ಬಿಜೆಪಿ ಗೂಂಡಾ ಪ್ರವೃತ್ತಿ ತೋರುತ್ತಿದೆ – ಪುಷ್ಪಾ ಅಮರನಾಥ

Must Read

ಸಿಂದಗಿ: ಈ ಉಪಚುನಾವಣೆಯಲ್ಲಿ ಶಾಂತಿಯುತವಾಗಿ, ಭಯವಿಲ್ಲದೇ ಮತದಾನ ನಡೆಯಬೇಕು ಎಂದು ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಪೊಲೀಸ ಇಲಾಖೆ ಪಥಸಂಚನ ನಡೆಸಿ ಜಾಗೃತಿ ಮೂಡಿಸುತ್ತಿದೆ ಆದರೆ ಕ್ಷೇತ್ರದ ದೇವಗಾಂವ ಗ್ರಾಮದಲ್ಲಿ ಅ.25 ರಂದು ಸಾಯಂಕಾಲ 5 ಗಂಟೆಗೆ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಮಹಿಳಾ ಕಾರ್ಯಕರ್ತರ ಮೇಲೆ ಗುಂಡಾ ಪ್ರವೃತ್ತಿ ಹಾಗೂ ಹಲ್ಲೆ ನಡೆಸುವ ಪ್ರಯತ್ನ ಮಾಡಿದ್ದಾರೆ ಇದು ಪ್ರಜಾಪ್ರಭುತ್ವವೋ, ಗೂಂಡಾ ರಾಜ್ಯವೋ ಎನ್ನುವುದನ್ನು ಸಾಬೀತು ಪಡಿಸಿದೆ ಎಂದು ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ ಬಿಜೆಪಿ ವಿರುದ್ಧ ಕಿಡಿ ಕಾರಿದರು.

ಪಟ್ಟಣದ ಸಂಗಮ ಹೋಟೇಲನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಂತಹ ತಂತ್ರ ಕುತಂತ್ರಗಳ ಮೂಲಕ ದೇಶದ ಎಲ್ಲ ರಾಜ್ಯಗಳ ಚುನಾವಣೆಗಳನ್ನು ಏಕಮುಖವಾಗಿ ರಾಜಕಾರಣ ಮಾಡುತ್ತಿದೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಆರೋಪಿಸಿದ ಅವರು ಕ್ಷೇತ್ರದ ದೇವಣಗಾಂವ ಗ್ರಾಮದಲ್ಲಿ ಅ.25 ರಂದು ಸಾಯಂಕಾಲ 5 ಗಂಟೆಗೆ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡಲು ತೆರಳಿದ್ದ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರ 50 ಜನ ಹಿಂಬಾಲಕರು ಬೈಕ್ ಮೇಲೆ ಬಂದು ಸುತ್ತುವರೆದು ಮತಯಾಚನೆಗೆ ಅಡ್ಡಿ ಪಡಿಸಿ ಗುಂಡಾಪ್ರವೃತ್ತಿ ತೋರಿಸಿದ್ದನ್ನು ಚಿತ್ರಿಕರಣ ಮಾಡಿದ ದೃಶ್ಯಾವಳಿಗಳನ್ನು ಕಾರ್ಯಕರ್ತರ ಬಳಿ ಇರುವ ಮೋಬಾಯಿಲ್‍ಗಳಲ್ಲಿರುವ ದಾಖಲೆಗಳನ್ನು ಅಳಿಸಿಹಾಕಿದ್ದು ಪ್ರಜಾಪ್ರಭುತ್ವದ ಉಲ್ಲಂಘನೆ ಮಾಡಿದಂತಾಗಿದೆ. ಕೂಡಲೇ ಚುನಾವಣಾಧಿಕಾರಿಗಳು ಈ ಗ್ರಾಮವನ್ನು ಅತೀ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿ ಮತದಾನಕ್ಕೆ ಸೂಕ್ತ ರಕ್ಷಣೆ ನೀಡಬೇಕು ಆಗ್ರಹಿಸಿದರು.

ಡಾ. ಅಂಬೇಡ್ಕರ ಅವರು ಪ್ರಜೆಗಳಿಂದ ಪ್ರಜೆಗಳನ್ನು ಆಯ್ಕೆ ಮಾಡಿ ಆಯಾ ಕ್ಷೇತ್ರಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂವಿಧಾನದ ಮೂಲಕ ಮತದಾನದ ಹಕ್ಕು ನೀಡಿ ಅದಕ್ಕೊಬ್ಬ ಜನಪ್ರತಿನಿಧಿ ಆಯ್ಕೆಗೆ ಮತದಾನದ ಹಕ್ಕನ್ನು ನೀಡಿದೆ. ಈ ದೇಶದಲ್ಲಿ ಪ್ರಜಾಪ್ರಭುತ್ವ ಹಕ್ಕನ್ನು ಯಾವದೇ ಒತ್ತಡಕ್ಕೆ ಮತ್ತು ಆಶೆ ಆಮಿಷಗಳಿಗೆ ಬಲಿಯಾಗದೇ ಶಾಂತಿಯುತ ಮತದಾನ ಹಾಗೂ ಮತಯಾಚನೆ ಪ್ರತಿಯೊಬ್ಬರ ಮೂಲಭೂತ ಹಕ್ಕು ನೀಡಿದ ಅದನ್ನು ಅಡ್ಡಿ ಪಡಿಸುವುದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತಾಗಿದೆ ಇದರ ಮುಂದಾಲೋಚನೆಯಲ್ಲಿ ಮತದಾರರಿಗೆ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎನ್ನುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಕೆಲವೊಂದು ಸುತ್ತೋಲೆಗಳನ್ನು ಹೊರಡಿಸಿದೆ ಅದನ್ನೆಲ್ಲ ಗಾಳಿಗೆ ತೂರಿ ಬಿಜೆಪಿ ಗುಂಡಾ ಪ್ರವೃತ್ತಿಯಿಂದ ಕುತಂತ್ರ ರಾಜಕಾರಣಕ್ಕೆ ಮುಂದಾಗಿದ್ದ ಆಡಳಿತಾರೂಡ ಸರಕಾರದ ಪರ ಪೊಲೀಸ ಇಲಾಖೆ ಕಾರ್ಯನಿರ್ವಹಿಸುತ್ತಿದ್ದರೆ ಇಲ್ಲಿ ಕಾರ್ಯಕರ್ತರಿಗೆ ಮತದಾರರಿಗೆ ಯಾವ ರಕ್ಷಣೆ ನೀಡುತ್ತಾರೆ ಈ ಘಟನೆ ಹಿನ್ನಲೆಯಲ್ಲಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷೆ ವಿಧ್ಯಾರಾಣಿ ತುಂಗಳ, ಶಾಂಬವಿ, ಸುಜಾತಾ, ಸುಮತಿ, ಜಯಲಕ್ಷ್ಮೀ, ಜಯಶ್ರೀ, ಭಾರತಿ ಹೊಸಮನಿ ಸೇರಿದಂತೆ ಅನೇಕರಿದ್ದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group