“ನಿಮ್ಮ ಗುಬ್ಬಿಯ ಕಾಡುವ ಕವಿತೆಗಳಿಗೆ” ಮೈಸೂರಿನಲ್ಲಿ ಪ್ರಶಸ್ತಿ ಪುರಸ್ಕಾರದ ಗರಿ

Must Read

ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಅಭಿರುಚಿ ಬಳಗ, ಆಸಕ್ತಿ ಪ್ರಕಾಶನ,ಚೈತ್ರ ಫೌಂಡೇಶನ್ (ರಿ ) ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಕಿರುರಂಗಮಂದಿರಲ್ಲಿ ದಿನಾಂಕ 02.01.2022ರಂದು ನಡೆದ ಶ್ರೀ ಎನ್. ಎಸ್. ವಾಮನ್ ಶತಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನನ್ನ “ಕಾಡುವ ಕವಿತೆಗಳಿಗೆ” ಕೃತಿಗೆ ಎನ್. ಎಸ್. ವಾಮನ್ ಶತಮಾನೋತ್ಸವ ಪುಸ್ತಕ ಪ್ರಶಸ್ತಿಯ ಪ್ರಪ್ರಥಮ ಬಹುಮಾನ ಪಡೆದ ಅವಿಸ್ಮರಣೀಯ ಕ್ಷಣಗಳು ನಗದು ಬಹುಮಾನ, ಸ್ಮರಣಿಕೆ, ಪ್ರಶಸ್ತಿಪತ್ರಗಳೊಂದಿಗೆ ಗೌರವ ಪುರಸ್ಕಾರಕ್ಕೆ ಭಾಜನನಾದ ಧನ್ಯ ಘಳಿಗೆ. ಸುಂದರ ಕಾರ್ಯಕ್ರಮ ಆಯೋಜಿಸಿ, ಮಧುರ ಕ್ಷಣಗಳನ್ನು ಕಟ್ಟಿಕೊಟ್ಟ ಎನ್.ವಿ.ರಮೇಶ್ ಕುಟುಂಬ, ವಾಮನ್ ಬಳಗ ಹಾಗೂ ಕಾರ್ಯಕ್ರಮದ ಸಮಸ್ತ ಆಯೋಜಕರಿಗೆ ಅಂತರಾಳದ ಅನಂತ ನಮನಗಳು. ಈ ಕೆಳಗೆ ಲಗತ್ತಿಸಿದ ಸುಂದರ ಭಾವಚಿತ್ರಗಳನ್ನು ಕಳಿಸಿಕೊಟ್ಟ ಶ್ರೀಮತಿ ನಿಶಾ, ಹಾಗೂ ದ್ಯಾವಣ್ಣನವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.

ಪ್ರತಿಷ್ಠಿತ ಕರ್ಕಿ ಕಾವ್ಯಪ್ರಶಸ್ತಿ, ಜನ್ನ ಕಾವ್ಯಪ್ರಶಸ್ತಿ, ಕನಕಶ್ರೀ ಕಾವ್ಯಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ ನನ್ನೀ “ಕಾಡುವ ಕವಿತೆಗಳು” ಕೃತಿಯನ್ನು ಪ್ರಕಟಿಸಲು ಪ್ರೇರಕರಾದ ಗೋಮಿನ ಪ್ರಕಾಶನದ ಶ್ರೀಮತಿ ಚಂಪಾ ಸತೀಶ್ ಹಾಗೂ ಗುಬ್ಬಚ್ಚಿ ಸತೀಶ್ ಅವರಿಗೆ ನಾನು ಚಿರಋಣಿ.

ಪ್ರತಿದಿನ, ಪ್ರತಿಹೆಜ್ಜೆಗೂ ನನ್ನನ್ನು ಪ್ರೋತ್ಸಾಹಿಸುತ್ತಾ, ನಿತ್ಯ ಸಾಹಿತ್ಯದ ಹಾದಿಯಲ್ಲಿ ನಡೆಸುತ್ತಿರುವ ನಿಮ್ಮ ಅಕ್ಕರೆ, ಕಾವ್ಯಪ್ರೀತಿ, ಅಕ್ಷರಬಂಧಗಳೇ ಈ ಎಲ್ಲ ಸುವರ್ಣ ಕ್ಷಣಗಳಿಗೆ ಕಾರಣ, ಪ್ರೇರಣ.. ಹಾಗಾಗಿ ನನ್ನೆಲ್ಲ ಸಂತಸ,ಸಂಭ್ರಮಗಳು ನಿಮಗೇ ಅರ್ಪಣ..”


ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group