
ಸಿಂದಗಿ: ಪಟ್ಟಣದ ತಹಶೀಲದಾರ ಕಾರ್ಯಾಲಯದಲ್ಲಿ ಸಂತ ಶ್ರೀ ಸೇವಾಲಾಲ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ತಹಶೀಲದಾರ ನಿಂಗಣ್ಣ ಬಿರಾದಾರ ಅವರು ಸಂತ ಶ್ರೀ ಸೇವಾಲಾಲ ಮಹಾರಾಜರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಒಕ್ಕೂಟದ ಅಧ್ಯಕ್ಷ ಮಹಾದೇವ ರಾಠೋಡ ಮಾತನಾಡಿ, ಮಹಾರಾಷ್ಟ್ರ ರಾಜ್ಯದ ನಂದಗಡ ಜಿಲ್ಲೆಯಲ್ಲಿ ತನ್ನ ಬಾಲ್ಯಾವಸ್ಥೆಯಲ್ಲಿ ದನ ಕರುಗಳನ್ನು ಮೇಯಿಸುತ್ತ ಅನೇಕ ಪವಾಡಗಳನ್ನು ಮಾಡಿದ್ದಾರೆ. ವಿಜಯನಗರ ಸಾಮ್ರಾಜ್ಯದಲ್ಲಿ ಮುತ್ತು ಹವಳಗಳನ್ನು ಮಾರಾಟ ಮಾಡುತ್ತ ವ್ಯಾಪಾರ ವಹಿವಾಟು ನಡೆಸುತ್ತ ಉತ್ತರ ಭಾರತದಿಂದ ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳನಾಡು ಸೇರಿದಂತೆ ಹಲವಾರು ಕಡೆಗಳಲ್ಲಿ ಸುತ್ತಾಡಿ ದಕ್ಷಿಣ ಭಾರತಕ್ಕೆ ವಲಸೆ ಬಂದಿರುವ ಬಂಜಾರಾ ಸಮುದಾಯವು ಅವರ ಆರಾಧ್ಯ ದೇವರ ತತ್ವಸಿದಾಂತಗಳನ್ನು ಪಾಲಿಸುತ್ತ ಆ ಸಮುದಾಯಕ್ಕೆ ಲಿಪಿ ಇಲ್ಲದಿದ್ದರು ಕೂಡಾ ಭಾಷೆಯನ್ನು ಆರಾಧಿಸುವ ತತ್ವ ಹೊಂದಿದ್ದು ವೇಷ ಭೂಷಣದಲ್ಲಿ ಸಂಸ್ಕೃತಿಯನ್ನು ಈ ದೇಶದಲ್ಲಿನ ಸುಮಾರು ಸಮುದಾಯದವರು ಅಳವಡಿಸಿಕೊಳ್ಳುತ್ತಿದ್ದಾರೆ. ಈ ದೇಶದಲ್ಲಿ ಸಮಾಜದ ಜನ ಸುಮಾರು 6 ಕೋಟಿಗೂ ಅಧಿಕವಾಗಿದ್ದರು ಕೂಡಾ ಇನ್ನೂ ಶೈಕ್ಷಣಿಕವಾಗಿ ಮುಂದೆ ಬರಬೇಕಾಗಿದೆ ಆ ನಿಟ್ಟಿನಲ್ಲಿ ಸಮಾಜದ ಮುಖಂಡರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಎಂದು ಸಲಹೆ ನೀಡಿದರು.
ಸಮಾಜದ ಮುಖಂಡರಾದ ರಾಮಚಂದ್ರ ರಾಠೋಡ, ಶಂಕರ್ ಚವ್ಹಾಣ ಮಾತನಾಡಿ, ಬಂಜಾರಾ ಜನಾಂಗವು ನಿಷ್ಠೆ, ಪ್ರಾಮಾಣಿಕತೆಗೆ, ಸಭ್ಯತೆಗೆ ಹಾಗೂ ಸ್ವಾವಲಂಬಿತನಕ್ಕೆ ಹೆಸರುವಾಸಿಯಾಗಿದ್ದು ಸಮಾಜದ ಕುಲದೇವರಾದ ಸಂತ ಸೇವಾಲಾಲರು ಈ ದೇಶದ ಜ್ಞಾನವಾಗಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂಥವರು. ಅಂತವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಕೊಂಡು ಸಾಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲದಾರ ಪ್ರಕಾಶ ಸಿಂದಗಿ, ಶಿರಸ್ತೇದಾರರಾದ ಆರ್.ವಿ.ರಾಠೋಡ, ಸಿ.ಬಿ.ಬಾಬಾನಗರ. ಸುರೇಶ ಮ್ಯಾಗೇರಿ, ಶ್ರೀಮತಿ ಎಸ್ ಐ ಚವ್ಹಾಣ, ಕಂದಾಯ ನಿರೀಕ್ಷಕ ಐ ಎಮ್ ಮಕಾಂದಾರ, ಎಮ್ ಎ ಬಾಗೇವಾಡಿ, ರಮೇಶ್ ತಳವಾರ, ಶ್ರೀಮತಿ ಕೆ ಎಮ್ ಅಗ್ನೀಹೋತ್ರಿ, ಗ್ರಾಮಲೆಕ್ಕಾಧಿಕಾರಿ ರಾಮಪ್ಪ ರಾಂಪೂರ, ಸಂತೋಷ ವಾಲೀಕಾರ ಹಾಗೂ ಸಮಾಜದ ಮುಖಂಡರಾದ ನರಸು ಪವಾರ, ಡಾ. ಅನಿಲ್ ನಾಯಿಕ, ಶಂಕರ್ ರಾಠೋಡ, ಸೀತಾರಾಮ ನಾಯಿಕ, ರಮೇಶ ಚವ್ಹಾಣ, ಶಂಕರಲಿಂಗ ಪವಾರ, ಅಶೋಕ ನಾಯಿಕ, ಗೋಪಿ ಚವ್ಹಾಣ, ವೆಂಕಟೇಶ್ವ ರಾಠೋಡ ಸೇರಿದಂತೆ ಇತರರು ಭಾಗವಹಿಸಿದ್ದರು.