Homeಸುದ್ದಿಗಳುಶಿಕ್ಷಕರಿಗೆ ಸನ್ಮಾನ: ಗೋಕಾಕನಲ್ಲಿ ಯಶಸ್ವಿ 'ಗುರುವಂದನಾ ಹಾಗೂ ಪ್ರಶಸ್ತಿ ಪ್ರದಾನ' ಕಾರ್ಯಕ್ರಮ

ಶಿಕ್ಷಕರಿಗೆ ಸನ್ಮಾನ: ಗೋಕಾಕನಲ್ಲಿ ಯಶಸ್ವಿ ‘ಗುರುವಂದನಾ ಹಾಗೂ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮ

ಗೋಕಾಕ: ಶಿಕ್ಷಕರನ್ನು ಗೌರವಿಸುವ ಮತ್ತು ಅವರ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ, ಡಾ. ಸರ್ವಪಲ್ಲಿ ರಾಧಾಕೃಷ್ಣ ಜಯಂತ್ಯುತ್ಸವದ ನಿಮಿತ್ತ ಗುರುಸ್ಮೃತಿ ಸಂಸ್ಥೆಯು ಸೆಪ್ಟೆಂಬರ್ 5, 2025ರಂದು ಕೆ.ಎಲ್.ಇ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಗುರುವಂದನಾ ಹಾಗೂ ಪ್ರಶಸ್ತಿ ಪ್ರಧಾನ’ ಸಮಾರಂಭವನ್ನು ಯಶಸ್ವಿಯಾಗಿ ಆಯೋಜಿಸಿತ್ತು.

​ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ಶೂನ್ಯ ಸಂಪಾದನಮಠದ ಪ.ಪೂ.ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳು, ಗುರುಗಳ ಮಹತ್ವ ಮತ್ತು ಸಮಾಜ ನಿರ್ಮಾಣದಲ್ಲಿ ಅವರ ಪಾತ್ರದ ಬಗ್ಗೆ ಆಶೀರ್ವಚನ ನೀಡಿದರು.

ಚಿಕ್ಕೋಡಿಯ ಸಂಸದರಾದ ಕುಮಾರಿ ಪ್ರಿಯಾಂಕಾ ಸ. ಜಾರಕಿಹೊಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ಶಿಕ್ಷಕರು ಸಮಾಜದ ನಿಜವಾದ ರೂವಾರಿಗಳು. ಅವರ ನಿಸ್ವಾರ್ಥ ಸೇವೆಗೆ ನಾವು ಯಾವಾಗಲೂ ಕೃತಜ್ಞರಾಗಿರಬೇಕು” ಎಂದು ಹೇಳಿದರು.

ಗುರುಸ್ಮೃತಿ ಸಂಸ್ಥೆಯ ಗೌರವಾಧ್ಯಕ್ಷರಾದ ಸೋಮಶೇಖರ ಮಗದುಮ್ಮ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಗೌರವಿಸುವ ಈ ರೀತಿಯ ಕಾರ್ಯಕ್ರಮಗಳು ಸಮಾಜದ ಪ್ರಗತಿಗೆ ಅತ್ಯಗತ್ಯ ಎಂದರು.

ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಹಣಮಂತ ನಿರಾಣಿ ಅವರು ಪ್ರಶಸ್ತಿ ಪ್ರದಾನ ನೆರವೇರಿಸಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದರು.

​ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಡಾ. ಸಪ್ನಾ ಎಸ್. ಆನಿಗೋಳ, ಗೋಕಾಕ್‌ನ ಕ್ಷೇತ್ರ ಶಿಕ್ಷಣಾಧಿಕಾರಿ  ಜಿ. ಬಿ. ಬಳಿಗಾರ ಮತ್ತು ಚಿಕ್ಕೋಡಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ  ಎಸ್. ಎಮ್. ಲೋಕಣ್ಣವರ ಅವರು, ಶಿಕ್ಷಕರ ಬದ್ಧತೆ ಮತ್ತು ದೇಶ ನಿರ್ಮಾಣದಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಬೆಳಕು ಚೆಲ್ಲಿದರು.

ಸಮಾರಂಭದಲ್ಲಿ ಶಿಕ್ಷಣ, ವೈದ್ಯಕೀಯ ಮತ್ತು ಸಮಾಜ ಸೇವಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಮಹನೀಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
“ಗೋಕಾವಿ ಗುರುರತ್ನ” ಪ್ರಶಸ್ತಿ: ನಿವೃತ್ತ ಪ್ರಾಧ್ಯಾಪಕರಾದ  ಬಿ. ಎನ್. ಹುಲಕುಂದ ಅವರಿಗೆ,
ದಿ. ಡಾ|| ಪಾರ್ವತಿ ಹೊಸಮನಿ “ವೈದ್ಯರತ್ನ” ಪ್ರಶಸ್ತಿ: ಖ್ಯಾತ ವೈದ್ಯರಾದ ಡಾ|| ಅಶೋಕ ಮುರಗೋಡ ಅವರಿಗೆ, ದಿ. ಭೀಮಪ್ಪ ತೋಳಿ “ಸೇವಾರತ್ನ” ಪ್ರಶಸ್ತಿ: ಕೆ.ಎಲ್.ಇ. ಸಂಸ್ಥೆಯ ನಿರ್ದೇಶಕರಾದ  ಜಯಾನಂದ ಮುನವಳ್ಳಿ ಅವರಿಗೆ, ದಿ. ಜಿ. ಬಿ. ತಾಂವಶಿ “ಶಿಕ್ಷಣ ರತ್ನ” ಪ್ರಶಸ್ತಿ: ಚೈತನ್ಯ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ  ವಾಯ್. ಬಿ. ಪಾಟೀಲ ಅವರನ್ನು ಈ ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಶಿಕ್ಷಣ, ಕಲೆ ಮತ್ತು ಇತರ ಕ್ಷೇತ್ರಗಳಲ್ಲಿ ಅಸಾಧಾರಣ ಸೇವೆ ಸಲ್ಲಿಸಿದವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಪದವಿ ವಿಭಾಗ:  ಶಂಕರ ನಿಂಗನೂರ, ಶ್ರೀ ರಾಮಲಿಂಗೇಶ್ವರ ಪದವಿ ಮಹಾವಿದ್ಯಾಲಯ, ಕಲ್ಲೋಳಿ,  ಸುರೇಶ ಮುದ್ದಾರ, ಜೆ.ಎಸ್.ಎಸ್. ಬಿಎಡ್. ಕಾಲೇಜ, ಗೋಕಾಕ
ಪದವಿ ಪೂರ್ವ ವಿಭಾಗ:  ಬಸವರಾಜ ಹಾದಿಮನಿ, ಸ.ಪ.ಪೂ. ಕಾಲೇಜಿನ ಪ್ರಾಚಾರ್ಯರು, ಶ್ರೀಮತಿ ಅನ್ನಪೂರ್ಣ ಕುರಬೇಟ, ಸ.ಪ.ಪೂ. ಕಾಲೇಜಿನ ಪ್ರಾಚಾರ್ಯರು, ಗೋಕಾಕ
ಪ್ರೌಢಶಾಲೆ ವಿಭಾಗ: ರಾಜಕುಮಾರ ಸರ್, ಫೋರ್ಬ್ಸ್ ಅಕಾಡಮಿ, ಗೋಕಾಕ ಫಾಲ್ಸ್,  ಡಿ. ಎಮ್. ಬೋಳೆತ್ತಿನ, ಕೆ.ಎಲ್.ಪಿ.ಎಸ್. ಶಾಲೆ, ನಾಗಲಿಂಗ ನಗರ, ಎಸ್. ಕೆ. ಮಠದ, ಎಸ್.ಸಿ.ವಿ.ಪಿ. ಶಾಲೆ, ಗೋಕಾಕ, ಶ್ರೀಮತಿ ಲೀಲಾವತಿ ಕುರಂದವಾಡ, ಗಂಡು ಮಕ್ಕಳ ಶಾಲೆ, ನಂದಗಾಂವ
ಪ್ರಾಥಮಿಕ ವಿಭಾಗ:  ಈರಪ್ಪ ಕಡಕೋಳ, ಸರಕಾರಿ ಪ್ರಾಥಮಿಕ ಶಾಲೆ, ಮೆಳವಂಕಿ,  ಶಂಕರ ಕ್ಯಾಸ್ತಿ, ಸರಕಾರಿ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರು, ಬೆಂಗಳೂರು,  ಬಸವರಾಜ ಮುರಗೋಡ, ಸ.ಪ್ರಾ.ಶಾಲೆ, ಕೋಟಿನತೋಟ, ಶ್ರೀಮತಿ ಯಾಸ್ಮಿನುನ್ನಿಸಾ ಲತೀಫ, ಸರಕಾರಿ ಉರ್ದು ಶಾಲೆ, ಗೊಡಚನಮಲ್ಕಿ, ಶ್ರೀಮತಿ ಪಾರ್ವತಿ ಎಮ್. ಗೋಲಬಾವಿ, ಸೆಂಟ್ ಮೇರಿಸ್ ಪ್ರಾಥಮಿಕ ಶಾಲೆ, ಮೂಡಲಗಿ.
ಕಲೆ ಮತ್ತು ಇತರ ವಿಭಾಗಗಳು:
ಚಿತ್ರಕಲಾ ವಿಭಾಗ:  ಅಪ್ಪಾಸಾಹೇಬ ಪಾಟೀಲ, ಸರಕಾರಿ ಪ್ರೌಢಶಾಲೆ, ಖಾನಟ್ಟಿ
ದೈಹಿಕ ಶಿಕ್ಷಣ ವಿಭಾಗ:  ಬಿ. ಕೆ. ಘಸ್ತಿ, ನವಪ್ರಭಾ ಪ್ರೌಢಶಾಲೆ, ತುಕ್ಕಾನಟ್ಟಿ
ಯೋಗ ಶಿಕ್ಷಕರು:  ವಾಯ್. ಎಚ್. ಕುರಬಗಟ್ಟಿ, ಗೋಕಾಕ
ಸಂಗೀತ ವಿಭಾಗ:  ನಾರಾಯಣ ಜಾಧವ, ಸಂಗೀತ ಶಿಕ್ಷಕರು, ಶಿಂಗಳಾಪೂರ
ನೃತ್ಯ ವಿಭಾಗ: ಕು. ಜ್ಯೋತಿ ಕೌಜಲಗಿ, ಭರತನಾಟ್ಯ ಶಿಕ್ಷಕರು, ಗೋಕಾಕ

​ಈ ಸಂದರ್ಭದಲ್ಲಿ ಗಣ್ಯ ಉದ್ಯಮಿ  ಮಹಾಂತೇಶ ತಾಂವಶಿ, ಖ್ಯಾತ ವೈದ್ಯರಾದ ಡಾ॥ ತೇಜಸ್ವಿ ಹೊಸಮನಿ ಮತ್ತು ಶ್ರೀಮತಿ ಡಾ॥ ಕೀರ್ತಿ ಬೀರನಗಡ್ಡಿ,  ಸಿರಿಗನ್ನಡ ಮಹಿಳಾ ವೇದಿಕೆಯ ರಾಜ್ಯಾಧ್ಯಕ್ಷೆ ಶ್ರೀಮತಿ ರಜನಿ ಜಿರಗ್ಯಾಳ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

​ಕಾರ್ಯಕ್ರಮದ ಯಶಸ್ಸಿನಲ್ಲಿ ಗುರುಸ್ಮೃತಿಯ ಕಾರ್ಯಾಧ್ಯಕ್ಷರಾದ ಶ್ರೀಮತಿ ಸುರೇಖಾ ತೋಳಿ ಮತ್ತು ಸಂಸ್ಥಾಪಕ ಅಧ್ಯಕ್ಷ  ಚೇತನ ಜೋಗನ್ನವರ ಅವರ ಶ್ರಮ ಮಹತ್ವದ್ದಾಗಿತ್ತು. ಅಂತಿಮವಾಗಿ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group