Homeಸುದ್ದಿಗಳುಇಂಗ್ಲಿಷ ಕಲಿಕೆ ಮತ್ತು ವ್ಯಕ್ತಿತ್ವ ವಿಕಸನದ ಸಮಾರೋಪ ಸಮಾರಂಭ ಕಾರ್ಯಕ್ರಮ

ಇಂಗ್ಲಿಷ ಕಲಿಕೆ ಮತ್ತು ವ್ಯಕ್ತಿತ್ವ ವಿಕಸನದ ಸಮಾರೋಪ ಸಮಾರಂಭ ಕಾರ್ಯಕ್ರಮ

spot_img

ಮೂಡಲಗಿ: ವಿದ್ಯಾರ್ಥಿಗಳು ಹತ್ತು ದಿನದ ಇಂಗ್ಲಿಷ ಕಲಿಕೆ ಮತ್ತು ವ್ಯಕ್ತಿತ್ವ ವಿಕಸನದ ತರಬೇತಿಯಲ್ಲಿ ಕಲಿತ ಪಾಂಡಿತ್ಯವನ್ನು ತಮ್ಮ ಜೀವನದಲ್ಲಿ ಇಂಗ್ಲೀಷಿನ ಬಳಕೆ ಹಾಗೂ ವ್ಯಕ್ತಿತ್ವ ವಿಕಸನದ ಮೂಲಕ ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಂಡು ತಂದೆ ತಾಯಿಗಳಿಗೆ ಒಳ್ಳೆಯ ಮಕ್ಕಳಾಗಿ, ಗುರುಗಳಿಗೆ ಒಳ್ಳೆಯ ವಿದ್ಯಾರ್ಥಿಗಳಾಗಿ, ದೇಶಕ್ಕೆ ಒಳ್ಳೆಯ ಪ್ರಜೆಗಳಾಗಿ ದೇಶದ ಬೆಳವಣೆಗೆಗೆ ಶ್ರಮಿಸಬೇಕು ಎಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ. ಎಮ್.ಎಸ್.ಕುಲಕರ್ಣಿ ಹೇಳಿದರು.

ಅವರು ತಾಲೂಕಿನ ಅರಭಾವಿ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಹಾಗೂ ಪರಿಶಿಷ್ಟ ಜಾತಿಯ ಉಪ ಯೋಜನೆಯ ಅನುದಾನದ ಅಡಿಯಲ್ಲಿ ವಿದ್ಯಾರ್ಥಿಗಳಿಗಾಗಿ ಇಂಗ್ಲಿಷ ಕಲಿಕೆ ಮತ್ತು ವ್ಯಕ್ತಿತ್ವ ವಿಕಸನದ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ತರಬೇತಿಯಲ್ಲಿ ಉತ್ತಮವಾದ ವಿಷಯ ತಜ್ಞರನ್ನು ಆಯ್ಕೆ ಮಾಡಿಕೊಂಡಿರುತ್ತಾರೆ ಎಂದು ಶ್ಲಾಘಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಡೀನ್ ಡಾ|| ಎಮ್. ಜಿ. ಕೆರುಟಗಿ ಅವರು 10 ದಿನದ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡುತ್ತಾ, ಈ ಕಾರ್ಯಕ್ರಮಕ್ಕೆ ಅನುದಾನ ಪ್ರಾಯೋಜನೆ ಮಾಡಿದ ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವ ದೆಹಲಿಯ ಮತ್ತು ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದವರಿಗೆ ಕೃತಜ್ಞತೆ ಸಲ್ಲಿಸಿ ಪರಿಣಿತರಿಂದ ಇಂಗ್ಲಿಷ ಕಲಿಕೆ ಮತ್ತು ವ್ಯಕ್ತಿತ್ವ ವಿಕಸನದ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡಿರುತ್ತಾರೆ ಎಂದರು.

ಶಿಬಿರಾರ್ಥಿಗಳಾದ ಕುಮಾರಿ ಪದ್ಮಾವತಿ ಮತ್ತು ಸಚೀನ ಬೇಹರಾ ಅವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು ಡಾ. ಮಹಾಂತೇಶ ನಾಯ್ಕ ಬಿ.ಎನ್ ಅವರು 10 ದಿನದ ಕಾರ್ಯಾಗಾರದ ವಿಷಯವನ್ನು ಮಂಡಿಸಿದರು.

ಸಮಾರಂಭದಲ್ಲಿ ಮಹಾವಿದ್ಯಾಲಯದ ವಿಜ್ಞಾನಿಗಳಾದ ಡಾ. ಎಸ್.ಜಿ. ಪ್ರವೀಣಕುಮಠ, ಡಾ. ವಂದಾನಾ ವಿ., ಡಾ. ಚಂದ್ರಕಾಂತ ಕಾಂಬಳೆ, ಎಸ್.ಜಿ. ಅಂಟೀನ, ಸರಳಾ ಎಸ್. ಕಲ್ಯಾಣ ಹಾಗೂ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

ಸೀಮಾ ರಾಜಗೋಳಿ ಮತ್ತು ಕುಮಾರಿ ಸುಪ್ರೀತಾ ಪ್ರಾರ್ಥಿಸಿದರು, ಡಾ. ಸಚೀನಕುಮಾರ ನಂದಿಮಠ ನಿರೂಪಿಸಿದರು, ಡಾ. ಕಾಂತರಾಜು ವಿ ಸ್ವಾಗತಿಸಿದರು, ಡಾ. ಜೆ.ಎಸ್. ಹಿರೇಮಠ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group