ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಒಳ ಮತ್ತು ಹೊರ ರೋಗಿಗಳಿಗೆ 71ನೇ ಪಾಕ್ಷಿಕ ಅನ್ನದಾಸೋಹವನ್ನು ಏರ್ಪಡಿಸಿದ್ದರು.
ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ ಅನ್ನದಾಸೋಹಕ್ಕೆ ಚಾಲನೆ ನೀಡಿ ಮಾತನಾಡಿ ‘ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕಾರ್ಯವಾಗಿದೆ. ಲಯನ್ಸ್ ಕ್ಲಬ್‍ವು ರೋಗಿಗಳಿಗೆ ಅನ್ನ ನೀಡುವ ಶ್ಲಾಘನೀಯ ಕೆಲಸ ಮಾಡುತ್ತಲಿದೆ’ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ ಮಾತನಾಡಿ, ‘ಗ್ರಾಮೀಣ ಭಾಗದ ಬಡ ಜನರು ಅಧಿಕ ಸಂಖ್ಯೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಬರುವುದರಿಂದ ಲಯನ್ಸ್ ಕ್ಲಬ್ ಅನ್ನದಾಸೋಹವು ಅರ್ಥಪೂರ್ಣವಾಗಿದೆ’ ಎಂದರು.
ಲಯನ್ಸ್ ಪರಿವಾರದ ಸದಸ್ಯ ಸಂಗಮೇಶ ಕೌಜಲಗಿ ಅವರು ತಮ್ಮ ಪುತ್ರ ಆದಿತ್ಯನ 11ನೇ ಹುಟ್ಟು ಹಬ್ಬದ ಅಂಗವಾಗಿ ಅನ್ನದಾಸೋಹವನ್ನು ಏರ್ಪಡಿಸಿದ್ದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿ, ಪ್ರತಿ ತಿಂಗಳಲ್ಲಿ ಎರಡು ಬಾರಿ ಅನ್ನದಾಸೋಹವನ್ನು ನಡೆಸಿಕೊಂಡು ಬರುತ್ತಿರುವೆವು ಎಂದರು.
ಅತಿಥಿಯಾಗಿ ಪುರಸಭೆ ಎಂಜಿನಿಯರ್ ಡಿ.ಬಿ. ಪಠಾಣ, ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ಶಿವಲಿಂಗ ಪಾಟೀಲ, ಸುರೇಶ ಕೌಜಲಗಿ, ಈರಣ್ಣ ಅಂಬಿ, ಕಾರ್ಯದರ್ಶಿ ಡಾ. ಸಂಜಯ ಶಿಂಧಹಿಟ್ಟಿ, ಸಂಜಯ ಮೋಕಾಸಿ, ಡಾ. ಸಚಿನ ಟಿ, ಸುಪ್ರೀತ ಸೋನವಾಲಕರ, ಮಹಾಂತೇಶ ಹೊಸೂರ, ಶಿವಾನಂದ ಗಾಡವಿ, ಗಿರೀಶ ಆಸಂಗಿ ಭಾಗವಹಿಸಿದ್ದರು.
350ಕ್ಕೂ ಅಧಿಕ ಸಂಖ್ಯೆಯಲ್ಲಿ ಅನ್ನದಾಸೋಹದಲ್ಲಿ ಭಾಗವಹಿಸಿದ್ದರು.