ತೊಂಡಿಕಟ್ಟಿ: ರಾಮದುರ್ಗ ತಾಲೂಕಿನ ಸುಕ್ಷೇತ್ರ ತೊಂಡಿಕಟ್ಟಿ ಗ್ರಾಮದಲ್ಲಿ ಶ್ರೀ ಅವಧೂತ ಗಾಳೇಶ್ವರ ಮಹಾಸ್ವಾಮಿಗಳ 79ನೇ ಪುಣ್ಯಾರಾಧನೆ ಹಾಗೂ ಬೃಹ್ಮೈಕ್ಯ ಶ್ರೀ ಪುಂಡಲೀಕ ಮಹಾರಾಜರ 84ನೇ ಹುಟ್ಟು ಹಬ್ಬದ ಮತ್ತು ಕಿರೀಟ ಪೂಜಾ ಕಾರ್ಯಕ್ರಮ ಜ.11 ರಿಂದ 15 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಅವಧೂತ ಗಾಳೇಶ್ವರ ಮಠದ ಪೀಠಾಧಿಪತಿ ಶ್ರೀ ಅಭಿನವ ವೇಂಕಟೇಶ್ವರ ಮಹಾರಾಜರ ಸಾನ್ನಿಧ್ಯದಲ್ಲಿ ಸಡಗರ ಸಂಭ್ರಮದಿಂದ ಜರುಗಲಿದೆ.
ಜ.11 ರಂದು ಬೆಳಿಗ್ಗೆ ಕರ್ತೃ ಗದ್ದುಗೆಗಳಿಗೆ ಅಭಿಷೇಕ, ಗೀತಾ ಪಾರಾಯಣ, ಕಳಸಾರೋಹಣ, ಸಾಯಂಕಾಲ ವಿವಿಧ ಮಹಾತ್ಮರಿಂದ ಪ್ರವಚನ, ಕೀರ್ತನೆ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಭಜನಾ ತಂಡಗಳಿಂದ ಜಾಗರಣೆ ಜರುಗುವುದು.
ಜ.12 ರಂದು ಮುಂಜಾನೆ 11ಕ್ಕೆ ಗ್ರಾಮದ ಪ್ರಮುಖದ ರಸ್ತೆಗಳಲ್ಲಿ ಶ್ರೀಗಳ ಅಶ್ವಾರೋಹಣ ಮೆರವಣಿಗೆ, ಮಹಾಪ್ರಸಾದ ಹಾಗೂ ಸಂಜೆ5 ಗಂಟೆಗೆ ಮಹಾರಥೋತ್ಸವ, ರಾತ್ರಿ 7-30 ರಿಂದ 10-30 ಪ್ರವಚನ, ಕೀರ್ತನೆ, ಶ್ರೀಗಳ ತುಲಾಭಾರ, ತೊಟ್ಟಿಲೋತ್ಸವ ಹಾಗೂ ಮನರಂಜನಾ ಕಾರ್ಯಕ್ರಮ ಜರುಗಲಿವೆ.
ಜ.13 ರಂದು 11 ರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಸಂಜೆ 7 ರಿಂದ ವೆಂಕಟೇಶ್ವರ ವಿದ್ಯಾನಿಕೇತನ ಶಾಲಾ ವಾರ್ಷಿಕೋತ್ಸವ ಮತ್ತು ಶಾಲಾ ಮಕ್ಕಳಿಂದ ಭಕ್ತಿ ಸಂಗೀತ ಮನರಂಜನಾ ಕಾರ್ಯಕ್ರಮ ಜರುಗಲಿವೆ. ಜ.14 ರಂದು ಪುಣ್ಯಾರಾಧನೆ ನಿಮಿತ್ತ ವಿವಿಧ ಶರ್ತು, ಬಯಲಾಟಗಳು ಜರುಗಲಿವೆ. ಜ.15 ರಂದು ಸಂಜೆ 6ಕ್ಕೆ ಸಹಸ್ರ ದೀಪೋತ್ಸವ ಕಳಸಾರೋಹಣ ಕಾರ್ಯಕ್ರಮ ಜರುಗಲಿದೆ.
ಪ್ರವಚನ ಮತ್ತು ಕೀರ್ತನೆ ಕಾರ್ಯಕ್ರಮದಲ್ಲಿ ಬೆಳಗಾವಿಯ ಸ್ವಾಮಿ ಚಿತ್‍ಪ್ರಕಾಶಾನಂದ ಸರಸ್ವತಿ ಶ್ರೀಗಳು, ಕುಳ್ಳೂರದ ಶ್ರೀ ಬಸವಾನಂದಭಾರತಿ ಸ್ವಾಮಿಜಿ, ನೇಸರಗಿ-ಮಲ್ಲಪೂರದ ಶ್ರೀ ಚಿದಾನಂದ ಸ್ವಾಮಿಜಿ ಹುಣಶ್ಯಾಳ ಪಿಜಿಯ ಶ್ರೀ ನಿಜಗುಣ ದೇವರು, ಗು-ಹೊಸಕೋಟಿಯ ಶ್ರೀ ಅಭಿನವ ರೇವಯ್ಯ ಸ್ವಾಮೀಜಿ,ಕೋಟಬಾಗಿಯ ಪ್ರಭುದೇವ ಶ್ರೀಗಳು, ಬಿಜಗುಪ್ಪಿಯ ಶ್ರೀ ಸುವೃತಾನಂದ ಸ್ವಾಮೀಜಿ, ತಿಮ್ಮಾಪೂರದ ಶ್ರೀ ಬಸವರಾಜ ಸ್ವಾಮೀಜಿ, ದಾದನಟ್ಟಿಯ ಶ್ರೀ ನಿಜಾನಂದ ಸ್ವಾಮೀಜಿ,
ಮಲ್ಲಾಪೂರ ಪಿಜಿಯ ಶ್ರೀ ಸದಾನಂದ ಸ್ವಾಮೀಜಿ, ಹಡಗಿನಾಳದ ಶಿವಶರಣ ಮಲ್ಲನಗೌಡರು,ಯರಗಟ್ಟಿಯ ಶ್ರೀ ಗಣಪತಿ ಮಹಾರಾಜರು, ಅಮ್ಮಲಝರಿಯ ಶರೀಫ ಶಾಸ್ತ್ರಿಗಳು, ಕರಿಕಟ್ಟಿಯ ಶ್ರೀ ಕೀರ್ತನಕೇಸರಿ ಗುರುನಾಥ ಶಾಸ್ತ್ರೀಗಳು ಭಾಗವಹಿಸುವರು ಎಂದು ಶ್ರೀ ವೆಂಕಟೇಶ್ವರ ಮಹಾರಾಜರು ತಿಳಿಸಿದ್ದಾರೆ