spot_img
spot_img

ಸಿದ್ರಾಮಯ್ಯರನ್ನು ದಲಿತ ವಿರೋಧಿ ಎಂಬಂತೆ ಬಿಂಬಿಸುವುದನ್ನು ಬಿಜೆಪಿ ಬಿಡಬೇಕು – ಕಾಂಗ್ರೆಸ್

Must Read

spot_img
- Advertisement -

ಸಿಂದಗಿ: ಮಾಜಿ ಸಿಎಂ ಸಿದ್ದರಾಮಯ್ಯನವರು ದಲಿತ ವಿರೋಧಿ ಎಂದು ಬಿಜೆಪಿ ನಾಯಕರು ಬಿಂಬಿಸುತ್ತಿರುವ ನೀತಿಯನ್ನು ಕಾಂಗ್ರೆಸ ಪಕ್ಷದ ಎಸ್ ಸಿ ಘಟಕದ ವತಿಯಿಂದ ಉಗ್ರವಾಗಿ ಖಂಡಿಸಲಾಯಿತು.

ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರು ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ದಲಿತ ಪರ ಸಂಘಟನೆಗಳ ಮತ್ತು ಪ್ರಗತಿಪರ ವಿಚಾರವಾದಿಗಳು ಸೇರಿ ತಹಶೀಲ್ದಾರ ಸಂಜೀವಕುಮಾರ ದಾಸರ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ ಅಭ್ಯರ್ಥಿ ಅಶೋಕ ಮನಗೂಳಿ ಮಾತನಾಡಿ, ರಾಜ್ಯ ಕಂಡ ಅಪ್ರತಿಮ ನಾಯಕ, ದೀನದಲಿತರ, ಅಲ್ಪಸಂಖ್ಯಾತರ ಹಾಗೂ ಕಳಂಕ ರಹಿತ, ಸಮಸಮಾಜದ ಅಪರೂಪದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ದಲಿತ ವಿರೋಧಿ ಎಂದು ಬಿಂಬಿಸುತ್ತಿರುವ ಬಿ ಜೆ.ಪಿಯ ಕೆಲವು ನಾಯಕರು ಮಾತನಾಡುತ್ತಿರುವುದು ಅವರ ಘನತೆಗೆ ಮಾಡಿದ ಅವಮಾನವಾಗಿದೆ. ಬಿಜೆಪಿ ನಾಯಕರು ಅವರ ವಿರುದ್ದ ಮಾತನಾಡುವುದನ್ನು ನಿಲ್ಲಿಸಬೇಕು ಹೀಗೆ ಮಾತನಾಡುವುದರಿಂದ ಅವರೇನು ಸಣ್ಣರಾಗುವುದಿಲ್ಲ ಈ ನೀತಿಯಿಂದ ದೂರ ಸರಿಯಬೇಕು ಎಂದು ಒತ್ತಾಯಿಸಿದರು.

- Advertisement -

ಎಸ್‌ಸಿ, ಘಟಕದ ಅಧ್ಯಕ್ಷ ಪರಶುರಾಮ ಕಾಂಬಳೆ ಮಾತನಾಡಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರು ದಲಿತ ವಿರೋಧಿ ಎಂದು ಹೇಳುವದರ ಮೂಲಕ ಅಂತಹ ಧೀಮಂತ ನಾಯಕರ ವ್ಯಕ್ತಿತ್ವಕ್ಕೆ ಚ್ಯುತಿ ತರುತ್ತಿರುವ ರಾಜ್ಯ ಬಿ.ಜೆ.ಪಿಯ ಕ್ರಮ ಖಂಡನೀಯ ಎಂದರು.

ಇತ್ತೀಚೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ದುರಾಡಳಿತ ದಿಂದಾಗಿ ಅಭಿವೃದ್ಧಿಯ ಹರಿಕಾರ ಸಾಮಾಜಿಕ ನ್ಯಾಯದ ರೂವಾರಿ ಸಿದ್ದರಾಮಯ್ಯನವರ ಜನಪ್ರಿಯತೆ ಹೆಚ್ಚುತ್ತಿದೆ. ಮುಂಬರುವ ಚುನಾವಾಣೆಗಳಲ್ಲಿ ಬಿ.ಜೆ.ಪಿ.ಗೆ ಸೋಲಿನ ಭೀತಿ ಕಾಡುತ್ತಿದೆ. ಹೀಗಾಗಿ ಸುಳ್ಳುಗಳನ್ನು ಸೃಷ್ಟಿಮಾಡಿ ಸಾಮಾಜಿಕ ವಾತಾವರಣವನ್ನು ಕಲುಷಿತ ಗೊಳಿಸಲು ಬಿ.ಜೆ.ಪಿ. ಹುನ್ನಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿ,ಎಸ್,ಎಸ್,ಜಿಲ್ಲಾ ಸಂಚಾಲಕ ವಾಯ್,ಸಿ,ಮಯೂರ್ ಮಾತನಾಡಿ, ಅಪ್ಪಟ ಅಂಬೇಡ್ಕರವಾದಿ,ಸಾಮಾಜಿಕ ನ್ಯಾಯದ ರೂವಾರಿ, ಸಮಸಮಾಜದ ಕನಸುಗಾರ, ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಆಶಾವಾದಿ, ದೀನ ದಲಿತರ ಬಂಧು ಸಿದ್ದರಾಮಯ್ಯನವರನ್ನು ದಲಿತ ವಿರೋಧಿಯೆಂದು ಹಸಿ ಸುಳ್ಳು ಸುದ್ದಿ ಇಂಥ ನಾಯಕರ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತಿವೆ. ಅಷ್ಟಕ್ಕೂ ಸೌಜನ್ಯ ದಲಿತರಾಗಿರುವ ಸಿದ್ದರಾಮಯ್ಯನವರ ದಲಿತ ವಿರೋಧಿಗಳನ್ನಾಗಲು ಹೇಗೆ ಸಾಧ್ಯ? ಎಂಬ ಸಾಮಾನ್ಯ ಪ್ರಜ್ಞೆ ಬಿ.ಜೆ.ಪಿ. ನಾಯಕರಿಗಿಲ್ಲ. ಅಲ್ಲದೆ ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ ಅನೇಕ ಪ.ಜಾ, ಪ.ಪಂಗಡದ ಕಲ್ಯಾಣ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಈ ಸಾಮಾಜಿಕ ನ್ಯಾಯದ ವಿರೋಧಿ ಬಿ.ಜೆ.ಪಿಯವರು ಅರ್ಥ ಮಾಡಿಕೊಳ್ಳಬೇಕಾಗಿದೆ.

- Advertisement -

ಸಂವಿಧಾನ ಪ್ರತಿ ಸುಟ್ಟು ಪ್ರತಿಭಟಿಸುವಾಗ ಮೂಕ ಪ್ರೇಕ್ಷಕರಂತೆ ಕುಳಿತ ಬಿ,ಜೆ,ಪಿ,ಯ ಎಸ್,ಸಿ,ಎಸ್,ಟಿ, ನಾಯಕರಿಗೆ ಏನನ್ನಬೇಕು ಎಂಬ ಸಂದೇಹ ನಮಗೆ ಕಾಡುವುದು ಸಹಜವಾಗಿದೆ ಹೀಗಾಗಿ ಇಷ್ಟೆಲ್ಲಾ ಎಸ್,ಸಿ,ಎಸ್,ಟಿ,ಗಳು ಕಲ್ಯಾಣ ಬಯಸುವ ದಲಿತರ ಧ್ವನಿ ಸಿದ್ದರಾಮಯ್ಯ ವ್ಯಕ್ತಿತ್ವಕ್ಕೆ ಚ್ಯುತಿ ತರುವವರ ಮೇಲೆ ಯೋಗ್ಯ ಕಾನೂನು ಕ್ರಮ ಜರುಗಿಸ ಅವರ ಮೇಲೆ ಕ್ರಿಮಿನಲ್ ಕೇಸು ಹಾಕಬೇಕು ಎಂದು ಆಗ್ರಹಿಸಿದರು.

ಈ ಸಂರ್ದಭದಲ್ಲಿ ಡಿಎಸ್ ಎಸ ಜಿಲ್ಲಾ ಸಂಚಾಲಕ ಚಂದ್ರಕಾಂತ ಸಿಂಗೆ, ಸಂತೋಷ ಹರನಾಳ, ಅಶೋಕ ಬಿಜಾಪುರ, ರವಿ ಆಲಹಳ್ಳಿ, ಡಿ,ಎನ್,ಕುರಿಮನಿ, ಸೋಮು ರಾಠೋಡ, ಧರ್ಮರಾಜ ಯಂಟಮನ, ಹಾಸೀಮ್ ಆಳಂದ್, ಬಸೀರ ಮರ್ತೂರ, ಇರ್ಫಾನ್ ಬಾಗವಾನ, ಭೀಮು ವಾಲೀಕಾರ, ನಬಿ ಆಲಗೂರ ಸೇರಿದಂತೆ ಹಲವರು ಇದ್ದರು

- Advertisement -
- Advertisement -

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group