ಸಿಂದಗಿ; ಶಿಕ್ಷಕ ವೃಂದ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡಲು ಪಣತೊಟ್ಟಿರುತ್ತಾರೆ ಬೆಳಿಗ್ಗೆ ಎಂಟು ಗಂಟೆಯಿಂದ ರಾತ್ರಿ ೮:೦೦ ಗಂಟೆಯವರೆಗೂ ಮಕ್ಕಳನ್ನು ಪ್ರೀತಿಯಿಂದ ತಾಯ ಪ್ರೀತಿಯ ಕೊಟ್ಟು ಶಿಕ್ಷಣ ಕೊಡುತ್ತಿದ್ದಾರೆ ಈ ಶಾಲೆಯಿಂದ ನೂರಾರು ಮಕ್ಕಳು ಆದರ್ಶ ಮುರಾರ್ಜಿ ಮತ್ತು ಸೈನಿಕ ಶಾಲೆಗೆ ಆಯ್ಕೆ ಮಾಡುವಲ್ಲಿ ಸಹಕಾರಿಯಾಗಿದ್ದಾರೆ ಇಂತಹ ಶಿಕ್ಷಕರ ಶ್ಲಾಘನೀಯ ಕಾರ್ಯ ಎಂದು ಸಾವಿತ್ರಿಬಾಯಿ ಫುಲೆ ಸಂಸ್ಥೆಯ ಸಂಯೋಜಕ ರಾಜು ಗುಬ್ಬೇವಾಡ ಹೇಳಿದರು.
ಪಟ್ಟಣದ ಪ್ರಗತಿ ಸ್ಕೂಲ್‌ನಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಮಾತೆ ಸಾವಿತ್ರಿಬಾಯಿ ಫುಲೆ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ಬಸವ ತತ್ವದಲ್ಲಿ ಎಲ್ಲರನ್ನೂ ಒಳಗೊಂಡು ಸಮಾನತೆಯಿಂದ ಬದುಕು ಕಲಿಸುವವರಾಗಿರುತ್ತಾರೆ ಇವರು ಸಿದ್ಧಾಂತ ಇವರ ಕೆಲಸಕ್ಕೆ ಇವರ ನಿಸ್ಸಾರ್ಥ ಸೇವೆಗೆ ನಮ್ಮ ಕಡೆಯಿಂದ ನಮ್ಮ ಸಂಸ್ಥೆ ಕಡೆಯಿಂದ ಎಲ್ಲ ಮಕ್ಕಳ ಪಾಲಕರ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು ಹಾಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಶೇಖರ ಸಿಂದಗಿ, ರೇಖಾ ವಿ ಹಿರೇಮಠ, ಶಾಂತ ಯಂಕಂಚಿಕರ, ರಮೇಶ ಬಿರಾದಾರ. ಪೂಜಾ ಶೆಟ್ಟಿ, ಸುಧಾ ಹಿರೇಮಠ, ವಿದ್ಯಾ, ಸೋಮು,ಮಾಂತೇಶ್ ಈ ಎಲ್ಲಾ ಗುರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

