ವಿವಿಧ ಬೇಡಿಕೆ ಈಡೇರಿಕೆಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಲು ಮುಂದಾದ ಶಿಕ್ಷಕರು

0
332

ಮೂಡಲಗಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮೂಡಲಗಿ ಘಟಕದ ವತಿಯಿಂದ ಬಹುದಿನಗಳ ಬೇಡಿಕೆಗಳಾದ ಎನ್.ಪಿ.ಎಸ್ ರದ್ದತಿ, ಪದವೀಧರ ಶಿಕ್ಷಕರ ಸಮಸ್ಯೆ, ಸಿ ಮತ್ತು ಆರ್, ಸೇವಾವಧಿಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗೆ ಒಂದು ಬಾರಿ ವರ್ಗಾವಣೆ, ಮುಖ್ಯ ಗುರುಗಳಿಗೆ 15,20,25 ವರ್ಷಗಳ ವೇತನ ಬಡ್ತಿ , ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ., ದೈಹಿಕ ಶಿಕ್ಷಕರ ಸಮಸ್ಯೆ. ಇನ್ನೂ ಹಲವು ಶಿಕ್ಷಕರ ಬೇಕು ಬೇಡಿಕೆಗಳ ಕುರಿತಾಗಿ ಶಿಕ್ಷಣ ಸಚಿವರಿಗೆ, ಆಯುಕ್ತರಿಗೆ ಹಾಗೂ ಪ್ರಧಾನ ಕಾಯದರ್ಶಿಗಳಿಗೆ ಮೂಡಲಗಿ ಬಿಇಓ ಅಜಿತ ಮನ್ನಿಕೇರಿಯವರ ಮುಖಾಂತರ ಮನವಿ ಸಲ್ಲಿಸಿದರು.

ಗುರುವಾರದಂದು ಪಟ್ಟಣದ ಬಿಇಓ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮೂಡಲಗಿ ಘಟಕದಿಂದ ಶಿಕ್ಷಕ ಸಮುದಾಯದ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಕಪ್ಪು ಪಟ್ಟಿ ಧರಿಸಿ ಮನವಿ ಸಲ್ಲಿಸಿದರು. ಶಿಕ್ಷಕರ ಹಲವಾರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಕಳೆದ ಹಲವಾರು ವರ್ಷಗಳಿಂದ ಅದರಲ್ಲೂ ಕಳೆದ 3 ತಿಂಗಳ ಹಿಂದೆಯೇ ಈ ಕುರಿತು ಕಾಲಮಿತಿಯಲ್ಲಿ ಶಿಕ್ಷಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸೂಕ್ತ ತೀರ್ಮಾನ ಕೈಗೊಳ್ಳಲು ವಿನಂತಿಸಲಾಗಿತ್ತು, ಬೇಡಿಕೆಗಳನ್ನು ಈಡೇರಿಸದಿದ್ದರೆ ಶಿಕ್ಷಕರ ಸಂಘಟನೆಯಿಂದ ಅನಿವಾರ್ಯವಾಗಿ ಹೋರಾಟಕ್ಕೆ ಹೋಗುವ ತೀರ್ಮಾನ ಕೈಗೊಳ್ಳಲಾಗಿತ್ತು.

ವಿಶೇಷವಾಗಿ ಶಿಕ್ಷಕರ ಸಂಘಟನೆ ಮಕ್ಕಳೊಂದಿಗಿದ್ದು, ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಅಸಹಕಾರ ಚಳವಳಿಗಳ ಮೂಲಕ ಸರ್ಕಾರದ ಗಮನ ಸೆಳೆಯುವ ಐತಿಹಾಸಿಕ ನಿರ್ಧಾರ ಮಾಡಿದ್ದು, ಮಕ್ಕಳೊಂದಿಗಿದ್ದು, ನಮ್ಮ ನಿರಂತರ ಹೋರಾಟದ ರೂಪುರೇಷೆಗಳನ್ನು ತೀರ್ಮಾನಿಸಿದ್ದು, ಅದರಂತೆ ಹೋರಾಟಕ್ಕೆ ರಾಜ್ಯದ ಕಾರ್ಯಕಾರಿ ಸಮಿತಿಯಿಂದ ತೀರ್ಮಾನಿಸಿದ್ದಾರೆ.ಅ. 4 ರಿಂದ ತರಬೇತಿ ಬಹಿಷ್ಕಾರವನ್ನು ಮುಂದುವರೆಸುವುದು, ಅ, 21 ರಿಂದ 29 ರವರೆಗೆ ಕಪ್ಪು ಪಟ್ಟಿ ಧರಿಸಿ, ಶಾಲಾ ಶೈಕ್ಷಣಿಕ ಚಟುವಟಿಕೆ ನಿರ್ವಹಿಸುತ್ತಾ ಸರ್ಕಾರದ ಗಮನ ಸೆಳೆಯುವುದು. ತರಬೇತಿ ಬಹಿಷ್ಕಾರ, ಕಪ್ಪು ಬಟ್ಟೆ ಧರಿಸಿ, ಶೈಕ್ಷಣಿಕ ಚಟುವಟಿಕೆ ನಿರ್ವಹಿಸಿದಾಗಲೂ ಸರ್ಕಾರ/ಇಲಾಖೆ ಸ್ಪಂದಿಸದಿದ್ದರೆ ನಿರಂತರ ಅಸಹಕಾರ ಚಳವಳಿ ಮುಂದುವರೆಸುವದು. ಅ,30 ರಿಂದ ನಂ, 30 ರವರೆಗೆ ಮಧ್ಯಾಹ್ನದ ಬಿಸಿಯೂಟದ (ಒಆಒ) ಮಾಹಿತಿಯನ್ನು ನವಿಕರಣ ಮಾಡದೇ ನಮ್ಮ ಬೇಡಿಕೆಗಳ ಬಗ್ಗೆ ಅಸಹಕಾರ ವ್ಯಕ್ತಪಡಿಸುವುವದಾಗಿ ತಿಳಿಸಿದ್ದಾರೆ. ಶಿಕ್ಷಕರು ನಿರಂತರವಾಗಿ ಮಕ್ಕಳ ಪಾಠ ಬೋಧನೆಗೆ ತೊಂದರೆಯಾಗದ ರೀತಿಯಲ್ಲಿ ಕಳೆದೆರಡು ತಿಂಗಳಿನಿಂದ ಮಾಡಿರುವ ಹೋರಾಟ ಕುರಿತು ಹಾಗೂ ಅಂತಿಮವಾಗಿ ರಾಜ್ಯ ಮಟ್ಟದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವ ಬಗ್ಗೆ ಚರ್ಚಿಸಲಾಗುವುದು, ಈ ಹಂತದಲ್ಲೂ ಸರ್ಕಾರ ಸೂಕ್ತವಾಗಿ ಸ್ಪಂದಿಸದಿದ್ದರೆ ಇನ್ನು ಉಗ್ರವಾದ ಹೋರಾಟಗಳಾದ ತರಗತಿ ಬಹಿಷ್ಕಾರ, ಶಾಲಾ ಬಹಿಷ್ಕಾರದಂತಹ ಅಂತಿಮ ಹೋರಾಟಕ್ಕೆ ಸಂಘಟನೆಯಿಂದ ರೂಪುರೇಷೆಗಳನ್ನು ಹಮ್ಮಿಕೊಳ್ಳಲಾಗುವುದು ಕಾರಣ ಸರ್ಕಾರ ಈ ಹಂತದ ಹೋರಾಟಕ್ಕೆ ಶಿಕ್ಷಕರನ್ನು ಬಿಡದೇ ನಮ್ಮ ಬೇಕು-ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸಬೇಕೆಂದು ಮನವಿ ಮೂಲಕ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ರಾಮ ಲೋಕನ್ನವರ, ತಾಲೂಕಾ ಕಾಯದರ್ಶಿ ಎಡ್ವಿನ್‌ ಪರಸನ್ನವರ, ಸಂಘಟನೆಯ ಪದಾಧಿಕಾರಿಗಳಾದ ಬಿ.ಎ ಡಾಂಗೆ, ಆರ್. ಎಮ್‌ ಮಹಲಿಂಗಪೂರ, ಮಾಲತೇಶ ಸಣ್ಣಕ್ಕಿ, ಬಿ.ಬಿ ಕಿವಟಿ, ಎಮ್.ಜಿ ಮಾವಿನಗಿಡದ, ವಾಯ್.ಡಿ ಝಲ್ಲಿ, ಕೆ.ಎಲ್‌ ಮೀಶಿ, ಎಸ್.ಎಮ್‌ ದಬಾಡಿ, ಎಸ್ ಎ ಕುರಣಗಿ ಹಾಗೂ ಎಸ್.ಎ ದಡ್ಡಿಮನಿ, ಎಸ್.ಎಲ್‌ ಪಾಟೀಲ ಮತ್ತಿತರರು ಇದ್ದರು.