ಶಿಕ್ಷಕರು ಪ್ರತಿ ವಿದ್ಯಾರ್ಥಿಗಳಿಗೆ  ವಿಜ್ಞಾನದ ಮಹತ್ವ ತಿಳಿಸಿ

Must Read

ಸಿಂದಗಿ: ವಿದ್ಯಾರ್ಥಿಗಳಿಗೆ ಪ್ರತಿ ದಿನವು ಜೀವಶಾಸ್ತ್ರ ಮತ್ತು  ಜೀವ ವಿಜ್ಞಾನದ ಮಹತ್ವವನ್ನು ತಿಳಿಸುವ ಮೂಲಕ  ಅವರನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ತಯಾರ ಮಾಡಲು ಪ್ರಾಥಮಿಕ ಹಂತದಲ್ಲಿ ವಿಜ್ಞಾನದ  ಜ್ಞಾನ ಬೆಳೆಸಬೇಕು ಎಂದು ಕ್ಷೇತ್ರ ಶಿಕ್ಷಾಣಾಧಿಕಾರಿ ಆರ್ ಎಸ್ ನೀರಲಗಿ ಹೇಳಿದರು.

ತಾಲೂಕಿನ ಬಂದಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿಗಳಿಗೆ  ವಿಜ್ಞಾನದ ವಿಷಯ ಕುರಿತು ಪಾಠ ಬೋಧಿಸುವ ಮೂಲಕ ಅವರು ನಮ್ಮ ಜೀವನದಲ್ಲಿ ಹಲವು ಸಮಸ್ಯೆಗಳು ಬಂದರೂ ವಿಜ್ಞಾನದ ಮೂಲಕ ಪರಿಹಾರ ಕಂಡು ಕೊಳ್ಳಲು ಸಹಕಾರಿಯಾಗಿದೆ. ನಮ್ಮ ಸುತ್ತಮುತ್ತಲಿನ ಪ್ರಕೃತಿಯ ಬಗ್ಗೆ ಎಲ್ಲವನ್ನೂ ಸಂಶೋಧಿಸುವ ಮತ್ತು ತಿಳಿದುಕೊಳ್ಳುವ ಜವಾಬ್ದಾರಿಯನ್ನು ನಾವು  ಹೊಂದಿರಬೇಕು. ವಿಶ್ವದ ಪ್ರತಿಯೊಂದು ಪ್ರದೇಶಗಳಲ್ಲಿ ಕಂಡುಬರುವ ವಿಜ್ಞಾನದ ಉಪಕ್ಷೇತ್ರಗಳಲ್ಲಿ ಒಂದಾದ ಪರಿಸರ ವಿಜ್ಞಾನವು ಪ್ರಯೋಜನಕಾರಿ ಮತ್ತು ಪರಿಣಾಮಕಾರಿಯಾಗಿದೆ.  ವಿದ್ಯಾರ್ಥಿಗಳು ತಾವು ಎಲ್ಲಾ ಕ್ಷೇತ್ರಗಳಲ್ಲಿಯೂ ಹೆಚ್ಚು  ಉಪಯೋಗಿಯಾದ ವಿಷಯ ವಿಜ್ಞಾನವಾಗಿದೆ. ನಮ್ಮ ದೇಹದಲ್ಲಿ ಉತ್ತಮ ಶುದ್ದವಾದ ರಕ್ತ ಮತ್ತು ಉತ್ತಮ ಆರೋಗ್ಯವಂತರಾಗಲು ತಾವು ಪ್ರತಿ ದಿನವು ಉತ್ತಮ ಸಾತ್ವಿಕ ಆಹಾರ ಶುದ್ದವಾದ ಗಾಳಿ  ನೀರು ಸೇವಿಸುವ ಮುಖಾಂತರ  ತಮ್ಮ ದೇಹ ಸುಂದರವಾಗಿ ಇಟ್ಟುಕೊಂಡಾಗ  ಮಾತ್ರ ತಮ್ಮ ಕುಟುಂಬದಲ್ಲಿ ಆರೋಗ್ಯವಂತರಾಗಿಲು ಸಾಧ್ಯ ಎಂದರು.

ಶಾಲಾ ಮುಖ್ಯ ಶಿಕ್ಷಕ ಎನ್ ಕೆ ಚೌಧರಿ ಮಾತನಾಡಿ, ನಮ್ಮ ಶಾಲೆಗೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಗಮಿಸಿ ಸುಮಾರು ತಾಸು ವಿಜ್ಞಾನದ ವಿಷಯ ಕುರಿತು  ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಪಾಠ ಬೋಧನೆ ಮಾಡಿ ವಿದ್ಯಾರ್ಥಿಗಳಿಗೆ ವಿಜ್ಞಾನದ ವಿಷಯದ ಕುರಿತು ಹಲವಾರು ಸಮಸ್ಯೆಗಳನ್ನು ತಿಳಿಸಿ ಹೇಳಿದರು.

ಶಾಲಾ ವಿಜ್ಞಾನ ಶಿಕ್ಷಕಿ ಶ್ರೀಮತಿ ಶ್ರೀದೇವಿ ಕುರ್ಲೆ ಹಾಗೂ ವಿದ್ಯಾರ್ಥಿಗಳು ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group