಿತಿಗಳಾದ ಸ್ವಾಮೀರಾವ್ ಕುಲಕರ್ಣಿ ಯವರ ಅಧ್ಯಕ್ಷತೆಯಲ್ಲಿ ಜರಗುವ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿರುವರು.
ಕಡಕೋಳ ಗುರುಗಳು ಕೇವಲ ಸಾಹಿತಿ ಮಾತ್ರವಲ್ಲದೆ ಅಪ್ಪ ನನ್ನ ಹೊಡಿಬೇಡಪ್ಪ, ಅಮ್ಮಾ ನಾನು ಶಾಲೆಗೆ ಹೋಗುವೆ, ಆಕಾಶ ಬುಟ್ಟಿ, ಸರು(ಹೆಳವನ ಮಗಳು) ಕಿರು ಚಿತ್ರದಲ್ಲಿ ಅಭಿನಯಿಸುವ ಮೂಲಕ ಕಿರುತೆರೆ ಕಲಾವಿದರಾಗಿ ತಮ್ಮನ್ನು ತೊಡಗಿಸಿಕೊಂಡಿರುವರು. ಇವರ ರಚನೆಯ ‘ಹಚ್ಚು ದೀಪವ ಗೆಳತಿ’ ಹಾಡಿಗೆ ರಾಜ್ಯ ಮಟ್ಟದ ಸಿರಿಗನ್ನಡ ಗೌರವ ಪ್ರಶಸ್ತಿ ಕೂಡ ದೊರೆತಿದೆ. ಇವರ ಸಾಹಿತ್ಯ ಕೃತಿ ‘ಪಯಣಿಗ’ ಕ್ಕೆ ಅಕ್ಷರ ಲೋಕದ ನಕ್ಷತ್ರ ಈಗಾಗಲೇ ದೊರೆತಿದೆ. ಆಕಾಶ ಬುಟ್ಟಿ ಕಿರುಚಿತ್ರ ದ ಚಿತ್ರ ಕಥೆ ಗೆ ಬೆಂಗಳೂರಿನಲ್ಲಿ ಜರುಗಿದ ಪುನೀತ್ ಪ್ರಶಸ್ತಿ ಸಮಾರಂಭದಲ್ಲಿ ಉತ್ತಮ ಕಥೆಗಾಗಿ ಪುನೀತ್ ಪ್ರಶಸ್ತಿ ಕೂಡ ಇವರಿಗೆ ಇತ್ತೀಚೆಗೆ ದೊರೆತಿದ್ದು. ಪ್ರಸಕ್ತ ಅಕ್ಷರ ತಾಯಿ ಲೂಸಿ ಸಾಲ್ಡಾನಾ ಜೀವನ ಚಿತ್ರಣದ ಇವರ ಕಥೆ ಆಧರಿಸಿದ ನಾನು ಲೂಸಿ ಕಿರುಚಿತ್ರ ಇತ್ತೀಚೆಗೆ ಕಿರುಚಿತ್ರ ಚಿತ್ರೀಕರಣದಲ್ಲಿ ತೊಡಗಿದೆ.