ಮೊಟ್ಟೆ ಗಲಾಟೆ ; ಭಾಲ್ಕಿ ಶ್ರೀಗಳ ವಿರುದ್ಧ ಕೇಸ್ ದಾಖಲಿಸಲು ಅಗ್ರಹ

Must Read

ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಮೊಟ್ಟೆ ಗಲಾಟೆ ನಡೆಯುತ್ತಿದೆ.ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕದ ಮಕ್ಕಳು ಅಪೌಷ್ಟಿಕತೆ ಯಿಂದ ಬಳಲಬಾರದು ಎಂದು ಶಾಲಾ ಮಕ್ಕಳಿಗೆ ಮಧ್ಯಾಹ್ನ ಊಟದ ಜೊತೆ ಒಂದು ಮೊಟ್ಟೆ ಕೊಡಬೇಕು ಎಂದು ತೀರ್ಮಾನ ಮಾಡಿದ್ದು, ಬಸವಣ್ಣನವರ ಬೀದರ್ ನಿಂದ ಮೊಟ್ಟೆ ಗಲಾಟೆ ಶುರುವಾಯಿತು.

ಬಸವ ತತ್ವ ರಾಷ್ಟ್ರೀಯ ಭಕ್ತರು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ಮೊಟ್ಟೆ ನೀಡುವ ಯೋಜನೆ ಕೈ ಬಿಡಬೇಕು ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಬಸವ ಶ್ರೀಗಳು ಮುಖ್ಯ ಮಂತ್ರಿ ಬೀದರಗೆ ಬಂದ ಸಂದರ್ಭದಲ್ಲಿ ಮನವಿ ಸಲ್ಲಿಸಿದರು ಅದಕ್ಕಾಗಿ ಭಾಲ್ಕಿ ಶ್ರೀಗಳ ಮೇಲೆ ಕೇಸ್ ಹಾಕಬೇಕು ಎಂದು ಬಿ ಎಸ್ ಪಿ ರಾಜ್ಯ ಕಾರ್ಯದರ್ಶಿ ಅಂಕುಶ ಗೋಖಲೆ ಆಗ್ರಹ ಮಾಡಿದ್ದಾರೆ.

ಶಾಲಾ ಮಕ್ಕಳಿಗೆ ಮೊಟ್ಟೆ ನಿಷೇಧಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಭಾಲ್ಕಿ ಹಿರೇಮಠದ ಹಿರಿಯ ಸ್ವಾಮೀಜಿ ಡಾ.ಬಸವಲಿಂಗ ಪಟ್ಟದ್ದೇವರ ವಿರುದ್ಧ ಮಕ್ಕಳ ಆಹಾರ ಹಕ್ಕು ಕಿತ್ತುಕೊಳ್ಳುವ ಕಾಯ್ದೆ ಅಡಿ ಕೇಸ್ ದಾಖಲಿಸಬೇಕು ಎಂದು ಬಿ.ಎಸ್.ಪಿ ರಾಜ್ಯ ಕಾರ್ಯದರ್ಶಿ ಅಂಕುಶ ಎಲ್.ಗೋಖಲೆ ಶುಕ್ರವಾರ ಪತ್ರಿಕಾಗೋಷ್ಠಿ ಮೂಲಕ ಆಗ್ರಹಿಸಿದರು.

ಇತ್ತ ಮೊಟ್ಟೆ ನಿಷೇಧಿಸುವಂತೆ ಬೆಳಗಾವಿ ಅಧಿವೇಶನದಲ್ಲಿ ಜಿಲ್ಲೆಯ ಲಿಂಗಾಯತ ಶಾಸಕರ ಮುಖಾಂತರ ಒತ್ತಡ ಹೇರುವುದಾಗಿ ಭಾಲ್ಕಿಶ್ರೀಗಳು ತಿಳಿಸಿದ್ದಾರೆ. ಭಾಲ್ಕಿ ಸ್ವಾಮೀಜಿ ಪ್ರಕಾರ ಮೊಟ್ಟೆ ತಿನ್ನುವವರು ರಕ್ಕಸರೇ ಎಂದು ಪ್ರಶ್ನಿಸಿರುವ ಗೋಖಲೆ ಜಿಲ್ಲೆಯ ಶಾಸಕರಾದ ರಾಜಶೇಖರ ಬಿ.ಪಾಟೀಲ, ಈಶ್ವರ ಖಂಡ್ರೆ ಮತ್ತು ಶರಣು ಸಲಗರ್ ಅವರು ಕೇವಲ ಸಸ್ಯಹಾರಿಗಳ ಮತ ಪಡೆದು ಶಾಸಕರಾಗಿದ್ದಾರೋ ಹೇಗೆ ? ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿ, ಭಾಲ್ಕಿ ಶ್ರೀಗಳು ಬಸವಣ್ಣನವರ ಮುಖವಾಡ ಧರಿಸಿರುವ ಮನುವಾದಿಗಳು ಎಂದು ಗೋಖಲೆ ಗಂಭೀರ ಆರೋಪಿಸಿದರು. ವಿರೋಧದ ಬಗ್ಗೆ ತಪ್ಪೊಪ್ಪಿಗೆ ಕೇಳುವವರೆಗೆ ಹಂತಹಂತವಾಗಿ ನಮ್ಮ ಪ್ರತಿಭಟನೆ ಮುಂದುವರೆಯುತ್ತದೆ ಎಂದು ತಿಳಿಸಿದರು.

ಈ ಮೊಟ್ಟೆ ಗಲಾಟೆಯ ಬಗ್ಗೆ ರಾಜ್ಯ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಕಾದು ನೋಡಬೇಕು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಐತಿಹಾಸಿಕ ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆ ಒಂದು ಭೇಟಿ

ನಾವು ಶಿರಸಿಯಿಂದ ಬನವಾಸಿ ಬಸ್ಸು ಹತ್ತಿದಾಗಲೇ ನಾಲ್ಕೂವರೆ ಆಗಿತ್ತು. ಶಾಲೆ ಬಿಡುವ ವೇಳೆ ಬಸ್ ರಷ್ ಆಗಿತ್ತು. ಬನವಾಸಿಯಲ್ಲಿ ಇಳಿದಾಗ ಐದೂವರೆ ಆಗಿತ್ತು. ಕ್ಯಾಂಟಿನ್‌ನಲ್ಲಿ ಟೀ...

More Articles Like This

error: Content is protected !!
Join WhatsApp Group