ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಕಲಿಸಿಕೊಡಬೇಕು – ಪ್ರಭುಸಾರಂಗದೇವ ಶ್ರೀಗಳು

Must Read

ಸಿಂದಗಿ: ಇಂದಿನ ವಿದ್ಯುನ್ಮಾನಕ್ಕೆ ಮಾರು ಹೋಗಿ ಸಂಸ್ಕಾರ ನಶಿಸಿ ಹೋಗಿ ಅನೇಕ ದುರ್ನಡೆತೆಗಳಿಗೆ ಕಾರಣವಾಗುತ್ತಿದೆ ಕಾರಣ ಶಿಕ್ಷಕರು ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲಿಯೇ ಶಿಸ್ತು ತನ್ಮಯತೆ ಧನಾತ್ಮಕ ಚಿಂತನೆಯ ಮೂಲಕ ಮಕ್ಕಳಿಗೆ ಮಾನವೀಯತೆಯ ಮೌಲ್ಯಗಳನ್ನು ಅವರ ಜೀವನದಲ್ಲಿ ತುಂಬಬೇಕು ಎಂದು ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಕರೆ ನೀಡಿದರು.

ತಾಲೂಕಿನ ಬಂದಾಳ ಗ್ರಾಮದ ಶ್ರೀ ಹುಡೇದ ಲಕ್ಷ್ಮೀ ಜಾತ್ರಾಮಹೋತ್ಸವ ನಿಮಿತ್ತವಾಗಿ 11 ದಿನಗಳವರೆಗೆ ಶ್ರೀ ನವಲಗುಂದ ಅಜಾತ ನಾಗಲಿಂಗ ಸ್ವಾಮಿಗಳ ಪುರಾಣ ಪ್ರವಚನವನ್ನು ಅವರು ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಪಾಠದ ಜೊತೆಗೆ ಉತ್ತಮ ಶಿಕ್ಷಣದೊಂದಿಗೆ ಸಂಸ್ಕೃತಿ ಸಂಸ್ಕಾರ ನೀಡಬೇಕಲ್ಲದೆ ಶರಣರ ಪುರಾಪ್ರವಚನದಲ್ಲಿ ಪಾಲ್ಗೊಳ್ಳುವಂತೆ ಶಿಕ್ಷಕರಿಗೆ ಕಿವಿ ಮಾತು ಹೇಳಿದರು.

ಕನ್ನೋಳ್ಳಿ ಹಿರೇಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ಗುರುವಿನ ಸನ್ಮಾರ್ಗದಲ್ಲಿ ನಡೆಯುವ ಮೂಲಕ ಗುರುವಿನ ಆಚಾರ ವಿಚಾರಗಳು ಜೀವನದಲ್ಲಿ ರೂಡಿಸಿಕೊಂಡು ಯುಗಾದಿ ಹಬ್ಬದ ದಿನ ನಾವು ಹೊಸ ವರ್ಷ ಆಚರಣೆ ಮಾಡುವ ಮೂಲಕ ತಾಯಿ ಲಕ್ಷ್ಮೀ ದೇವಿಯ ಉಡಿಯನ್ನು ತುಂಬ ಬೇಕು ಎಂದರು.

ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಂಕರಲಿಂಗಯ್ಯ ಹಿರೇಮಠ ಮಾತನಾಡಿ, ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರಿಗೆ ಸಂಸ್ಕಾರ ನೀಡಿ ವಿದ್ಯೆ ಧೈರ್ಯ ಉತ್ತಮ ಗುರುವಿನ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರಣೆ ನೀಡಬೇಕು ಎಂದರು.

ಗರೂರ(ಬಿ) ಗ್ರಾಮದ ಶಿವಲಿಂಗಯ್ಯ ಶಾಸ್ರ್ತೀಗಳು ಪುರಾಣಿಕಮಠ ಅವರು ಶ್ರೀನವಲಗುಂದ ಅಜಾತನಾಗಲಿಂಗ ಸ್ವಾಮಿಗಳ ಪುರಾಣ ಪ್ರವಚನಕಾರರಾಗಿ ಆಗಮಿಸಿ ಅವರು ಮಾತನಾಡಿ, ಮಾಸಿದ ಮನಸು ತೊಳೆಯುವ ಶಕ್ತಿ ಶರಣ ಸಂತರ ಮಾಹಾ ಪುರುಷರ ಮಾಹಾ ಸ್ವಾಮಿಗಳ ಜೀವನ ಚರಿತ್ರೆ ಆಲಿಸುವದರಿಂದ ತಮ್ಮ ಜೀವನ ಪಾವನವಾಗುತ್ತದೆ ಆದ್ದರಿಂದ ಗ್ರಾಮದಲ್ಲಿ ಸಾಗಿಬರುವ ಶ್ರೀ ನವಲಗುಂದ ಅಜಾತನಾಗಲಿಂಗ ಸ್ವಾಮಿಗಳು ಜೀವನ ಚರಿತ್ರೆ ಆಲಿಸುವ ಮೂಲಕ ಜ್ಞಾನಿಗಳ ಮಾತು ಮನದ ಅಂತರಂಗವನ್ನು ಪರಿಶುದ್ದಗೊಳಿಸಿ ಅಜ್ಞಾನವನ್ನು ಕಳೆಯುತ್ತದೆ ಎಂದರು.

ಗುರುಪಾದಯ್ಯ ಹಿರೇಮಠ ಗ್ರಾ ಪಂ ಅಧ್ಯಕ್ಷರ ಪ್ರತಿನಿಧಿ ಕೇಶುರಾಯ ಮಕಣಾಪೂರ. ನಿವೃತ ಕೃಷಿ ಅಧಿಕಾರಿ ವಿಶ್ವಾನಾಥ ಕುರಡೆ. ದೇವಸ್ಥಾನದ ಅರ್ಚಕ ರಾಮಪ್ಪ ಬಿರಾದಾರ. ಗ್ರಾ ಪಂ ಉಪಾಧ್ಯಕ್ಷ ಜಟ್ಟೆಪ್ಪ ಉಕ್ಕಲಿ. ಗ್ರಾ ಪಂ ಸದಸ್ಯರಾದ ಗೊಲ್ಲಾಳಪ್ಪ ಬಿರಾದಾರ. ಮಲ್ಲಿಕಾರ್ಜುನ ಬೂದಿಹಾಳ. ಶ್ರೀಶೈಲ ಕುಂಬಾರ. ಅಶೋಕ ತಳವಾರ ಸೇರಿದಂತೆ ಹಲವರು ವೇದಿಕೆ ಮೇಲೆ ಇದ್ದರು.

ಶಿಕ್ಷಕ ಸಾಹಿತಿ ಬಸವರಾಜ ಅಗಸರ ಸ್ವಾಗತಿಸಿದರು. ನಿಂಗನಗೌಡ ಬಿರಾದಾರ ನಿರೂಪಿಸಿ ವಂದಿಸಿದರು.

ರೇವಣಸಿದ್ದ ದೇಸಾಯಿ ಕಲ್ಲೂರ .ಸಿದ್ದಯ್ಯಸ್ವಾಮಿ ಪಡದಳ್ಳಿ ಸಂಗೀತ ಸೇವೆ ನೇರವೇರಿಸಿದರು. ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಶೈಲ ಬಿರಾದಾರ. ಶರಣಪ್ಪ ಬಿರಾದಾರ ಪ್ರಸಾದ ಸೇವೆ ಮಾಡಿದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group