ಜ್ಯೋತಿ ಬದಾಮಿ ಯವರ ‘ಸವಿತಾ’ ಕೃತಿ ಲೋಕಾರ್ಪಣೆ ಗೊಂಡಿತು

Must Read

ಸವಿತಾ; ಜಗದೊಳಗೆ ನೀನು ನಿನ್ನೊಳಗೆ ಜಗತ್ತು

ಕೃತಿ ರವಿವಾರ ಈಶ್ವರಿ ಬ್ರಹ್ಮ ಕುಮಾರಿ ಸಭಾಂಗಣದಲ್ಲಿ ಪೂಜ್ಯನೀಯ ಬಿ ಕೆ ಅಂಬಿಕಾ ಅಕ್ಕ ಅವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಂಡಿತು.

ಕಥಾ ನಾಯಕಿ ಸವಿತಾ ಹಾಲಪ್ಪನವರ ತಾಯಿ ಅಕ್ಕಮ್ಮ ಯಾಳಗಿ,ಡಾ. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಇದೇ ಸಂದರ್ಭದಲ್ಲಿ ಕಥಾ ನಾಯಕಿ ಸವಿತಾ ಹಾಲಪ್ಪನವರ ತಂದೆ ಲಿ.ಅಂದಾನೆಪ್ಪ ಯಾಳಗಿ ಅವರ ಪುಣ್ಯ ಸ್ಮರಣೆಮಾಡಲಾಯಿತು.

ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕರಾದ ಶೈಲಜಾ ಭಿಂಗೆ ಇವರು ಕೃತಿಯ ಕುರಿತು ಮಾತನಾಡುತ್ತಾ, ಸವಿತಾ ಹಾಲಪ್ಪನವರ ಬೆಳಗಾವಿಯ ಮಗಳು ಈಗ ಜಗದೊಳಗೆ ನೀನು ನಿನ್ನೊಳಗೆ ಜಗತ್ತು ಅವಳು ಜಗದ ಕಣ್ಣಾಗಿ ಸ್ಮರಣೀಯಳಾಗಿ ನಿಂತಿದ್ದಾಳೆ.

ಈಗ ಆರು ವರ್ಷಗಳ ಹಿಂದೆ ಐರ್ಲೆಂಡ್ ನಲ್ಲಿ ೧೭ ವಾರದ ಗರ್ಭಿಣಿ ರಕ್ತ ಸ್ರಾವದಿಂದ ಪೀಡಿತಳಾಗಿ ಐರ್ಲೆಂಡಿನ ಗಾಲ್ವೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋದಾಗ ಗರ್ಭಪಾತ ಮಾಡುವಂತೆ ಗೋಗೆರೆದರೂ ವೈದ್ಯರು ಇದು ಕ್ರಿಶ್ಚಿಯನ್ ಧರ್ಮಕ್ಕೆ ವಿರುದ್ಧವಾಗಿ ನಾವಿಲ್ಲಿ ಗರ್ಭಪಾತ ಮಾಡುವಂತಿಲ್ಲ ಎಂದ ಕಾರಣ ಕೇವಲ ಐದು ಆರು ದಿನಗಳಲ್ಲಿ ಸವಿತಾಳ ದೇಹದಲ್ಲಿ ನಂಜೇರಿ ಸೂಕ್ತ ಚಿಕಿತ್ಸೆ ಸಿಗದೆ ಆಸ್ಪತ್ರೆ ಯಲ್ಲಿ ಮೃತಳಾದಳು.ಜಗತ್ತೇ ತಲ್ಲಣಗೊಂಡಿತ್ತು. ಆಕೆಯ ಸಾವಿಗೆ ಕಾರಣವಾದ ಐರ್ಲೆಂಡಿನ ಕಾನೂನು ಬದಲಾವಣೆಗೆ ನಾಂದಿ ಹಾಡಿತು. ಸವಿತಾಳ ಸಾವಿಗೆ ನ್ಯಾಯಾಲಯದಲ್ಲಿ ಜಯ ದೊರೆತ ರೋಚಕ ವಿವರಣೆಯನ್ನು ಲೇಖಕಿ ಜ್ಯೋತಿ ಬದಾಮಿ ಕಟ್ಟಿಕೊಟ್ಟಿದ್ದಾರೆ ಎಂದು ಪ್ರಶಂಸಿಸಿದರು.

ಶಾಂತಾ ಮಸೂತಿ ಹಾಗು ಜಯಶೀಲ ಬ್ಯಾಕೋಡ ಸವಿತಾ ಜಗತ್ತಿಗೆ ಪ್ರಥಮವಾಗಿ ಪರಿಚಯಿಸಿದ ಐರ್ಲೆಂಡಿನ ಪತ್ರಕರ್ತೆ ಕಿಟ್ಟಿ ಹಾಲೆಂಡರನ್ನು,ಪ್ರವೀಣ ಹಾಲಪ್ಪನವರ ಯಶಸ್ವಿಗೆ ಸಹಕರಿಸಿದ ಯಾಳಗಿ ಬಂಧುಗಳನ್ನು ಸ್ಮರಿಸುತ್ತಾ ಇತಿಹಾಸದಲ್ಲಿ ದಾಖಲೆಯಾಗಿ ಉಳಿಯುವಂತ ಗಟ್ಟಿ ಧ್ವನಿ ಯ ಅಪರೂಪದ ಕನ್ನಡದಲ್ಲು ಪ್ರಕಟವಾದ ಕೃತಿಯೆಂದು ಹೇಳಿದರು.

ಲೇಖಕಿ ಜ್ಯೋತಿ ಬದಾಮಿ ಕೃತಿ ರಚಿಸಲು ಮಾರ್ಗದರ್ಶನ ನೀಡಿದ ಯಾಳಗಿ ಬಂಧುಗಳಿಗೆ ಹಾಗು ಬ್ರಹ್ಮ ಕುಮಾರಿ ಅಂಬಿಕಾ ಅಕ್ಕ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಬ್ರಹ್ಮ ಕುಮಾರಿ ವಿದ್ಯಾಲಯದ ಮೂರು ಜಿಲ್ಲೆಗಳ ಮುಖ್ಯಸ್ಥ ರಾಗಿರುವ ಪೂಜ್ಯ ಅಂಬಿಕಾ ಅಕ್ಕ ಸವಿತಾ ಕೃತಿಯು ಕನ್ನಡಿಗ ಓದುಗರ ಕೈಗೆ ಕೈಪಿಡಿಯಾಗಲಿ ಎಂದು ಆಶೀರ್ವದಿಸಿದರು.

ಸುನಂದಾ ಎಮ್ಮಿ,ಎಮ್ ವೈ ಮೆಣಸಿನಕಾಯಿ, ಎಂ.ಆರ.ಉಳ್ಳಾಗಡ್ಡಿ, ಎಸ್ ಆರ್ ಹಿರೇಮಠ,ಆಶಾ ಯಮಕನಮರಡಿ ಲಲಿತಾ ಕ್ಯಾಸಣ್ಣವರ,ವಾಸಂತಿ ಮೇಳದ,ಪ್ರೇಮಾ ಪಾನಶೆಟ್ಟಿ ಲೇಖಕಿಯರ ಸಂಘ, ಲಿಂಗಾಯತ ಮಹಿಳಾ ಸಮಾಜದ ಸದಸ್ಯರು,ಯಾಳಗಿ ಬಂಧುಗಳು,ಸ್ನೇಹಿತರು ಬಳಗ ಹಾಗು ಭಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group