- Advertisement -
ಬೀದರ: ಬೀದರ್ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾದ ಬೆನ್ನಲ್ಲೆ ಭಗವಂತ ಖೂಬಾ ಅವರು ಹಲವು ದೇವಸ್ಥಾನಗಳಿಗೆ ಭೇಟು ಕೊಟ್ಟು ದೇವರ ದರ್ಶನ ಮಾಡಿದರು.
ತೆಲಂಗಾಣ ರಾಜ್ಯದ ಜಹೀರಾಬಾದ್‌ನ ಐತಿಹಾಸಿಕ ಸ್ಥಳ, ಝರಾಸಂಗಮದ ಸಂಗಮನಾಥ್ ದೇವಸ್ಥಾನ ಹಾಗೂ ರೇಜಂತಲ್‌ನಲ್ಲಿರುವ ಸಿದ್ದಿವಿನಾಯಕ ದೇವಸ್ಥನಕ್ಕೆ ಭೇಟಿ ನೀಡಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮಲ್ಲಯ್ಯಗಿರಿ ಆಶ್ರಮದ ಬಸವಲಿಂಗ ಅವಧೂತ ಶ್ರೀಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದರು.
ಬೀದರ್ ನಗರದ ಪಾಪನಾಶ ದೇವಸ್ಥಾನ, ಔರಾದ್ ನಗರದ ಅಮರೇಶ್ವರ ದೇವಸ್ಥಾನ, ಹಾರ್ಕೂಡ ಮಠಕ್ಕೂ ಭೇಟಿ ಕೊಟ್ಟು ಚನ್ನವೀರ ಶಿವಾಚಾರ್ಯ ಶ್ರೀಗಳಿಂದ ಆಶೀರ್ವಾದ ಪಡೆದರು.
- Advertisement -
ಭಾರತೀಯ ಜನತಾ ಪಕ್ಷದ ನಾಯಕರಿಂದಲೇ ಖೂಬಾ ಅವರಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತವಾದಾಗಲೂ ಖೂಬಾ ಅವರು ಪಕ್ಷದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ