spot_img
spot_img

ಅಶೌಚವಾದ ಶೌಚಾಲಯದ ಅವಸ್ಥೆ !

Must Read

- Advertisement -

ಎಲ್ಲರಿಗೂ ಚುನಾವಣಾ ಫಲಿತಾಂಶದ ಕಾತರ ಆದರೆ ಹಾದಿಗಲ್ಲು ಬಸ್ ನಿಲ್ದಾಣದಲ್ಲಿ ಇರುವ ಶೌಚಾಲಯ ಅವ್ಯವಸ್ಥೆಯ ಆಗರ. ಇದರ ಬಗ್ಗೆ ಗೆದ್ದು ಬಂದ  ರಾಜಕೀಯ ಮುಖಂಡರು ಕಾಳಜಿ ವಹಿಸುವವರೇ?

ಹಾದಿಗಲ್ಲು: ಮೇ 7 ರಂದು ಹಾದಿಗಲ್ಲು ಗ್ರಾಮದಲ್ಲಿ ಗಣಪತಿ ದರ್ಶನ ಪಡೆಯಲು ಸಾಗರದಿಂದ ಬಸ್ ಹತ್ತಿ  ತೀರ್ಥಹಳ್ಳಿ ಮಾರ್ಗವಾಗಿ ಸಾಗುತ್ತಾ ಸಿಗುವ ಹಾದಿಗಲ್ಲು  ಬಸ್ ನಿಲ್ದಾಣ ದಲ್ಲಿ ಇಳಿದು ಮೂತ್ರ ವಿಸರ್ಜನೆ ಮಾಡಲು ಬಸ್ ನಿಲ್ದಾಣದಲ್ಲಿ ಜಾಗ ಹುಡುಕಿದರೆ 2006 ರಲ್ಲಿ   ನಿರ್ಮಾಣವಾದ ಭವ್ಯವಾದ ಶೌಚಾಲಯ ಕಣ್ಣಿಗೆ ಬಿದ್ದಿತು.

ವಿಪರ್ಯಾಸ ಎಂದರೆ ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ನಾಯಕರು ಚುನಾವಣಾ ಪ್ರಚಾರ ಮಾಡುವುದರಲ್ಲಿ ಸಂಪೂರ್ಣ ಬ್ಯುಸಿ ಹಾಗೂ ಫಲಿತಾಂಶ ಕುರಿತು ರಾಜಕೀಯ ಪಕ್ಷಗಳ ಮುಖಂಡರಿಗೆ ತಲೆ ಬಿಸಿ. ಚುನಾವಣೆ ಫಲಿತಾಂಶ ಬರಲಿದೆ ಶನಿವಾರ ಮೇ 13 ರಂದು ಬಂದ ನಂತರ ಗದ್ದುಗೆ ಏರಿದವರಿಗೆ ಕುರ್ಚಿಯಲ್ಲಿ ಕುಳಿತು ಸರ್ಕಾರ ರಚನೆಯ ಬಿಸಿ. ಕುರ್ಚಿ ಕಳೆದುಕೊಂಡವರಿಗೆ ಕುರ್ಚಿ ಹೋದ ಬಗ್ಗೆ ವ್ಯಥೆ, ಕುರ್ಚಿ ಸಿಕ್ಕವರಿಗೆ ಸ್ವಚ್ಛತೆ ಬೇಕಾಗಿಲ್ಲ ಹಾಗೂ ಸೋತು ಸುಣ್ಣವಾದ ಪಕ್ಷಗಳು ಪರಿಸರ ಸಂರಕ್ಷಣೆ ಬಗ್ಗೆ  ತಲೆ ಕೆಡಿಸಿಕೊಳ್ಳುವುದಿಲ್ಲ.

- Advertisement -

ಇದು ರಾಜ್ಯ ಹಾಗೂ ರಾಷ್ಟ್ರ  ರಾಜಕಾರಣದಲ್ಲಿ ಸದಾ ಕಾಲ ಪ್ರಚಲಿತ ವಿದ್ಯಮಾನಗಳು…

ಅಂದಿನ ಅನುಭವವನ್ನು ಕೋಣಂದೂರು (ಹಾದಿಗಲ್ಲು ) ಗ್ರಾಮ ಪಂಚಾಯ್ತಿ ಗಮನಕ್ಕೆ ತರುವ ಪ್ರಯತ್ನ ಮಲೆನಾಡು  ಸ್ವಚ್ಟ ಸುಂದರ ನಗರ, ಆದರೆ ಅದಕ್ಕೆ ತದ್ವಿರುದ್ದವಾಗಿದೆ ಕೋಣಂದೂರು ಸಮೀಪವಿರುವ  ಹಾದಿಗಲ್ಲು  ಬಸ್ ನಿಲ್ದಾಣದ ಶೌಚಾಲಯ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಇದರತ್ತ ಗಮನ ಹರಿಸಲಿ ಎಂಬುದು  ಪತ್ರಿಕೆಯ ಆಶಯ. 2005 ಹಾಗು 2006 ರ ಅನುದಾನದಲ್ಲಿ ಪ್ರಯಾಣಿಕರಿಗೆ ಭವ್ಯವಾದ ಶೌಚಾಲಯ ನಿರ್ಮಾಣ ಮಾಡಲಾಗಿದ್ದು ಪ್ರಸ್ತುತ ದಿನಗಳಲ್ಲಿ ಅದು ಬಳಕೆಗೆ ಬರದೇ ಇರುವುದು ವಿಪರ್ಯಾಸ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಕ್ರಮ ಕೈಗೊಳ್ಳಬೇಕಾಗಿದೆ.


ಚಿತ್ರ: ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ

- Advertisement -
- Advertisement -

Latest News

ವಚನ ವಿಶ್ಲೇಷಣೆ : ಕಾಯದ ಜೀವದ ಹೊಲಿಗೆ

*ಕಾಯದ ಜೀವದ ಹೊಲಿಗೆ* ----------------------------------- ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು. ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ; ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ ಗುಹೇಶ್ವರಲಿಂಗದ...
- Advertisement -

More Articles Like This

- Advertisement -
close
error: Content is protected !!
Join WhatsApp Group