ಸಿಂದಗಿ: ಶಿಕ್ಷಕರ ಸೇವೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವ ನಿಟ್ಟಿನಲ್ಲಿ ಗುರುಸ್ಪಂದನಾ ಕಾರ್ಯಕ್ರಮ ಆಯೋಜಿಸಿದೆ. ಶಿಕ್ಷಕರು ಗುರು ಸ್ಪಂದನಾ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ ಹೇಳಿದರು.
ಪಟ್ಟಣದ ಬಸವ ನಗರದ ಜ್ಞಾನ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ ವಿಜಯಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ತಾಲ್ಲೂಕು ಘಟಕ ಸಹಯೋಗದಲ್ಲಿ ನಡೆದ ಗುರುಸ್ಪಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಶಿಕ್ಷಣ ನೀಡಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಫಲಿತಾಂಶ ಬರುವಂತೆ ಮಕ್ಕಳಿಗೆ ಪ್ರೇರಣೆ ನೀಡಬೇಕು ಎಂದರು.
ಪ್ರಾ ಶಾ ಶಿ ಸಂ ಅಧ್ಯಕ್ಷ ಆನಂದ ಭೂಸನೂರ ಮಾತನಾಡಿ, ಶಿಕ್ಷಕರ ೧೦, ೧೫, ೨೦, ೨೫ ವರ್ಷದಿಂದ ಟೈಮ್ ಬಾಂಡಗಳನ್ನು ಹಾಕುವದು ಮತ್ತು ಸ್ಥಳದಲ್ಲಿಯೇ ಆದೇಶಗಳನ್ನು ವಿತರಿಸುವದು ಮತ್ತು ಶಿಕ್ಷಕರ ಗಳಿಕೆ ರಜೆಗಳನ್ನು ಸೇವಾ ಪುಸ್ತಕದಲ್ಲಿ ನಮೂದಿಸುವದು. ಶಿಕ್ಷಕರ ಶೈಕ್ಷಣಿಕ ಅರ್ಹತೆಯನ್ನು ಸೇವಾ ಪುಸ್ತಕದಲ್ಲಿ ನಮೂದಿಸಲಾಗುವದು. ಒಟ್ಟಾರೆಯಾಗಿ ಈ ಕಾರ್ಯಕ್ರಮ ಶಿಕ್ಷಕರ ಅಲೆದಾಟ ತಪ್ಪಿಸಿ ಸೇವಾ ಪುಸ್ತಕದಲ್ಲಿ ಅಗತ್ಯ ವಿಷಯಗಳನ್ನು ದಾಖಲಿಸುವದು ಇದರ ಉದ್ದೇಶವಾಗಿದೆ ಎಂದರು.
ಕ.ರಾ.ಪ್ರಾ.ಶಾ.ಶಿಕ್ಷಕರ ಸಂಘದ ಉಪಾಧ್ಯಕ್ಷ ಶ್ರೀಮತಿ ಎಸ್ ಎಂ ಚಿಗರಿ, ಗೌರವ ಅಧ್ಯಕ್ಷ ಎಸ್ ಆಯ್ ರಾಂಪೂರ ಮಾತನಾಡಿ ಪಟ್ಟಣದಲ್ಲಿ ಸುಂದರವಾದ ಗುರುಭವನ ನಿರ್ಮಾಣ ಮಾಡಲು ಶಾಸಕರು ಮುಂದಾಗಬೇಕು ಎಂದು ಮನವಿ ಮಾಡಿದರು.
ಜ್ಞಾನ ಭಾರತಿ ವಿದ್ಯಾ ಸಂಸ್ಥೆ ಅಧ್ಯಕ್ಷ ಸತೀಶ ಹಿರೇಮಠ ಫೋಟೋ ಪೂಜೆ ನೆರವೇರಿಸಿದರು. ಸಮಾರಂಭದಲ್ಲಿ ಪ್ರಭಾರಿ ದೈಹಿಕ ಶಿಕ್ಷಣ ಪರಿವೀಕ್ಷಕ ರಮೇಶ ಎಂ ಬಿರಾದಾರ, ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಅಧೀಕ್ಷಕ ಚಿದಾನಂದ ಮು ಹಿರೇಮಠ, ದೇವರ ಹಿಪ್ಪರಗಿ ಕ ರಾ ಪ್ರಾ ಶಾ ಶಿ ಸಂ ಅಧ್ಯಕ್ಷ ಎ ಎಚ್ ವಾಲಿಕಾರ, ಮುಖ್ಯೋಪಾಧ್ಯಾಯ ಶರಣಬಸು ಲಂಗೋಟಿ, ರಾಜ್ಯ ಪರಿಷತ್ ಸದಸ್ಯ ಬಿ ಜಿ ಬಿರಾದಾರ, ಖಜಾಂಜಿ ಇಮ್ರಾನ ಮಕಾನದಾರ, ಶಿಕ್ಷಣ ಸಂಯೋಜಕ ಬಿ ಬಿ ಪಾಟೀಲ, ಡಿ ಡಿ ಮುಲ್ಲಾ, ದೇವರ ಹಿಪ್ಪರಗಿ, ಪ್ರಧಾನ ಕಾರ್ಯದರ್ಶಿ ಪಿ ಸಿ ತಳಕೇರಿ, ಉಪಾಧ್ಯಕ್ಷ ಎಲ್ ಎಸ್ ಸೊನ್ನ, ಸಹ ಕಾರ್ಯದರ್ಶಿಗಳಾದ ಎಸ್ ಎಸ್ ಹಚಡದ, ಎಸ್ ಎನ್ ಬಡಿಗೇರ, ಜೆ ಬಿ ಬಾಸಗಿ, ಗಿರಿಧರ ಗತಾಟೆ, ಎಂ ಎಸ್ ಚೌಧರಿ, ರಾಯಪ್ಪ ಇವಣಗಿ, ಅಧ್ಯಕ್ಷೆ ಜಿ ಎಸ್ ಹೊಸಗೌಡರ, ನಿರ್ದೇಶಕರಾದ ಎಸ್ ಎಂ ಮಸಳಿ, ಬಸಮ್ಮ ಬಜಂತ್ರಿ, ಪಿ ಎಸ್ ಅಡಗಲ್, ಎಸ್ ಜಿ ನಾರಾಯಣಕರ, ಜಾನಪದ ಕವಿ ಜೆ ಎನ್ ಸಿಂಗೆ ಸೇರಿದಂತೆ ಅಪಾರ ಶಿಕ್ಷಕರು ಭಾಗವಹಿಸಿದರು.
ಕೋಶಾಧ್ಯಕ್ಷ ಡಿ ಎಂ ಮಾಹೂರ ಸ್ವಾಗತಿಸಿದರು. ನಿರ್ದೇಶಕ ಬಸಯ್ಯ ಹಿರೇಮಠ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಬಸವರಾಜ ಸೋಮಪೂರ ನಿರೂಪಿಸಿದರು.