ಬೀದರ – ಬೀದರ ನಗರದ ಗಾಂಧಿ ಗಂಜ್ ಪೊಲೀಸರು ಭರ್ಜರಿ ಬೇಟೆಯಾಡಿದ್ದು ಸರಗಳ್ಳನೊಬ್ಬನನ್ನು ಬಂಧಿಸಿ ಆತನಿಂದ ಸುಮಾರು 42 ಲಕ್ಷದ 840 ಗ್ರಾಂ ಮೌಲ್ಯದ ಚಿನ್ನ ಆಭರಣ ವಶಪಡಿಸಿಕೊಂಡಿದ್ದಾರೆ.
ಬೀದರ್ ನಗರದ ನಿವಾಸಿಯಾದ ಶಫಿಯುದ್ದಿನ್ ಆರೋಪಿಯಾಗಿದ್ದು ಲಾರಿ ಕ್ಲಿನರ್ ಹೆಸರಿನಲ್ಲಿ ಓಡಾಡಿಕೊಂಡು ಕಳ್ಳತನ ಮಾಡುತ್ತಿದ್ದ ಮಹಾ ಖದೀಮನೆನ್ನಲಾಗಿದೆ.
ಬೀದರ್ ಡಿವೈಸ್ ಪಿ ಸತ್ತಿಶ ಅವರು ನೇತೃತ್ವದಲ್ಲಿ ಖದೀಮನನ್ನು ಬಂಧಿಸಿದ ಪೊಲೀಸರು ಆತನಿಂದ ಅಪಾರ ಪ್ರಮಾಣದ ಚಿನ್ನಾಭರಣ ವಶಪಡಿಸಿಕೊಂಡಿದ್ದಾಗಿ ಬೀದರ್ ಪೊಲೀಸ್ ವರಿಷ್ಠಾಧಿಕಾರಿ ಕಿಶೋರ್ ಬಾಬು ಹೇಳಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ